ಬಳ್ಳಾರಿ: ಕೋವಿಡ್ ಸಾಂಕ್ರಾಮಿಕ ನಿರ್ವಹಣೆಯಲ್ಲಿ ದೇಶದಾದ್ಯಂತ ಆಸ್ಪತ್ರೆಗಳಲ್ಲಿ ಏರ್ಪಟ್ಟಿರುವ ಸಹಾಯಕ ಆರೋಗ್ಯ ಸಿಬ್ಬಂದಿಯ ಕೊರತೆಯನ್ನು ನೀಗಿಸಲು ಕೇಂದ್ರ ಸರ್ಕಾರವು ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪಾಸಾದವರಿಗೆ ಉಚಿತವಾಗಿ ಅಲ್ಪಾವಧಿ ತರಬೇತಿ ನೀಡಲು ಮುಂದಾಗಿದೆ.

ಈ ಪ್ರಯತ್ನ ದೇಶದಲ್ಲಿ ಇದೇ ಮೊದಲು ಎನ್ನಲಾಗಿದ್ದು, ತರಬೇತಿ ಪಡೆದ ಕೂಡಲೇ ನಿರುದ್ಯೋಗಿ ಯುವಜನರಿಗೂ ಉದ್ಯೋಗಾವಕಾಶವೂ ದೊರಕಲಿರುವುದು ವಿಶೇಷ.

ಈ ನಿಟ್ಟಿನಲ್ಲಿ ಕೇಂದ್ರದ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ನೇತೃತ್ವದಲ್ಲಿ ದೇಶದ ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ಶುಕ್ರವಾರ ವೀಡಿಯೋ ಸಂವಾದ ನಡೆದಿದ್ದು, ಶೀಘ್ರದಲ್ಲೇ ತರಬೇತಿ ಮತ್ತು ಅಭ್ಯರ್ಥಿಗಳ ಆಯ್ಕೆ ಮಾರ್ಗಸೂಚಿ ಪ್ರಕಟವಾಗಲಿದೆ.

ತರಬೇತಿ ಏನು?; ಎಸ್‌ಎಸ್‌ಎಲ್‌ಸಿ ಪಾಸಾದವರಿಗೆ ಜನರಲ್ ಡ್ಯೂಟಿ ಅಸಿಸ್ಟೆಂಟ್, ಹೋಂ ಹೆಲ್ತ್ ಏಡ್ ,ಜನರಲ್ ಡ್ಯೂಟಿ ಅಸಿಸ್ಟೆಂಟ್, ಅಡ್ವಾನ್ಸ್ಡ್ ಮೆಡಿಕಲ್ ಎಕ್ವಿಪ್‍ಮೆಂಟ್ ಟೆಕ್ನಾಲಜಿ ಅಸಿಸ್ಟೆಂಟ್ ತರಬೇತಿ ಹಾಗೂ ಪಿಯುಸಿ (ವಿಜ್ಞಾನ) ಪಾಸಾದವರಿಗೆ ಎಮರ್ಜೆನ್ಸಿ ಮೆಡಿಕಲ್ ಟೆಕ್ನಿಷಿಯನ್-ಬೇಸಿಕ್, ಪ್ಲೇಬೇಟೋಮಿಸ್ಟ್ ಹಾಗೂ ಮೆಡಿಕಲ್ ರೆಕಾರ್ಡ್ ಅಸಿಸ್ಟಂಟ್ ತರಬೇತಿಯನ್ನು ನೀಡಲು ನಿರ್ಧರಿಸಲಾಗಿದೆ. ನರ್ಸಿಂಗ್ ಕ್ಷೇತ್ರದಲ್ಲಿ ಅನುಭವುಳ್ಳವರಿಗೂ ಅವಕಾಶ ಕಲ್ಪಿಸಲಾಗಿದೆ.

ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಸಚಿವಾಲಯವು ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆ 3.0ರ ಮೂಲಕ ತರಬೇತಿಯನ್ನು ಆಯೋಜಿಸಲಿದೆ.

ಒಂದು ತಿಂಗಳ ತರಬೇತಿ: ಈ ಕುರಿತು ’ಪ್ರಜಾವಾಣಿ’ಗೆ ಮಾಹಿತಿ ನೀಡಿದ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪಿ.ಎಸ್.ಹಟ್ಟಪ್ಪ, ‘ಶುಕ್ರವಾರ ದೇಶದಾದ್ಯಂತ ಜಿಲ್ಲಾಧಿಕಾರಿಗಳು ಹಾಗು ಕೌಶಲ್ಯಾಭಿವೃದ್ಧಿ ಅಧಿಕಾರಿಗಳೊಂದಿಗೆ ಆರೋಗ್ಯ ಸಚಿವಾಲಯವು ವಿಡಿಯೋ ಸಂವಾದ ನಡೆಸಿ ತರಬೇತಿ ಕುರಿತು ಮಾಹಿತಿ ನೀಡಿದೆ. ಒಂದು ತಿಂಗಳ ಅಲ್ಪಾವಧಿ ತರಬೇತಿ ಮೂಲಕ ಸಿಬ್ಬಂದಿ ಕೊರತೆಯನ್ನು ನೀಗಿಸುವ ವಿಶೇಷ ಪ್ರಯತ್ನ ಇದು’ ಎಂದು ಹೇಳಿದರು.

‘ನಮ್ಮ ಜಿಲ್ಲೆಯಲ್ಲಿ ತರಬೇತಿ ಪಡೆಯಲು ಆಸಕ್ತರಾಗಿರುವ ಅರ್ಹರನ್ನು ಗುರುತಿಸಿ ಅವರನ್ನು ಆಯ್ಕೆ ಮಾಡಲಾಗುವುದು. ಶೀಘ್ರದಲ್ಲೇ ಮಾರ್ಗಸೂಚಿ ಬರಲಿದ್ದು, ಅದರಂತೆ ಆಯ್ಕೆ ಮಾಡಲಾಗುವುದು. ತರಬೇತಿ ನೀಡಲು ಸಂಸ್ಥೆಗಳನ್ನು ಕೇಂದ್ರ ಸರ್ಕಾರವೇ ನಿಗದಿ ಮಾಡಲಿದೆ’ ಎಂದರು.

ಅರ್ಜಿ ಸಲ್ಲಿಸಲು ಜೂನ್ 4 ಕೊನೇ ದಿನ

ಬಳ್ಳಾರಿ: ಉಚಿತ ತರಬೇತಿ ಪಡೆಯಲು ಆಸಕ್ತರಾಗಿರುವ, 18 ರಿಂದ 45 ವರ್ಷದ ವಯಸ್ಸಿನ ಅರ್ಹರು https://forms.gle/VioGuzMU3m1LdZK39 ಗೂಗಲ್ ಫಾರ್ಮ್‌ನಲ್ಲಿ ಮಾಹಿತಿ ತುಂಬಿ ಸಲ್ಲಿಸಬಹುದು. ಹೆಚ್ಚಿನ ವಿವರಗಳಿಗಾಗಿ ಹಟ್ಟಪ್ಪ ಅವರನ್ನು (9945602881/8951451687) ಸಂಪರ್ಕಿಸಬಹುದು.

ಯುವಜನರಿಗೆ ಸಹಾಯಕ ಆರೋಗ್ಯ ಸಿಬ್ಬಂದಿ ತರಬೇತಿ ನೀಡುವ ಮೂಲಕ ಸಿಬ್ಬಂದಿ ಕೊರತೆ ನೀಗಿಸುವ ಮಹತ್ವದ ಪ್ರಯತ್ನವಿದು.
–ಪಿ.ಎಸ್.ಹಟ್ಟಪ್ಪ, ಜಿಲ್ಲಾ ಕೌಶಲ್ಯಾಧಿಕಾರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.