ಅಹಮದಾಬಾದ್: ಗುಜರಾತ್‌ನ ಭಾರತ-ಪಾಕಿಸ್ತಾನ ಕಡಲ ಗಡಿಯಲ್ಲಿ ಗಸ್ತು ನಡೆಸುತ್ತಿದ್ದ ಗಡಿ ಭದ್ರತಾ ಪಡೆ, ಅಕ್ರಮವಾಗಿ ನುಸುಳಿ ಬಂದಿದ್ದ ಪಾಕಿಸ್ತಾನದ ಮೂರು ದೋಣಿಗಳನ್ನು ಕಚ್‌ನ ಹರಾಮಿ ನಲ್ಲಾ ಕ್ರೀಕ್ ಪ್ರದೇಶದಿಂದ ಗುರುವಾರ ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತೀಯ ಸಾಗರದ ಗಡಿ ದಾಟಿ ಸುಮಾರು 15-20 ಕಿ.ಮೀ.ವರೆಗೆ ಬಂದಿದ್ದ ದೋಣಿಗಳು ಮತ್ತು ಕೆಲವು ಮೀನುಗಾರರ ಚಲನವಲನವನ್ನು ಗುರುತಿಸಿ, ಬಿಎಸ್‌ಎಫ್ ಗಸ್ತು ಪಡೆ ವಶಕ್ಕೆ ಪಡೆದಿದೆ.

ಭಾರತೀಯ ಮೀನುಗಾರರು ಕ್ರೀಕ್ ಪ್ರದೇಶಕ್ಕೆ ಪ್ರವೇಶಿಸುವುದನ್ನು ನಿರ್ಬಂಧಿಸಿದಾಗ, ಪಾಕಿಸ್ತಾನಿ ಮೀನುಗಾರರು ಮೀನು ಹಿಡಿಯಲು ಭಾರತದ ಸಾಗರದ ಕಡೆ ಪ್ರವೇಶಿಸುತ್ತಿದ್ದಾರೆ. ಹಲವು ಸಂದರ್ಭಗಳಲ್ಲಿ, ಈ ಮೀನುಗಾರರು ಬಿಎಸ್‌ಎಫ್ ಗಸ್ತು ದೋಣಿಗಳನ್ನು ಕಂಡೊಡನೆ ತಮ್ಮ ದೋಣಿಗಳನ್ನು ಬಿಟ್ಟು ಪಾಕಿಸ್ತಾನದ ಕಡೆಗೆ ಪರಾರಿಯಾಗುವುದು ಸಾಮಾನ್ಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.