ಲೇಹ್: ಲಡಾಖ್‌ನ ಹಲವು ಗ್ರಾಮಗಳಲ್ಲಿ ಭಾನುವಾರ ಸಂಭವಿಸಿದ ಪ್ರವಾಹದಿಂದಾಗಿ ಒಂದು ಸೇತುವೆ ಮತ್ತು ಬೆಳೆಗಳಿಗೆ ಹಾನಿಯಾಗಿವೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ರುಂಬಕ್ ಗ್ರಾಮದ ಜಾನ್ಸ್‌ಕರ್ ನದಿಯ ತಡೆಯಿಂದಾಗಿ ಕೃತಕ ಸರೋವರ ನಿರ್ಮಾಣವಾಗಿತ್ತು. ಇದು ಭಾನುವಾರ ಮುಂಜಾನೆ ಏಕಾಏಕಿ ಪ್ರವಾಹನ್ನು ಉಂಟು ಮಾಡಿ, ರುಂಬಕ್ ಸೇತುವೆ ಮತ್ತು ಸಮೀಪದ ಗ್ರಾಮಗಳಲ್ಲಿ ಬೆಳೆದಿದ್ದ ಬೆಳೆಗಳಿಗೆ ಹಾನಿಯುಂಟು ಮಾಡಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಡಿಡಿಎಂಎ) ಸಿಇಒ ಸೋನಂ ಚೋಸ್ಜೊರ್ ತಿಳಿಸಿದ್ದಾರೆ.

ರಕ್ಷಣಾ ತಂಡ ಸ್ಥಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಇಲ್ಲಿಯವರೆಗೂ ಈ ಪ್ರವಾಹದಿಂದ ಸಾವು ನೋವು ಸಂಭವಿಸಿದ ವರದಿಯಾಗಿಲ್ಲ ಎಂದು ಅವರು ಹೇಳಿದ್ದಾರೆ.

ರುಂಬಕ್, ಜಿಂಗ್‌ಚೆನ್, ಯುರುತ್ಸೆ ಮತ್ತು ರಮ್‌ಚುಂಗ್‌ಗೆ ಸಂರ್ಪಕಿಸುವ ಮುಖ್ಯ ರಸ್ತೆಗಳಲ್ಲಿ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಹಿರಿಯ ಅಧಿಕಾರಿಗಳು ಮೇಲ್ವಿಚಾರಣೆ ನಡೆಸುತ್ತಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅವರು ಹೇಳಿದ್ದಾರೆ.

ಸಿಂಧೂ ನದಿಯಲ್ಲೂ ಪ್ರವಾಹ ಉಂಟಾಗುವ ಸಾಧ್ಯತೆ ಇದ್ದು, ಯಾವುದೇ ಪರಿಸ್ಥಿತಿ ಎದುರಿಸಲು ಸಿದ್ಧರಾಗಿರುವಂತೆ ಡಿಡಿಎಂಎ ಭಾನುವಾರ ಜನರಿಗೆ ಎಚ್ಚರಿಕೆ ನೀಡಿದೆ.

ಮೋದಿ ಸೇನೆ ಕಳಿಸಿದ್ದರಿಂದ ಚೀನಾ ಲಡಾಖ್ನಿಂದ ಹಿಮ್ಮೆಟ್ಟಿತು: ಜೆ.ಪಿ. ನಡ್ಡಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.