ನವದೆಹಲಿ (ಪಿಟಿಐ): ದೆಹಲಿ ನಗರದ ಎಲ್ಲ ಸರ್ಕಾರಿ ಶಾಲೆಗಳಲ್ಲಿಯೂ ಸಿಸಿಟಿವಿ ಕ್ಯಾಮೆರಾ ಅಳವಡಿಸುವ ಯೋಜನೆಗೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಶುಕ್ರವಾರ ಚಾಲನೆ ನೀಡಿದರು.

‘ಇದೊಂದು ಐತಿಹಾಸಿಕ ಮೈಲುಗಲ್ಲು’ ಎಂದು ಬಣ್ಣಿಸಿದ ಅವರು,ಈ ವರ್ಷದ ನವೆಂಬರ್ ವೇಳೆಗೆ ದೆಹಲಿಯ ಒಂದು ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುವುದು ಎಂದರು.

ಸಿಸಿಟಿವಿ ಕ್ಯಾಮೆರಾ ಅಳವಡಿಸುವಂತೆ ಖಾಸಗಿ ಶಾಲೆಗಳಿಗೆ ಈಗಾಗಲೇ ಆದೇಶ ನೀಡಿದ್ದು, ಅದನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನೋಡಿಕೊಳ್ಳಲಾಗುವುದು. ದೇಶದ ಶಾಲಾ ಶಿಕ್ಷಣ ಇತಿಹಾಸದಲ್ಲಿ ಇದೊಂದು ಪ್ರಮುಖ ಘಟ್ಟವಾಗಿದೆ. ತರಗತಿಯೊಳಗೆ ಏನು ನಡೆಯುತ್ತದೆ ಎಂಬುದನ್ನು ಮೊಬೈಲ್ನಲ್ಲಿ ಆಪ್ ಮೂಲಕ ಪಾಲಕರು ನೋಡಬಹುದು ಎಂದು ತಿಳಿಸಿದರು.

ಸಿಸಿಟಿವಿ ಕ್ಯಾಮೆರಾಗಳು ಮಕ್ಕಳ ಖಾಸಗಿತನವನ್ನು ಹಾಳುಮಾಡುತ್ತವೆ ಎಂಬ ಆರೋಪವನ್ನು ನಿರಾಕರಿಸಿದ ಅವರು, ’ದೆಹಲಿ ಶಾಲೆಗಳಲ್ಲಿ ಮುಂದಿನ ವರ್ಷ ಉತ್ತಮ ಫಲಿತಾಂಶ ದಾಖಲಿಸಲು ಈ ಕ್ರಮ ಸಹಾಯಕವಾಗಲಿದೆ. ಇದರಿಂದ ಖಾಸಗಿತನದ ಉಲ್ಲಂಘನೆ ಆಗುವುದಿಲ್ಲ. ಶಿಕ್ಷಣ, ಶಿಸ್ತು, ಕಲಿತು ಉತ್ತಮ ನಾಗರಿಕರಾಗುವ ಉದ್ದೇಶದಿಂದಮಕ್ಕಳು ಶಾಲೆಗೆ ಹೋಗುತ್ತಾರೆ. ಖಾಸಗಿತನಕ್ಕಾಗಿ ಅಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.