ರಾಯ್‌ಪುರ: ಛತ್ತೀಸ್‌ಗಢ ಸಚಿವ ಸಂಪುಟವನ್ನು ಶುಕ್ರವಾರ (ಇಂದು) ವಿಸ್ತರಿಸಲಾಗುತ್ತಿದ್ದು, 9 ಶಾಸಕರು ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಮುಖ್ಯಮಂತ್ರಿ ವಿಷ್ಣುದೇವ್ ಸಾಯ್ ತಿಳಿಸಿದ್ದಾರೆ.

ಆ ಮೂಲಕ ಸಚಿವ ಸಂಪುಟದ ಬಲ 12ಕ್ಕೆ ಏರಿಕೆಯಾಗಲಿದೆ.

ರಾಜಭವನದಲ್ಲಿ ಇಂದು ಬೆಳಿಗ್ಗೆ 11.45ಕ್ಕೆ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ.

ಬ್ರಿಜ್‌ಮೋಹನ್ ಅಗರವಾಲ್, ರಾಮ್‌ವಿಚಾರ್ ನೇತಮ್, ದಯಾಳ್‌ದಾಸ್ ಬಘೇಲ್, ಕೇದಾರ್ ಕಶ್ಯಪ್, ಲಖನ್‌ಲಾಲ್ ದೇವಾಂಗನ್, ಶ್ಯಾಮ್ ಬಿಹಾರಿ ಜೈಸ್ವಾಲ್, ಒ.ಪಿ ಚೌಧರಿ, ಟಂಕ್ ರಾಮ್ ವರ್ಮಾ ಮತ್ತು ಲಕ್ಷ್ಮೀ ರಾಜವಾಡೆ ಸಚಿವರಾಗಿ ಪ್ರಮಾಣ ಸ್ವೀಕರಿಸಲಿದ್ದಾರೆ.

ಆದಷ್ಟು ಬೇಗನೇ ಖಾತೆ ಹಂಚಿಕೆ ಮಾಡಲಾಗುವುದು. ಇನ್ನೊಂದು ಸಚಿವ ಸ್ಥಾನವನ್ನು ತುಂಬಲಾಗುವುದು ಎಂದು ಸಿಎಂ ವಿಷ್ಣುದೇವ್ ತಿಳಿಸಿದ್ದಾರೆ.
.ಛತ್ತೀಸ್‌ಗಢ: ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ನಿಯೋಜಿತ ಸಿಎಂ ವಿಷ್ಣುದೇವ್ ಸಾಯ್ .ಛತ್ತೀಸ್ಗಡ: ನಕ್ಸಲರ ಜೊತೆ ಗುಂಡಿನ ಚಕಮಕಿ, ಮೂವರು ಪೊಲೀಸರು ಹುತಾತ್ಮ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.