ಬಲ್ಲಿಯಾ, (ಉತ್ತರ ಪ್ರದೇಶ): ಎರಡು ವರ್ಷದ ಮಗುವೊಂದು ಆಕಸ್ಮಿಕವಾಗಿ ಚಾಲು ಮಾಡಿದ ಇ-ರಿಕ್ಷಾವೊಂದು ಗೋಡೆಗೆ ಡಿಕ್ಕಿಯಾಗಿದೆ. ಪರಿಣಾಮ ಮಗು ಸಾವಿಗೀಡಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಭಾನುವಾರ ಸಂಜೆ ಮುಕುಂದಪುರ ಗ್ರಾಮದ ಯಶ್ ಪಾಂಡೆ ತನ್ನ ಮನೆಯ ಹೊರಗೆ ಆಟವಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ.
.ಉತ್ತರ ಪ್ರದೇಶ | 10 ನವಜಾತ ಶಿಶುಗಳ ಸಾವು: ಮೂರು ಹಂತದ ತನಿಖೆಗೆ ಆದೇಶ.
ಸ್ಥಳದಲ್ಲಿ ನಿಲ್ಲಿಸಿದ್ದ ಇ-ರಿಕ್ಷಾದ ಕೀಲಿ ಇಗ್ನಿಷನ್ನಲ್ಲಿಯೇ ಉಳಿದಿತ್ತು. ಮಗು ವಾಹನವನ್ನು ಆಕಸ್ಮಿಕವಾಗಿ ಸ್ಟಾರ್ಟ್ ಮಾಡಿದ್ದು, ನಿಯಂತ್ರಣ ತಪ್ಪಿ ಪಕ್ಕದ ಮನೆಯ ಗೋಡೆಗೆ ಡಿಕ್ಕಿ ಹೊಡೆದಿದೆ ಎಂದು ಪೋಷಕರು ತಿಳಿಸಿದ್ದಾರೆ.

ಘಟನೆಯಲ್ಲಿ ಮಗುವಿಗೆ ತೀವ್ರ ಗಾಯಗಳಾಗಿದ್ದು, ಕೂಡಲೇ ಮನಿಯಾರ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಆದರೆ ದಾರಿ ಮಧ್ಯೆಯೇ ಮಗು ಸಾವಿಗೀಡಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನಮಗೆ ಯಾವುದೇ ಔಪಚಾರಿಕ ದೂರು ಬಂದಿಲ್ಲ ಎಂದು ಸ್ಟೇಷನ್ ಹೌಸ್ ಅಧಿಕಾರಿ ರತ್ನೇಶ್ ದುಬೆ ತಿಳಿಸಿದ್ದಾರೆ.
.ಉತ್ತರ ಪ್ರದೇಶ | ‘ಕುಟುಂಬ ರಾಜಕಾರಣ’: ಬಿಜೆಪಿ ವಿರುದ್ಧ ವಿಪಕ್ಷಗಳ ವಾಗ್ಬಾಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.