ಪಣಜಿ: ಗೋವಾದ ಬಿಜೆಪಿ ಚುನಾವಣಾ ಉಸ್ತುವಾರಿ ದೇವೇಂದ್ರ ಫಡಣವೀಸ್ ಅವರು ವಾಸ್ತವ್ಯವಿದ್ದ ಹೋಟೆಲ್ಗೆ ಗೋವಾ ಕಾಂಗ್ರೆಸ್ ಘಟಕದ ಕಾರ್ಯಾಧ್ಯಕ್ಷರು ಸೋಮವಾರ ಮಧ್ಯರಾತ್ರಿ ಭೇಟಿ ನೀಡಿದ್ದು, ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ.

ಗೋವಾ ವಿಧಾನಸಭೆ ಚುನಾವಣೆಗೆ ಸಿದ್ಧತೆ ನಡೆದಿರುವ ಹೊತ್ತಿನಲ್ಲಿಯೇ ಕಾರ್ಯಾಧ್ಯಕ್ಷ ಅಲೆಕ್ಸೊ ರೆಜಿನಾಲ್ಡೊ ಲೊರೆಂಕೊ ಅವರು ಭೇಟಿ ನೀಡಿದ್ದಾರೆ. ಈ ಭೇಟಿ ಕುರಿತಂತೆ ಹೋಟೆಲ್ ಬಳಿ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಚರ್ಚಿಸಲು ಅವರು ನಿರಾಕರಿಸಿದ್ದರು.

ಗೋವಾ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗಿರೀಶ್ ಚೋಡಂಕರ್ ಅವರು, ಬಿಜೆಪಿ ಮುಖಂಡರ ಭೇಟಿಗೆ ಲೊರೆಂಕೊ ತೆರಳಿರಲಿಲ್ಲ. ಅಲ್ಲಿ, ಚುನಾವಣಾ ಕಾರ್ಯತಂತ್ರ ಚರ್ಚೆಗೆ ಸಭೆ ಇತ್ತು. ನಾನು ಹೋಗಲು ಆಗಿರಲಿಲ್ಲ, ಅವರನ್ನು ಕಳುಹಿಸಿದ್ದೆ’ ಎಂದಿದ್ದಾರೆ.

ನಂತರ ಈ ಬಗ್ಗೆ ಪ್ರತಿಕ್ರಿಯಿಸಿರುವ ಲೊರೆಂಕೊ ಅವರು, ‘ಚುನಾವಣಾ ಕಾರ್ಯತಂತ್ರ ಕುರಿತ ಸಭೆಗಾಗಿ ಆ ಹೋಟೆಲ್ಗೆ ತೆರಳಿದ್ದೆ. ಆದರೆ, ಅದೇ ಹೋಟೆಲ್ನಲ್ಲಿ ಬಿಜೆಪಿ ಮುಖಂಡರು ಇರುವುದು ತಿಳಿದ ಕೂಡಲೇ ನಿರ್ಗಮಿಸಿದ್ದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.