ಬಸ್ತಿ(ಉತ್ತರ ಪ್ರದೇಶ): ‘ಪಾಕಿಸ್ತಾನದ ಬಳಿ ಪರಮಾಣು ಬಾಂಬ್ ಇದೆ ಎಂಬ ಕಾರಣಕ್ಕಾಗಿ ಹೆದರಬೇಕು ಎಂದು ಅವರು ಹೇಳುತ್ತಿದ್ದಾರೆ. ಆದರೆ ಅವರಿಗೆ 56 ಇಂಚಿನ(ಎದೆ) ಮಾಹಿತಿ ಇಲ್ಲವೇ? ಪಾಕಿಸ್ತಾನಕ್ಕೆ ಹೆದರಲು ಕೇಂದ್ರದಲ್ಲಿರುವುದು ದುರ್ಬಲ ಕಾಂಗ್ರೆಸ್ ಸರ್ಕಾರವಲ್ಲ, ಬದಲಿಗೆ ಬಲಿಷ್ಠ ಮೋದಿ ಸರ್ಕಾರ’ ಎಂದು ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.

ಬಸ್ತಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹರೀಶ್ ದ್ವಿವೇದಿ ಪರ ಮತಯಾಚಿಸಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ‘ಪಾಕಿಸ್ತಾನದ ಮೇಲೆ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳಿಗೆ ಸಹಾನುಭೂತಿ ಇದೆ’ ಎಂದರು.

‘ಒಂದು ಕಾಲದಲ್ಲಿ ನಮಗೆ ಸವಾಲೊಡ್ಡುತ್ತಿದ್ದ ಭಯೋತ್ಪಾದಕ ಪೋಷಕ ರಾಷ್ಟ್ರದ(ಪಾಕಿಸ್ತಾನ) ಜನರು ಇಂದು ಆಹಾರ ಧಾನ್ಯಕ್ಕಾಗಿ ಕಷ್ಟಪಡುವ ಸ್ಥಿತಿಯಲ್ಲಿದ್ದಾರೆ. ಪಾಕಿಸ್ತಾನ ಮುಗಿದ ಅಧ್ಯಾಯ ಆದರೆ ಅದರ ಬಗ್ಗೆ ಸಹಾನುಭೂತಿ ಹೊಂದಿರುವ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ದೇಶವನ್ನು ಹೆದರಿಸುವಲ್ಲಿ ನಿರತವಾಗಿವೆ’ ಎಂದು ಹೇಳಿದರು.

‘2017ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಒಟ್ಟಿಗೆ ಪ್ರಚಾರ ಮಾಡಿ ವಿಫಲರಾಗಿದ್ದರು. ಈ ಇಬ್ಬರು ಶೆಹಜಾದರು ಪದೇ ಪದೇ ಫ್ಲಾಪ್ ಸಿನಿಮಾಗಳನ್ನು ಬಿಡುಗಡೆ ಮಾಡುತ್ತಿರುವುದು ನನಗೆ ಆಶ್ಚರ್ಯ ತಂದಿದೆ’ ಎಂದು ಲೇವಡಿ ಮಾಡಿದರು.

ಉತ್ತರ ಪ್ರದೇಶದಲ್ಲಿ ‘ಇಂಡಿಯಾ’ 79 ಸ್ಥಾನಗಳನ್ನು ಗೆಲ್ಲಲಿದೆ ಎಂಬ ಅಖಿಲೇಶ್ ಯಾದವ್ ಹೇಳಿಕೆಗೆ ಪ್ರತಿಕ್ರಿಯಿಸಿದ ಮೋದಿ, ‘ಜೂನ್ 4ರಂದು ಉತ್ತರ ಪ್ರದೇಶದ ಜನರು ಎಸ್ಪಿ ಮತ್ತು ಕಾಂಗ್ರೆಸ್ ಅನ್ನು ನಿದ್ದೆಯಿಂದ ಎಬ್ಬಿಸಲಿದ್ದಾರೆ. ಆಗ ಅವರು ಇವಿಎಂ ತಮ್ಮ ಸೋಲಿಗೆ ಕಾರಣ ಎನ್ನುತ್ತಾರೆ’ ಎಂದರು.

‘ಸನಾತನ ಧರ್ಮವನ್ನು ನಾಶಪಡಿಸುವ ಬಗ್ಗೆ ವಿರೋಧ ಪಕ್ಷ ನಾಯಕರು ಮಾತನಾಡುತ್ತಾರೆ. ರಾಮಮಂದಿರ ವಿಷಯದಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ಬದಲಾಯಿಸಲು ಕಾಂಗ್ರೆಸ್ನ ಶೆಹಜಾದಾ(ರಾಹುಲ್ ಗಾಂಧಿ) ಬಯಸುತ್ತಾರೆ. ರಾಮಮಂದಿರಕ್ಕೆ ಬಾಬ್ರಿ ಬೀಗ ಜಡಿಯುವ ಮೂಲಕ ಬಾಲ ರಾಮನನ್ನು ಟೆಂಟ್ಗೆ ಕಳುಹಿಸುವ ಉದ್ದೇಶವನ್ನು ಹೊಂದಿದ್ದಾರೆ’ ಎಂದು ಹೇಳಿದರು.

‘ದಲಿತ ಮತ್ತು ಹಿಂದುಳಿದವರ ಮೀಸಲಾತಿಯನ್ನು ಕಿತ್ತು ವೋಟ್ ಜಿಹಾದ್ ಮಾಡುವವರಿಗೆ ಕೊಡಲು ಈ ಜನರು ಯತ್ನಿಸುತ್ತಿದ್ದಾರೆ. ಮುಸ್ಲಿಮರಿಗೆ ಮೀಸಲಾತಿ ನೀಡಲು ಸಂವಿಧಾನವನ್ನು ಬದಲಾಯಿಸಲು ಕಾಂಗ್ರೆಸ್ ಬಯಸಿದೆ. ದಲಿತ ವಿರೋಧಿ ಮತ್ತು ಹಿಂದುಳಿದ ವಿರೋಧಿ ಷಡ್ಯಂತ್ರದಲ್ಲಿ ಸಮಾಜವಾದಿ ಪಕ್ಷವು ಕಾಂಗ್ರೆಸ್ ಜೊತೆ ನಿಂತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.