ನವದೆಹಲಿ: ಹಿಂದುತ್ವ ಅಜೆಂಡಾವನ್ನು ಹೇರುವುದಕ್ಕಾಗಿ ಕೇಂದ್ರ ಸರ್ಕಾರ ಈ ಮಸೂದೆಯನ್ನು ಮಾಡಿದೆ. ಪೌರತ್ವ ತಿದ್ದುಪಡಿ ಮಸೂದೆ ಕಪಟದಿಂದ ಕೂಡಿದ್ದು ಎಂದು ಕಾಂಗ್ರೆಸ್ನ ಹಿರಿಯ ನಾಯಕ ಪಿ.ಚಿದಂಬರಂ ರಾಜ್ಯಸಭೆಯಲ್ಲಿ ಹೇಳಿದ್ದಾರೆ.

ಸಂವಿಧಾನದ ಪ್ರಕಾರ ಭಾರತೀಯ ಪೌರತ್ವವು ಹುಟ್ಟು ಮತ್ತು ವಂಶವನ್ನು ಆಧರಿಸಿದೆ. ಆದರೆ ಆಡಳಿತ ವರ್ಗಸ್ವೇಚ್ಛೆಯ ಉದ್ದೇಶದಿಂದ ಈ ಮಸೂದೆಯನ್ನು ಜಾರಿ ಮಾಡುತ್ತಿದೆಎಂದಿದ್ದಾರೆ ಚಿದಂಬರಂ.

ಅಸಮಾನತೆ, ಅಕ್ರಮ ವಿಂಗಡಣೆ ಮತ್ತು ಸೇಚ್ಛೆಯಿಂದ ಕೂಡಿದ ಈ ಮಸೂದೆಯು ಸಂವಿಧಾನದ 14ನೇ ವಿಧಿಯನ್ನು ಉಲ್ಲಂಘಿಸಿದೆ. ಹಾಗಾಗಿ ಈ ಬಗ್ಗೆ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು ಎಂದ ಚಿದಂಬರಂ ಇದು ಅಸಂವಿಧಾನಿಕ, ಇದನ್ನು ತೆಗೆದು ಹಾಕಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:Explainer | ಏನಿದು ಪೌರತ್ವ ತಿದ್ದುಪಡಿ ಮಸೂದೆ?

ಈ ಮಸೂದೆಗೆ ಕಾನೂನು ಸಲಹೆಯನ್ನು ನೀಡಿದವರು ಯಾರು? ಕಾನೂನು ಸಚಿವಾಲಯ? ಗೃಹ ಸಚಿವಾಲಯ? ಅಥವಾ ಅಟಾರ್ನಿ ಜನರಲ್? ಎಂದು ಕೇಂದ್ರವನ್ನು ಪ್ರಶ್ನಿಸಿದ ಚಿದಂಬರಂ ಶ್ರೀಲಂಕಾದ ಹಿಂದೂಗಳನ್ನು ಮತ್ತು ಭೂತಾನದ ಕ್ರೈಸ್ತರನ್ನು ಹೊರಗಿಡುವುದಕ್ಕೆ ಏನು ಕಾರಣ? ಸೇರಿಸುವುದು- ಹೊರಗಿಡುವುದು ಎಲ್ಲವೂ ವಿವೇಚನೆಗೆ ನಿಲುಕದ್ದು ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.