ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಿಜೋರಾಂ|ಕ್ರೇಜಿ ಮೆಡಿಸಿನ್‌ ಕುಖ್ಯಾತಿಯ ₹40 ಕೋಟಿ ಮೌಲ್ಯದ ‘ಯಬಾ’ ಡ್ರಗ್ಸ್ ವಶ

Published : 20 ಸೆಪ್ಟೆಂಬರ್ 2024, 14:28 IST
Last Updated : 20 ಸೆಪ್ಟೆಂಬರ್ 2024, 14:28 IST
ಫಾಲೋ ಮಾಡಿ
Comments

ಐಜ್ವಾಲ್: ಕ್ರೇಜಿ ಮೆಡಿಸಿನ್ ಎಂದೇ ಕುಖ್ಯಾತಿ ಪಡೆದಿರುವ ‘ಯಬಾ’ ಮಾದಕವಸ್ತುವಿನ 4 ಲಕ್ಷ ಮಾತ್ರೆಗಳನ್ನು ಗಡಿ ಭದ್ರತಾ ಪಡೆಯ(ಬಿಎಸ್‌ಎಫ್) ಯೋಧರು ವಶಕ್ಕೆ ಪಡೆದಿದ್ದಾರೆ.

₹40 ಕೋಟಿ ಮೌಲ್ಯದ ಈ ಮಾದಕ ದ್ರವ್ಯವನ್ನು ಮಿಜೋರಾಂನ ಭಾರತ–ಬಾಂಗ್ಲಾದೇಶದ ಗಡಿಯಲ್ಲಿ ವಶಕ್ಕೆ ಪಡೆಯಲಾಗಿದೆ.

ರಾಜ್ಯದ ವಿಶೇಷ ನಾರ್ಕೊಟಿಕ್ಸ್ ಪೊಲೀಸ್ ಜೊತೆ ಜಂಟಿ ಕಾರ್ಯಾಚರಣೆ ನಡೆಸಿದ ಬಿಎಸ್‌ಎಫ್, ಐಜ್ವಾಲ್ ಜಿಲ್ಲೆಯ ಸೆಲಿಂಗ್ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 6ರಲ್ಲಿ ಟ್ರಕ್ ತಡೆದು ತಪಾಸಣೆ ನಡೆಸಿದಾಗ ಮಾದಕ ದ್ರವ್ಯ ಪತ್ತೆಯಾಗಿದೆ.

‘ಮಾದಕ ದ್ರವ್ಯ ಸಾಗಣೆ ಕುರಿತಂತೆ ಖಚಿತ ಮಾಹಿತಿ ಆಧಾರದ ಮೇರೆಗೆ ಕಾರ್ಯಾಚರಣೆ ನಡೆಸಲಾಯಿತು’ಎಂದು ಬಿಎಸ್‌ಎಫ್‌ನ ಹಿರಿಯ ಅಧಿಕಾರಿ ಹೇಳಿದ್ದಾರೆ.

ಒಟ್ಟು 40 ಪ್ಯಾಕೆಟ್‌ಗಳಲ್ಲಿ 4 ಲಕ್ಷ ಮೆಥಾಂಫೆಟಮೈನ್ ಮಾತ್ರೆಗಳನ್ನು(ಯಬಾ) ಟ್ರಕ್‌ನ ಡ್ರೈವರ್ ಕ್ಯಾಬಿನ್‌ನ ಸೀಲಿಂಗ್‌ನಿಂದ ವಶಕ್ಕೆ ಪಡೆಯಲಾಗಿದೆ. ವಶಕ್ಕೆ ಪಡೆದ ಮಾದಕ ವಸ್ತುವಿನ ಮೌಲ್ಯ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು ₹40 ಕೋಟಿಯಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಥಾಯ್ಲೆಂಡ್‌ನಲ್ಲಿ ಇದನ್ನು ‘ಕ್ರೇಜಿ ಮೆಡಿಸಿನ್’, ‘ಮ್ಯಾಡ್‌ನೆಸ್ ಡ್ರಗ್’ಅಥವಾ ‘ನಾಜಿ ಸ್ಪೀಡ್’ ಎಂಬಿತ್ಯಾದಿ ಹೆಸರುಗಳಿಂದ ಕರೆಯಲಾಗುತ್ತದೆ. ಯಬಾ ಮಾತ್ರೆಯು ಪ್ರಮುಖವಾಗಿ ಮೆಥಾಂಫೆಟಮೈನ್ ಮತ್ತು ಕೆಫಿನ್ ಸೇರಿದಂತೆ ಉತ್ತೇಜಕಗಳ ಸಂಯೋಜನೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT