ಗುವಾಹಟಿ: ಮ್ಯಾನ್ಮಾರ್ ಸೈನಿಕರು ಗುರುವಾರ ನಡೆಸಿದ ಗುಂಡಿನ ದಾಳಿಯಲ್ಲಿ ಗಾಯಗೊಂಡಿರುವ ಮೂವರು ಮ್ಯಾನ್ಮಾರ್ ಪ್ರಜೆಗಳು ಗಡಿ ದಾಟಿ ಬಂದು ಮಣಿಪುರದ ವೈದ್ಯರಿಂದ ಜೀವ ಉಳಿಸುವಂತೆ ವೈದ್ಯಕೀಯ ಸಹಾಯ ಯಾಚಿಸಿದ್ದಾರೆ.

ಭಾರತದ ಗಡಿಯಲ್ಲಿರುವ ಮೊರೆಹ್‌ನಿಂದ ಧಾವಿಸಿ ಬಂದ ಈ ಮೂವರು ಗಾಯಾಳುಗಳು ಶುಕ್ರವಾರ ಬೆಳಿಗ್ಗೆ ಮಣಿಪುರದ ರಾಜಧಾನಿ ಇಂಪಾಲ್‌ನಲ್ಲಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಮೂವರೂ 29ರಿಂದ 32 ವರ್ಷದೊಳಗಿನವರು.

ಅಧಿಕಾರಿಗಳು ಇದನ್ನು ಅಧಿಕೃತವಾಗಿ ದೃಢಪಡಿಸಲು ನಿರಾಕರಿಸಿದರೂ, ಮೊರೆಹ್‌ನಿಂದ 5 ಕಿ.ಮೀ ದೂರದಲ್ಲಿರುವ ಮ್ಯಾನ್ಮಾರ್‌ನ ತಮುನಲ್ಲಿ ಗುರುವಾರ ಬೆಳಿಗ್ಗೆ ಪ್ರಜಾಪ್ರಭುತ್ವ ಪರ ಪ್ರತಿಭಟನಕಾರರ ಮೇಲೆ ನಡೆದಿರುವ ದಾಳಿಯಲ್ಲಿ ಮೂವರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಗುಂಡೇಟಿನಿಂದ ಗಾಯಗೊಂಡು ಗಡಿಗೆ ಬಂದಿದ್ದರು. ಅವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ. ರಾಜ್ಯ ಸರ್ಕಾರದಿಂದ ಅನುಮತಿ ಪಡೆದ ನಂತರ ಅವರಿಗೆ ಗಡಿ ಪ್ರವೇಶಿಸಲು ಅನುಮತಿ ನೀಡಲಾಯಿತು. ಅವರು ಗಂಭೀರ ಸ್ಥಿತಿಯಲ್ಲಿರುವುದರಿಂದ, ವೈದ್ಯಕೀಯ ಸಹಾಯಕ್ಕಾಗಿ ಬೇಡಿಕೊಂಡಿದ್ದರಿಂದ ಇದು ಕೇವಲ ಮಾನವೀಯ ನೆರವಿನ ದೃಷ್ಟಿಯಿಂದ ತೆಗೆದುಕೊಂಡ ನಿರ್ಧಾರವಾಗಿದೆ’ ಎಂದು ಮಣಿಪುರ ಸರ್ಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.