ಭಾನುವಾರ, 29 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಾಲೆಯ ಶ್ರೇಯಕ್ಕಾಗಿ ವಿದ್ಯಾರ್ಥಿ ಬಲಿ: ಹಾಥರಸ್‌ಗೆ ಮಕ್ಕಳ ಹಕ್ಕು ಆಯೋಗ ಭೇಟಿ

Published : 29 ಸೆಪ್ಟೆಂಬರ್ 2024, 2:36 IST
Last Updated : 29 ಸೆಪ್ಟೆಂಬರ್ 2024, 2:36 IST
ಫಾಲೋ ಮಾಡಿ
Comments

ಹಾಥರಸ್‌: ಶಾಲೆಯ ಏಳಿಗೆಗಾಗಿ ವಿದ್ಯಾರ್ಥಿಯನ್ನು ಬಲಿಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಕ್ಕಳ ಹಕ್ಕುಗಳ ಆಯೋಗವು ಹಾಥರಸ್‌ಗೆ ಶನಿವಾರ ಭೇಟಿ ನೀಡಿದೆ.

ದೇವೇಂದ್ರ ಶರ್ಮಾ ಅವರನ್ನೊಳಗೊಂಡ ತಂಡ, ಶಾಲೆ ಹಾಗೂ ಮೃತ ವಿದ್ಯಾರ್ಥಿಯ ಮನೆಗೆ ಭೇಟಿ ನೀಡಿ ಮಾಹಿತಿ ಪಡೆದಿದೆ. ಸ್ಥಳೀಯ ಪೊಲೀಸರು, ಆಡಳಿತಾಧಿಕಾರಿಗಳು ಮತ್ತು ಶಿಕ್ಷಣ ಇಲಾಖೆಯ ಸಿಬ್ಬಂದಿ ಸಹ  ಅವರೊಂದಿಗೆ ಇದ್ದರು.

ತುರ್ಸೆನ್‌ ಗ್ರಾಮದಲ್ಲಿರುವ ವಿದ್ಯಾರ್ಥಿಯ ಕುಟುಂಬದವರನ್ನು ಭೇಟಿಯಾದ ಆಯೋಗ, ಸೂಕ್ತ ತನಿಖೆಯ ಭರವಸೆ ನೀಡಿದೆ.

ಮಾಧ್ಯಮದವರೊಂದಿಗೆ ಮಾತನಾಡಿರುವ ಶರ್ಮಾ, ಪ್ರಕರಣ ಸಂಬಂಧ ಸಂಪೂರ್ಣ ತನಿಖೆ ನಡೆಸಲಾಗುವುದು. ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಲಿದೆ. ಶಾಲೆಗೆ ಬೀಗ ಜಡಿಯಲಾಗಿದೆ ಎಂದು ಹೇಳಿದ್ದಾರೆ.

ಸೋಮವಾರ ನಡೆದ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಮಾಲೀಕ, ನಿರ್ದೇಶಕ, ಪ್ರಾಂಶುಪಾಲ ಹಾಗೂ ಇಬ್ಬರು ಶಿಕ್ಷಕರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ವಿದ್ಯಾರ್ಥಿಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವುದು ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದಿದೆ.

ಡಿ.ಎಲ್ ಪಬ್ಲಿಕ್ ಸ್ಕೂಲ್‌ ಮಾಲೀಕ ಜಸೋಧನ್ ಸಿಂಗ್‌ 'ತಂತ್ರ ಆಚರಣೆ'ಗಳ ಬಗ್ಗೆ ನಂಬಿಕೆ ಹೊಂದಿದ್ದ. ಆತನಿಗೆ, ಶಾಲೆಯ ನಿರ್ದೇಶಕನೂ ಆದ ಪುತ್ರ ದಿನೇಶ್‌ ಬಘೇಲ್‌, ಶಾಲೆ ಹಾಗೂ ತಮ್ಮ ಕುಟುಂಬದ ಶ್ರೇಯಕ್ಕಾಗಿ ಮಗುವನ್ನು ಬಲಿಕೊಡಬೇಕು ಎಂದು ಹೇಳಿದ್ದ. ಅದರಂತೆ ಕೃತ್ಯ ನಡೆಸಿದ್ದರು.

ಪ್ರಾಂಶುಪಾಲ ಲಕ್ಷ್ಮಣ್ ಸಿಂಗ್‌, ಶಿಕ್ಷಕರಾದ ರಾಮ‍ಪ್ರಕಾಶ ಸೋಲಂಕಿ ಹಾಗೂ ವೀರ್‌ಪಾಲ್ ಸಿಂಗ್‌ ನೆರವಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT