ಬೀಜಿಂಗ್ (ಪಿಟಿಐ): ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಅವರು ತಮ್ಮ ಸರ್ಕಾರದ ಹಿರಿಯ ರಾಜತಂತ್ರಜ್ಞ ಷು ಫೀಹಾಂಗ್ ಅವರನ್ನು ಭಾರತಕ್ಕೆ ನೂತನ ರಾಯಭಾರಿಯನ್ನಾಗಿ ನೇಮಿಸಿದ್ದಾರೆ.

ಈ ಕುರಿತು ಸದ್ಯಕ್ಕೆ ಯಾವುದೇ ಅಧಿಕೃತ ಘೋಷಣೆಗಳನ್ನು ಚೀನಾ ಮಾಡಿಲ್ಲ. ಆದರೆ, ಚೀನಾದ ವಿದೇಶಾಂಗ ಸಚಿವಾಲಯವು ಪಿಟಿಐ ಸುದ್ದಿಸಂಸ್ಥೆಗೆ ಈ ಕುರಿತು ಮಾಹಿತಿ ನೀಡಿದೆ.

ಭಾರತ ಮತ್ತು ಚೀನಾ ನಡುವೆ ಪೂರ್ವ ಲಡಾಖ್ನಲ್ಲಿ ಸೇನಾ ಬಿಕ್ಕಟ್ಟು ತಲೆದೋರಿರುವ ಹಿನ್ನೆಲೆಯಲ್ಲಿ ಭಾರತಕ್ಕೆ ರಾಯಭಾರಿ ನೇಮಿಸುವುದನ್ನು ಚೀನಾ 18 ತಿಂಗಳು ವಿಳಂಬ ಮಾಡಿದೆ.

ಷು ಫೀಹಾಂಗ್ (60) ಅವರು ಈ ಮೊದಲು ಅಫ್ಗಾನಿಸ್ತಾನ ಮತ್ತು ರೊಮೇನಿಯಾ ದೇಶಗಳಿಗೆ ಚೀನಾದ ರಾಯಭಾರಿಯಾಗಿದ್ದರು. ಸದ್ಯದಲ್ಲೇ ಅವರು ದೆಹಲಿಗೆ ತೆರಳಲಿದ್ದಾರೆ ಎನ್ನಲಾಗಿದೆ. ಈ ಮೊದಲು ಭಾರತದ ಚೀನಾ ರಾಯಭಾರಿಯಾಗಿದ್ದ ಸನ್ ವೀಡಂಗ್ ಅವರ ಕರ್ತವ್ಯಾವಧಿಯು 2022ರ ಅಕ್ಟೋಬರ್ನಲ್ಲಿ ಮುಕ್ತಾಯವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.