ಲಖನೌ: ಉತ್ತರ ಪ್ರದೇಶದ ಶಾಲೆಯೊಂದರಲ್ಲಿ ವಿದ್ಯಾರ್ಥಿಯೊಬ್ಬನಿಗೆ ಥಳಿಸುವಂತೆ ಇತರ ಮಕ್ಕಳಿಗೆ ಶಿಕ್ಷಕಿಯೇ ಸೂಚಿಸಿರುವ ಘಟನೆ ನಡೆದಿದೆ. ಈ ಸಂಬಂಧ ಪತ್ರಕರ್ತ ಮೊಹಮ್ಮದ್ ಜುಬೇರ್ ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಶುಕ್ರವಾರ ಬರೆದುಕೊಂಡಿದ್ದಾರೆ.

ಘಟನೆಗೆ ಸಂಬಂಧಿಸಿದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಆದರೆ, ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (ಎನ್ಸಿಪಿಸಿಆರ್) ಆದೇಶಾನುಸಾರ ಡಿಲೀಟ್ ಮಾಡಲಾಗಿದೆ ಎಂದು ಜುಬೇರ್ ತಿಳಿಸಿದ್ದಾರೆ.

ವಿಡಿಯೊ ಹರಿದಾಡಿದ ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ನಡೆಯುತ್ತಿದೆ.

ಲಭ್ಯ ಮಾಹಿತಿ ಪ್ರಕಾರ ಮುಜಾಫರ್ನಗರ ಜಿಲ್ಲೆಯಲ್ಲಿ ಘಟನೆ ನಡೆದಿದೆ. ಆದರೆ, ಈ ಸಂಬಂಧ ಈವರೆಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ.

ಸಹಪಾಠಿಗಳಿಂದ ಥಳಿತಕ್ಕೊಳಗಾದ ಬಾಲಕನ ತಂದೆ ಇರ್ಶಾದ್ ಅವರನ್ನು ಸಂದರ್ಶಿಸಿರುವ ಜುಬೇರ್, ವಿಡಿಯೊವನ್ನು ಹಂಚಿಕೊಂಡಿದ್ದಾರೆ.

ಪೊಲೀಸ್ ಠಾಣೆ ಅಥವಾ ನ್ಯಾಯಾಲಯಕ್ಕೆ ಅಲೆಯುವುದು ಇಷ್ಟವಿಲ್ಲ. ಹಾಗಾಗಿ ದೂರು ನೀಡಿಲ್ಲ. ಅದರ ಬದಲಾಗಿ, ಶಾಲೆಯಲ್ಲಿ ತಮ್ಮ ಮಗನ ದಾಖಲಾತಿಯನ್ನು ರದ್ದುಪಡಿಸಿ, ಕಟ್ಟಿದ್ದ ದಾಖಲಾತಿ ಶುಲ್ಕವನ್ನು ವಸೂಲಿ ಮಾಡಿಕೊಂಡಿರುವುದಾಗಿ ಇರ್ಶಾದ್ ತಿಳಿಸಿರುವುದಾಗಿ ಜುಬೇರ್ ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.