ಕೋಲ್ಕತ್ತ: ಪ್ರಧಾನಿ ಮೋದಿ ಹಲವಾರು ಭರವಸೆಗಳನ್ನು ನೀಡಿದ್ದರು. ಆದರೆ ಯಾವುದನ್ನೂ ಈಡೇರಿಸಿಲ್ಲ. ನಾವು ಈ ಬಗ್ಗೆ ಪ್ರಶ್ನಿಸಿದರೆ ಅವರು ಜನರ ಗಮನವನ್ನು ಬೇರೆಡೆಗೆ ಸೆಳೆಯುತ್ತಾರೆ.ನೀವು ಪ್ರಶ್ನೆಗಳಿಗೆ ಉತ್ತರ ನೀಡುವರೆಗೂ ಜನರು ನಿಮ್ಮನ್ನು ಚೌಕೀದಾರ್ ಎಂದು ಕರೆಯುತ್ತಾರೆ.

ಇದನ್ನೂ ಓದಿ:1.6 ಕೋಟಿ ಜನರು ಕೆಲಸ ಕಳೆದುಕೊಂಡಿದ್ದಾರೆ, 2 ಕೋಟಿ ಉದ್ಯೋಗವಕಾಶ ಎಲ್ಲಿ?: ಖರ್ಗೆ

ಕೋಲ್ಕತ್ತಾದಲ್ಲಿ ನಡೆಯುತ್ತಿರುವ ಮಮತಾ ಬ್ಯಾನರ್ಜಿ ನೇತೃತ್ವದ ಮಹಾ ರ್ಯಾಲಿಯಲ್ಲಿ ಮಾತನಾಡಿದ ಶತ್ರುಘ್ನ ಸಿನ್ಹಾ, ರಫೇಲ್ ಬಗ್ಗೆ ಉತ್ತರಿಸಿ,ಇಲ್ಲವಾದರೆ ಜನರು ಚೌಕೀದಾರ್ ಚೋರ್ ಹೈ ಅಂತಾರೆ ಎಂದು ಹೇಳಿದ್ದಾರೆ.

ದೇಶದಲ್ಲಿಪರಿವರ್ತನೆ ಬೇಕಾಗಿದೆ. ಜನರಿಗೆ ಹೊಸ ನಾಯಕತ್ವದ ಅಗತ್ಯವಿದೆ.ವಾಜಪೇಯಿ ಅವರ ಕಾಲದಲ್ಲಿ ದೇಶದಲ್ಲಿ ಪ್ರಜಾಪ್ರಭುತ್ವ ಇತ್ತು. ಈಗ ಅರಾಜಕತೆ ಇದೆ. ನಾನು ಬಿಜೆಪಿ ವಿರುದ್ಧ ಯಾಕೆ ಮಾತನಾಡುತ್ತಿದ್ದೇನೆ ಎಂದು ಜನರು ಕೇಳುತ್ತಿದ್ದಾರೆ.ನಾನು ಸತ್ಯದ ವಿರುದ್ಧ ಮಾತನಾಡಲ್ಲ.ಹಾಗಾಗಿ ನಾನು ಬಿಜೆಪಿ ವಿರುದ್ಧ ಮಾತನಾಡುತ್ತಿದ್ದೇನೆ.ನಾನು ಸತ್ಯ ಹೇಳುವ ಮೂಲಕ ಬಂಡಾಯವೇಳುತ್ತಿದ್ದೇನೆ ಎಂದು ಅನಿಸಿದರೆ ನಾನು ಬಂಡಾಯಗಾರ, ಬಿಜೆಪಿಯ ಸದಸ್ಯನಾಗುವುದಕ್ಕಿಂತ ಮುನ್ನ ನಾನೊಬ್ಬ ಭಾರತೀಯ.

ಇದನ್ನೂ ಓದಿ:ಮೋದಿಯನ್ನು ಮನೆಗೆ ಕಳುಹಿಸಿ ದೇಶವನ್ನು ರಕ್ಷಿಸಿ: ಎಂ.ಕೆ ಸ್ಟಾಲಿನ್

ಈ ದೇಶವನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸುವುದಕ್ಕಾಗಿ, ದೇಶದ ರಕ್ಷಣೆಗಾಗಿ ಮತ್ತು ಸಂವಿಧಾನವನ್ನು ಕಾಪಾಡುವುದಕ್ಕಾಗಿ ನಾವು ಇಲ್ಲಿ ಸೇರಿದ್ದೇವೆ ಎಂದಿದ್ದಾರೆ ಸಿನ್ಹಾ.

ಇದನ್ನೂ ಓದಿ:ಈ ಪ್ರಧಾನಿ ಕೆಲಸ ಮಾಡುವ ಪ್ರಧಾನಿ ಅಲ್ಲ, ಪ್ರಚಾರ ಬಯಸುವ ಪ್ರಧಾನಿ: ನಾಯ್ಡು

ಈ ರ್ಯಾಲಿ ಮೋದಿಯ ನಿದ್ದೆಗೆಡಿಸುತ್ತದೆ: ತೇಜಸ್ವಿ ಯಾದವ್
ಈ ರ್ಯಾಲಿ ಮೋದಿಯ ನಿದ್ದೆಗೆಡಿಸುತ್ತದೆ.ನಾನು ಮೋದಿಯವರಿಗೆ ಒಂದು ಮಾತು ಹೇಳಲಿಚ್ಛಿಸುತ್ತೇನೆ. ನೀವು ಚೌಕೀದಾರ್ ಆಗಿರಬಹುದು. ಆದರೆ ಈ ದೇಶದ ಜನರು ಠಾಣೆದಾರರು (ಪೊಲೀಸ್) ಆಗಿದ್ದಾರೆ ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ.

ಇದನ್ನೂ ಓದಿ:ಕೇಂದ್ರದಿಂದ ಬಿಜೆಪಿಯನ್ನು ಕಿತ್ತೊಗೆಯಬೇಕು: ಯಶವಂತ್ ಸಿನ್ಹಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.