ನವದೆಹಲಿ: ಕೋವಿಡ್–19ನಿಂದ ದೇಶವೇ ತತ್ತರಿಸಿರುವ ನಡುವೆಯೆ, ಬಿತ್ತನೆ ಬೀಜಗಳನ್ನು ಒಳಗೊಂಡ ‘ನಿಗೂಢ ಪಾರ್ಸೆಲ್’ಗಳ ಬಗ್ಗೆ ಎಚ್ಚರ ವಹಿಸುವಂತೆ ಕೃಷಿ ಸಚಿವಾಲಯ ಎಚ್ಚರಿಕೆ ನೀಡಿದೆ. ‘ಜೈವಿಕ ಯುದ್ಧ’ದ ಭಾಗವಾಗಿ ದುಷ್ಕೃತ್ಯಕ್ಕೆ ಸಂಚು ನಡೆಸಿರಬಹುದು ಎಂಬ ಆತಂಕವನ್ನು ವ್ಯಕ್ತಪಡಿಸಿದೆ.

ಗೊತ್ತಿಲ್ಲದ ಮೂಲಗಳಿಂದ ಬರುವ ‘ನಿಗೂಢ ಪಾರ್ಸೆಲ್’ಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಸಚಿವಾಲಯ ಎಲ್ಲ ರಾಜ್ಯ ಸರ್ಕಾರಗಳಿಗೆ, ಕೃಷಿ ವಿಶ್ವವಿದ್ಯಾಲಯ, ಐಸಿಎಆರ್, ಸಂಶೋಧನಾ ಕೇಂದ್ರಗಳಿಗೆ ಹಾಗೂ ಬೀಜೋತ್ಪಾದನಾ ಸಂಘ–ಸಂಸ್ಥೆಗಳಿಗೆ ಸೂಚನೆ ನೀಡಿದೆ.

‘ಜಗತ್ತಿನ ವಿವಿಧ ರಾಷ್ಟ್ರಗಳಿಗೆ ಇಂತಹ ಸಂಶಯಾಸ್ಪದ ಪಾರ್ಸೆಲ್ಗಳು ತಲುಪಿರುವ ಬಗ್ಗೆ ವರದಿಗಳು ಬಂದಿವೆ. ಪರಿಸರ, ಕೃಷಿ ವ್ಯವಸ್ಥೆಗೆ ಹಾನಿಯನ್ನುಂಟು ಮಾಡಬಹುದಾದ, ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವಂತಹ ರೋಗಕಾರಕಗಳನ್ನು ಈ ಪಾರ್ಸೆಲ್ಗಳ ಮೂಲಕ ಹರಡುವ ಯತ್ನ ನಡೆಯುತ್ತಿದೆ’ ಎಂದು ಸಚಿವಾಲಯ ಹೇಳಿದೆ.

‘ಪಾರ್ಸೆಲ್ಗಳನ್ನು ಸ್ವೀಕರಿಸಿ, ಭವಿಷ್ಯದಲ್ಲಿ ಆಗುವ ಸಂಕಷ್ಟದ ನಿವಾರಣೆಗೆ ಭಾರಿ ವೆಚ್ಚ ಮಾಡುವ ಬದಲು, ಈಗಲೇ ಅವುಗಳನ್ನು ತಿರಸ್ಕರಿಸುವುದು ಉತ್ತಮ. ವಿಮಾನ ನಿಲ್ದಾಣ, ಬಂದರುಗಳಲ್ಲಿ ಸರಕುಗಳ ತಪಾಸಣೆ ಮತ್ತಷ್ಟೂ ಕಟ್ಟುನಿಟ್ಟಾಗಿ ನಡೆಸಬೇಕು’ ಎಂದು ಫೆಡರೇಷನ್ ಆಫ್ ಸೀಡ್ ಇಂಡಸ್ಟ್ರಿ ಆಫ್ ಇಂಡಿಯಾದ ಪ್ರಧಾನ ನಿರ್ದೇಶಕ ರಾಮ್ ಕೌಂಡಿಣ್ಯ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.