ನಾಗ್ಪುರ: ‘ದೇಶದ ಬಗ್ಗೆ ಮಾತನಾಡುವುದನ್ನೇ ದ್ವೇಷದಿಂದ ನೋಡುತ್ತಿದ್ದ ಕಾಲವೊಂದಿತ್ತು. ಆದರೆ, ಈಗ ವಸಾಹತುಶಾಹಿ ಮನಸ್ಥಿತಿ ಅಂತ್ಯಗೊಂಡಿದೆ. ಭಾರತವು ಬೌದ್ಧಿಕ ಸ್ವಾತಂತ್ರ್ಯದತ್ತ ಸಾಗುತ್ತಿದೆ’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ.

ಅಖಿಲ ಭಾರತೀಯ ರಾಷ್ಟ್ರೀಯ ಶೈಶಿಕ್ ಮಹಾಸಂಘ ಆಯೋಜಿಸಿದ್ದ ‘ಅಖಿಲ ಭಾರತೀಯ ಶಿಷ್ಯಕ್ ಸಮ್ಮಾನ್ ಸಮಾರೋಪ’ದಲ್ಲಿ ಶಿಕ್ಷಕರು ಮತ್ತು ಪ್ರಾಧ್ಯಾಪಕರನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ಕತ್ತಲೆ ಸರಿದು ಹೋದಾಗ, ಸೂರ್ಯನನ್ನು ನೋಡಲಾಗದ ಕೆಲವು ವಿರೋಧಿ ಶಕ್ತಿಗಳು ಸದ್ದು ಮಾಡುತ್ತವೆ. ನಾವು ಬೆಳಕನ್ನು ಪ್ರೀತಿಸುವವರು. ಬೆಳಕು ಬರಬೇಕೆಂದು ನಂಬಿದವರು. ಸಮಾಜವು ವಿರೋಧಿ ಶಕ್ತಿಗಳಿಗೆ ಹೆದರಬಾರದು, ತಲೆಬಾಗಬಾರದು’ ಎಂದು ಅವರು ಹೇಳಿದರು.

‘ಭಾರತದ 'ಸ್ವಯಂ' ಶಕ್ತಿಯನ್ನು ಜಾಗೃತಗೊಳಿಸುವ ಸಮಯ ಬಂದಿದೆ. ಭಾರತದ ಸರಿಯಾದ ಇತಿಹಾಸ ಮುನ್ನೆಲೆಗೆ ಬರಬೇಕಾಗಿದೆ‘ ಎಂದರು.

ಅಯೋಧ್ಯೆ ಕುರಿತು ಬರೆಯಲು ಹೋದಾಗ ತಾವು ಅನುಭವಿಸಿದ ತೊಂದರೆಗಳನ್ನು ಕಾರ್ಯಕ್ರಮದ ಅತಿಥಿಯೊಬ್ಬರು ವಿವರಿಸಿದ್ದರು. ಈ ಹಿನ್ನೆಲೆಯಲ್ಲಿ ಹೊಸಬಾಳೆ ಹೀಗೆ ಹೇಳಿದರು.

‘ರಾಷ್ಟ್ರ ಮತ್ತು ರಾಷ್ಟ್ರೀಯ ಸಂಸ್ಕೃತಿಗೆ ಸಂಬಂಧಿಸಿದ ವಿಷಯಗಳ ಮೇಲೆ ವಿದ್ಯಾರ್ಥಿಗಳು ಪಿಎಚ್.ಡಿ ಮಾಡುವುದನ್ನು ತಡೆದ ಹಲವಾರು ಉದಾಹರಣೆಗಳು ನಮ್ಮ ಮುಂದಿವೆ. ದೇಶದ ಸರಿಯಾದ ಇತಿಹಾಸದ ಮೇಲೆ ಪಿಎಚ್.ಡಿ ಮಾಡಲು ಕೆಲವರಿಗೆ ಅನುಮತಿ ಸಿಕ್ಕಿಲ್ಲ’ ಎಂದು ಹೊಸಬಾಳೆ ತಿಳಿಸಿದರು.

‘ನನಗೆ ಇಂತಹ ಅನೇಕ ಘಟನೆಗಳು ತಿಳಿದಿವೆ. ಒಂದು ಕಾಲದಲ್ಲಿ ದೇಶದ ಬಗ್ಗೆ ಮಾತನಾಡುವುದನ್ನೇ ದ್ವೇಷದಿಂದ ನೋಡಲಾಗುತ್ತಿತ್ತು. ದಶಕಗಳ ವಸಾಹತು ಮನಸ್ಥಿತಿ ಈಗ ಕೊನೆಗೊಂಡಿದೆ. ವಸಾಹತುಶಾಹಿ ಮನಸ್ಥಿತಿಯನ್ನು ಅಂತ್ಯಗೊಳಿಸುವ ಪ್ರಯತ್ನಗಳೊಂದಿಗೆ, ನಾವು ಬೌದ್ಧಿಕ ಸ್ವಾತಂತ್ರ್ಯದತ್ತ ಸಾಗುತ್ತಿದ್ದೇವೆ. ಆದ್ದರಿಂದ, ಈ ಬೌದ್ಧಿಕ ಹೋರಾಟದಲ್ಲಿ ಬುದ್ಧಿಜೀವಿಗಳ ಅವಶ್ಯಕತೆ ತುಂಬಾ ಇದೆ’ ಎಂದು ಹೊಸಬಾಳೆ ಅಭಿಪ್ರಾಯಪಟ್ಟರು.

ಯುವಕರನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರದ ಪ್ರಾಮುಖ್ಯತೆಯನ್ನು ಅವರು ಒತ್ತಿ ಹೇಳಿದರು. ದೇಶವನ್ನು 'ವಿಶ್ವ ಗುರು' ಮಾಡಲು ವೈಯಕ್ತಿಕ ಮತ್ತು ಸಾಮೂಹಿಕ ಪ್ರಯತ್ನಗಳ ಅಗತ್ಯವಿದೆ ಎಂದೂ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.