ಚೆನ್ನೈ: ಕಾಂಗ್ರೆಸ್ ಪಕ್ಷವು ವಿದ್ಯುನ್ಮಾನ ಮತಯಂತ್ರದ ಬಳಕೆಯನ್ನು ತಿರಸ್ಕರಿಸಿಲ್ಲ. ಬದಲಾಗಿ ವಿವಿಪ್ಯಾಟ್‌ಗಳ ಸುಧಾರಣೆಗೆ ಒತ್ತಾಯಿಸಿತ್ತು ಎಂದು ಪಕ್ಷದ ಹಿರಿಯ ನಾಯಕ ಪಿ. ಚಿದಂಬರಂ ಹೇಳಿದರು.

ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮತಯಂತ್ರಗಳ ಮೇಲಿನ ವಿಪಕ್ಷಗಳ ಆರೋಪಕ್ಕೆ ಉಸ್ತುವಾರಿ ಪ್ರಧಾನಿ ನರೇಂದ್ರ ಮೋದಿ ಅವರು ಮೌನ ವಹಿಸಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಚಿದಂಬರಂ ಅವರು, ‘ನಾನು ಎಂದಿಗೂ ಮತಯಂತ್ರವನ್ನು ದೂರಿಲ್ಲ. ಅಲ್ಲದೇ ಪಕ್ಷದ ಪ್ರಣಾಳಿಕೆಯಲ್ಲಿ ನಾವು ಇದನ್ನು ಉಲ್ಲೇಖಿಸಿರಲಿಲ್ಲ’ ಎಂದು ತಿಳಿಸಿದರು.

‘ದಯವಿಟ್ಟು ಪ್ರಣಾಳಿಕೆಯನ್ನು ಮತ್ತೊಮ್ಮೆ ಓದಿ... ನಾವು ಮತ ಹಾಕಿದ ಬಳಿಕ ವಿವಿಪ್ಯಾಟ್ ಯಂತ್ರದಲ್ಲಿ ನಾವು ಯಾವ ಪಕ್ಷಕ್ಕೆ ಮತ ಹಾಕಿದ್ದೇವೆ ಎಂಬುದನ್ನು (ಪಕ್ಷದ ಚಿಹ್ನೆ ಡಿಸ್‌ಪ್ಲೇ ಆಗುವುದು) ಕನಿಷ್ಠ 4ರಿಂದ 5 ಸೆಕೆಂಡುಗಳ ಕಾಲ ತೋರಿಸಬೇಕು. ನಂತರ ವಿವಿಪ್ಯಾಟ್ ಸ್ಲಿಪ್ ಬಾಕ್ಸ್ ಒಳಗೆ ಬೀಳಬೇಕು. ಮತಯಂತ್ರದಲ್ಲಿ ಈ ಸುಧಾರಣೆಯಾಗಬೇಕು ಎಂದು ನಾವು ಪ್ರಣಾಳಿಕೆಯಲ್ಲಿ ತಿಳಿಸಿದ್ದೇವೆ. ಆದರೆ, ವಿವಿಪ್ಯಾಟ್‌ನ ಸ್ಲಿಪ್ ತಕ್ಷಣವೇ ಬಾಕ್ಸ್‌ನಲ್ಲಿ ಬೀಳುತ್ತದೆ. ಮತದಾರನಿಗೆ ಇದು ಗೊಂದಲವಾಗುತ್ತದೆ. ಈ ಒಂದು ಸುಧಾರಣೆಯಾದರೆ ಮತಯಂತ್ರ–ವಿವಿಪ್ಯಾಟ್ ವ್ಯವಸ್ಥೆ ಕುರಿತು ಯಾರಿಗೂ ಯಾವುದೇ ಅನುಮಾನ ಇರುವುದಿಲ್ಲ’ ಎಂದರು.

‘ಈಗಲೂ ಹತ್ತರಲ್ಲಿ ನಾಲ್ಕು ಅಥವಾ ಮೂರು ಜನರು ಮತಯಂತ್ರದ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಾರೆ. ನಾನು ಮತಯಂತ್ರವನ್ನು ಎಂದಿಗೂ ದೂರಿಲ್ಲ. ಪಕ್ಷದ ಒಬ್ಬರು ಅಥವಾ ಇಬ್ಬರು ನಾಯಕರು ಮತಯಂತ್ರವನ್ನು ವಿರೋಧಿಸಿದರೆ ಅದು ಪಕ್ಷದ ನಿಲುವಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.