ನವದೆಹಲಿ: ‘ಮಣಿಪುರದ ಇಬ್ಬರು ವಿದ್ಯಾರ್ಥಿಗಳ ಹತ್ಯೆ ಪ್ರಕರಣದ ಶಂಕಿತ ಪ್ರಮುಖ ಆರೋಪಿ ಪೌಲುನ್ಮಾಂಗ್ ಎಂಬಾತನನ್ನು ಸಿಬಿಐ ಪುಣೆಯಲ್ಲಿ ಬಂಧಿಸಿದೆ’ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

‘ಪೌಲುನ್ಮಾಂಗ್ನನ್ನು ಬುಧವಾರ ಬಂಧಿಸಿರುವ ಸಿಬಿಐನ ವಿಶೇಷ ತನಿಖಾ ದಳವು, ಗುವಾಹಟಿ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು. ನ್ಯಾಯಾಲಯವು ಆರೋಪಿಯನ್ನು ಇದೇ 16ರವರೆಗೆ ಸಿಬಿಐ ವಶಕ್ಕೆ ನೀಡಿದೆ’ ಎಂದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಕ್ಟೋಬರ್ 1ರಂದು ಪಾವೊಮಿನ್ಲುನ್ ಹಾಕಿಪ್ ಮತ್ತು ಸ್ಮಾಲ್ಸಾಮ್ ಹಾಕಿಪ್ ಎಂಬ ಇಬ್ಬರು ಪುರುಷರನ್ನು ಮತ್ತು ಲಿಂಗ್ನಿಚಾಂಗ್ ಬೈಟೆಕುಕಿ ಮತ್ತು ಟಿನ್ನೆಲ್ಹಿಂಗ್ ಹೆಂಥಾಂಗ್ ಎಂಬ ಇಬ್ಬರು ಮಹಿಳೆಯರನ್ನು ಬಂಧಿಸಿತ್ತು.

ಫಿಜಾಮ್ ಹೇಮಜಿತ್ (20), ಹಿಜಾಮ್ ಲಿಂಥೋಯ್ನ್ಗಂಬಿ (17) ಎಂಬ ಯುವಕ ಮತ್ತು ಯುವತಿ ಜುಲೈ 6 ರಂದು ನಾಪತ್ತೆಯಾಗಿದ್ದರು. ಅವರ ಮೃತದೇಹಗಳ ಚಿತ್ರಗಳು ಸೆ.25ರಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ ಬಳಿಕ ಇಂಫಾಲ್ನಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.