ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಶ್ಚಿಮ ಬಂಗಾಳ ಪ್ರವೇಶಿಸಿದ ಕಾಂಗ್ರೆಸ್‌ನ 'ಭಾರತ ಜೋಡೊ ನ್ಯಾಯ ಯಾತ್ರೆ'

Published 25 ಜನವರಿ 2024, 6:39 IST
Last Updated 25 ಜನವರಿ 2024, 6:39 IST
ಅಕ್ಷರ ಗಾತ್ರ

ಧುಬ್ರಿ (ಅಸ್ಸಾಂ): ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ನೇತೃತ್ವದ 'ಭಾರತ ಜೋಡೊ ನ್ಯಾಯ ಯಾತ್ರೆ' ಗುರುವಾರ ಅಸ್ಸಾಂನಲ್ಲಿ ತನ್ನ ಪ್ರಯಾಣವನ್ನು ಮುಕ್ತಾಯಗೊಳಿಸಿತು. ಬಳಿಕ ಇಲ್ಲಿನ ಗೋಲಕ್‌ಗಂಜ್ ಮೂಲಕ ಪಶ್ಚಿಮ ಬಂಗಾಳವನ್ನು ಪ್ರವೇಶಿಸಿದೆ.

ಗೌರಿಪುರದಲ್ಲಿ ರಾತ್ರಿ ತಂಗಿದ ರಾಹುಲ್‌ ಗಾಂಧಿ ಅಸ್ಸಾಂನಲ್ಲಿ ಇಂದು ತಮ್ಮ 8ನೇ ಮತ್ತು ಕೊನೆಯ ದಿನದ ಯಾತ್ರೆಯ ಭಾಗವಾಗಿ ವಾಹನದಲ್ಲಿ ಸ್ವಲ್ಪ ದೂರದವರೆಗೆ ಸಾಗಿದರು. ಬಳಿಕ ಗೋಲಕ್‌ಗಂಜ್ ತಲುಪಲು ಬಸ್ ಹತ್ತಿದರು.

ಕಾಂಗ್ರೆಸ್ ನಾಯಕನನ್ನು ನೋಡಲು ಹೆಚ್ಚಿನ ಸಂಖ್ಯೆಯ ಜನರು ಪ್ರಯಾಣದ ಮಾರ್ಗದಲ್ಲಿ ಕಾಯುತ್ತಿದ್ದರು. ರಾಹುಲ್‌ ಗಾಂಧಿಯವರು ಇತರ ಹಿರಿಯ ನಾಯಕರೊಂದಿಗೆ ಸ್ಥಳೀಯ ಸ್ಟಾಲ್‌ನಲ್ಲಿ ಚಹಾ ಸವಿದರು. ಬಳಿಕ ಗೋಲಕ್‌ಗಂಜ್ ಪಟ್ಟಣದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗದ ಜನರೊಂದಿಗೆ ಸಂವಹನ ನಡೆಸಿದರು ಎಂದು ವಿರೋಧ ಪಕ್ಷದ ನಾಯಕ ದೇಬಬ್ರತ ಸೈಕಿಯಾ ಹೇಳಿದರು ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ರಾಹುಲ್‌ ನೇತೃತ್ವದ ನ್ಯಾಯ ಯಾತ್ರೆ ಜನವರಿ 14 ರಂದು ಮಣಿಪುರದಲ್ಲಿ ಪ್ರಾರಂಭವಾಗಿದ್ದು, ಮಾರ್ಚ್ 20 ರಂದು ಮುಂಬೈನಲ್ಲಿ ಮುಕ್ತಾಯಗೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT