ನವದೆಹಲಿ: ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ನ (ಸಿಐಎಸ್ಸಿಇ) 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಯ ಫಲಿತಾಂಶ ಸೋಮವಾರ ಪ್ರಕಟವಾಗಲಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಐಸಿಎಸ್ಇ (10ನೇ ತರಗತಿ) ಮತ್ತು ಐಸಿಎಸ್ (12ನೇ ತರಗತಿ) ಫಲಿತಾಂಶವನ್ನು ಬೆಳಿಗ್ಗೆ 11 ಗಂಟೆಗೆ ಪ್ರಕಟಿಸಲಾಗುವುದು ಎಂದು ಸಿಐಎಸ್ಸಿಇ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಕಾರ್ಯದರ್ಶಿ ಜೋಸೆಫ್ ಇಮ್ಯಾನುಯೆಲ್ ಹೇಳಿದ್ದಾರೆ. ಫಲಿತಾಂಶಗಳು ಮಂಡಳಿಯ ವೆಬ್ಸೈಟ್, ಕೆರಿಯರ್ ಪೋರ್ಟಲ್ ಮತ್ತು ಡಿಜಿಲಾಕರ್ನಲ್ಲಿ ಲಭ್ಯವಿರುತ್ತವೆ.

ಮಂಡಳಿಯು 10 ಮತ್ತು 12ನೇ ತರಗತಿಗಳಿಗೆ ‘ಕಂಪಾರ್ಟ್ಮೆಂಟ್’ ಪರೀಕ್ಷೆಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ಆದರೆ, ಅಂಕಗಳನ್ನು ಅಥವಾ ಶ್ರೇಣಿಗಳನ್ನು ಸುಧಾರಿಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳು ಗರಿಷ್ಠ ಎರಡು ವಿಷಯಗಳಲ್ಲಿ ‘ಇಂಪ್ರೂವ್ಮೆಂಟ್’ ಪರೀಕ್ಷೆ ತೆಗೆದುಕೊಳ್ಳಬಹುದು ಎಂದು ಎಮ್ಯಾನುಯೆಲ್ ವಿವರಿಸಿದ್ದಾರೆ. ‘ಇಂಪ್ರೂವ್ಮೆಂಟ್’ ಪರೀಕ್ಷೆಗಳು ಜುಲೈನಲ್ಲಿ ನಡೆಯಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.