ಭುವನೇಶ್ವರ: ಕೆಲ ತಿಂಗಳ ಹಿಂದಿನವರೆಗೂ ಆಕೆ ಉದ್ಯೋಗದ ಹುಡುಕಾಟದಲ್ಲಿದ್ದರು. ಬ್ಯಾಂಕೊಂದರಲ್ಲಿ ಪ್ರೊಬೆಷನರಿ ಅಧಿಕಾರಿ ಅಥವಾ ಒಡಿಶಾ ಸರ್ಕಾರದಲ್ಲಿ ಉದ್ಯೋಗಿ ಆಗಬೇಕು ಎಂಬ ಗುರಿಯಷ್ಟೇ ಇತ್ತು.

ಮೆಕ್ಯಾನಿಕಲ್ ಎಂಜಿನಿಯರ್ ಪದವೀಧರೆಯಾಗಿದ್ದ ಆಕೆ, ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಲೋಕಸಭೆ ಚುನಾವಣೆ ಆಕೆಯ ಅದೃಷ್ಟ ಬದಲಿಸಿತು.

25 ವರ್ಷದ ‘ಚಂದ್ರಾಣಿ ಮುರ್ಮು’ ಈಗ ಲೋಕಸಭೆಯಲ್ಲಿ ಅತಿ ಕಿರಿಯ ಸಂಸದೆ. ಒಡಿಶಾದ ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರ ಕ್ಯೊಂಜಾರ್‌ನಿಂದ ಬಿಜೆಡಿಯ ಸಂಸದೆಯಾಗಿ ಆಯ್ಕೆಯಾಗಿದ್ದಾರೆ. ಎರಡು ಬಾರಿಯ ಸಂಸದ, ಬಿಜೆಪಿಯ ಅನಂತ ನಾಯಕ್ ವಿರುದ್ಧ 66,203 ಮತಗಳ ಅಂತರದಿಂದ ಗೆದ್ದಿದ್ದಾರೆ.

ಶೇ 33ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ನೀಡಬೇಕು ಎಂದುಕೊಂಡಿದ್ದ ಪ್ರಾದೇಶಿಕ ಪಕ್ಷವಾದ ಬಿಜೆಡಿಯು, ಸಾರ್ವಜನಿಕ ಜೀವನ ಪ್ರವೇಶಿಸಲು ಬಯಸುವ, ವಿದ್ಯಾವಂತ ಅಭ್ಯರ್ಥಿಯ ಹುಡುಕಾಟದಲ್ಲಿತ್ತು. ಈ ಅವಕಾಶವನ್ನು ಮುರ್ಮು ಬಳಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.