ಥಾಣೆ: ತರಗತಿ ವೇಳೆ ವಿದ್ಯಾರ್ಥಿಗಳನ್ನು ಬೆಂಚ್ ಮೇಲೆ ನಿಲ್ಲಿಸಿ ಕಬ್ಬಿಣ ಪಟ್ಟಿಯಿಂದ ಥಳಿಸಿದ್ದಕ್ಕೆ ಇಲ್ಲಿಯ ಖಾಸಗಿ ಶಾಲೆಯೊಂದರ ಇಬ್ಬರು ಮಹಿಳಾ ಶಿಕ್ಷಕಿಯರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಜುಲೈ 5 ರಂದು ಉಲ್ಲಾಸನಗರದ ಶಾಲೆಯ ಐದನೇ ತರಗತಿಯ 10 ವಿದ್ಯಾರ್ಥಿಗಳು ಶುಲ್ಕದ ಬಗ್ಗೆ ಘೋಷಣೆಯ ಪತ್ರಗಳನ್ನು ಮತ್ತು ಅವರ ಪೋಷಕರು ಸಹಿ ಮಾಡಿದ ಪೋಷಕರ ಶಿಕ್ಷಕರ ಸಂಘ (ಪಿಟಿಎ) ಸದಸ್ಯತ್ವ ದಾಖಲೆಯನ್ನು ತಂದಿರಲಿಲ್ಲ. ಹೀಗಾಗಿ ಕಬ್ಬಿಣದ ಪಟ್ಟಿಯಿಂದ ಶಿಕ್ಷಕಿಯೊಬ್ಬರು ಥಳಿಸಿದ್ದಾರೆ. ಪರಿಣಾಮ ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ. ಮತ್ತೊಬ್ಬ ಶಿಕ್ಷಕಿ ಕೂಡ 12 ವರ್ಷದ ಬಾಲಕಿನಿಗೆ ಶಿಕ್ಷಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಲ್ಲದೆ ವಿದ್ಯಾರ್ಥಿಗಳನ್ನು ತರಗತಿ ಮುಗಿಯುವವರೆಗೂ ಬೆಂಚ್ ಮೇಲೆ ನಿಲ್ಲುವಂತೆ ಒತ್ತಾಯಿಸಲಾಗಿತ್ತು ಎಂದು ಸಂತ್ರಸ್ತ ವಿದ್ಯಾರ್ಥಿಯ ತಂದೆ ಮಾಹಿತಿ ನೀಡಿದ್ದಾರೆ. ಪೋಷಕರ ದೂರಿನ ಮೇರೆಗೆ ಶುಕ್ರವಾರ ಇಬ್ಬರು ಶಿಕ್ಷಕಿಯರ ಮೇಲೆ ಸೆಕ್ಷನ್ 75ರ ಅಡಿ ಪ್ರಕರಣ ದಾಖಲಿಸಲಾಗಿದೆ. ಎಫ್ಐಆರ್ನಲ್ಲಿ ಶಿಕ್ಷೆಗೆ ಕಾರಣವೇನು ಎಂಬುದನ್ನು ನಿಖರವಾಗಿ ಉಲ್ಲೇಖಿಸಿಲ್ಲ. ಯಾರನ್ನೂ ಬಂಧಿಸಲಾಗಿಲ್ಲ, ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.