ಗುವಾಹಟಿ: ಮಿಜೋರಾಂನ ಕಾಂಗ್ರೆಸ್ ಮುಖಂಡರಿಗೆ, ಮಾಜಿ ಮುಖ್ಯಮಂತ್ರಿ ಲಲಥನ್ಹವಲಾ ಅವರ ಅನುಪಸ್ಥಿತಿಯು ಸೋಮವಾರ ಬಹುವಾಗಿ ಕಾಡಿತು. 1986ರ ನಂತರ ಪಕ್ಷವನ್ನು ಐದು ಬಾರಿ ಗೆಲ್ಲಿಸಿದ್ದರು ಲಲಥನ್ಹವಲಾ.

ಮಿಜೋರಾಂ ವಿಧಾನಸಭೆಯ 40 ಸ್ಥಾನಗಳಿಗೆ ಸ್ಪರ್ಧಿಸಿ, ಮತ್ತೆ ಅಧಿಕಾರ ಹಿಡಿಯುವ ಉಮೇದಿನಲ್ಲಿದ್ದ ಕಾಂಗ್ರೆಸ್ 1 ಸ್ಥಾನ ಮಾತ್ರ ಗೆದ್ದಿದೆ. ಮಿಜೋರಾಂ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಲಾಲಸವತಾ ಅವರೂ ಸೋಲುಂಡಿದ್ದಾರೆ.

‘ಲಲಥನ್ಹವಲಾ ಅವರ ಅನುಪಸ್ಥಿತಿಯನ್ನು ನಾವು ನಿಜಕ್ಕೂ ಅನುಭವಿಸುತ್ತಿದ್ದೇವೆ. ಪಕ್ಷವು ಮತ್ತೆ ಪುಟಿದೇಳಬೇಕು ಎಂದಾದರೆ ನಮಗೆ ಅವರಂತಹ ಬಲಿಷ್ಠ ನಾಯಕ ಬೇಕು’ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದರು.

ಮಿಜೋರಾಂನಲ್ಲಿ ಕಾಂಗ್ರೆಸ್ಸಿನ ಅಧಃಪತನವು 2018ರ ವಿಧಾನಸಭಾ ಚುನಾವಣೆಯಲ್ಲಿಯೇ ಶುರುವಾಗಿತ್ತು. ಆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಐದು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿ, ಮೂರನೆಯ ಸ್ಥಾನಕ್ಕೆ ಕುಸಿದಿತ್ತು. ಆಗ ಎಂಎನ್ಎಫ್ ಪಕ್ಷವು ಲಲಥನ್ಹವಲಾ ನೇತೃತ್ವದ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಿತ್ತು.

2023ರಲ್ಲಿ ಅಧಿಕಾರ ಹಿಡಿಯಬೇಕು ಎಂಬ ಉಮೇದಿನಲ್ಲಿ ಕಾಂಗ್ರೆಸ್ ಇದ್ದಾಗ, 2021ರಲ್ಲಿ ಲಲಥನ್ಹವಲಾ ಅವರು ರಾಜಕಾರಣಕ್ಕೆ ನಿವೃತ್ತಿ ಘೋಷಿಸಿದರು. ಆಗ ಅವರಿಗೆ 79 ವರ್ಷ ವಯಸ್ಸಾಗಿತ್ತು. ಅವರ ನಿವೃತ್ತಿಯ ನಂತರ ಪಕ್ಷವು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವಲ್ಲಿ, ಸಂಘಟನಾತ್ಮಕವಾಗಿ ಸಮಸ್ಯೆ ಎದುರಿಸಿದೆ.

‘ಲಲಥನ್ಹವಲಾ ಅವರ ನಿವೃತ್ತಿಯ ನಂತರ ಪಕ್ಷವನ್ನು ಗೆಲುವಿನ ದಡಕ್ಕೆ ಕರೆದೊಯ್ಯುವ ನಾಯಕ ಇಲ್ಲದಂತಾಗಿದೆ. ಈಗಿನ ನಾಯಕರಲ್ಲಿನ ಆಂತರಿಕ ಸಂಘರ್ಷ ಕೂಡ ಇನ್ನೊಂದು ಸಮಸ್ಯೆಯಾಗಿತ್ತು’ ಎಂದು ಮಿಜೋರಾಂ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರದ ಪ್ರಾಧ್ಯಾಪಕ ಜಾಂಗ್ಖೊಂಗಾಂ ದೌಂಗೆಲ್ ಅವರು ವಿಶ್ಲೇಷಿಸಿದರು.

‘ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇಲ್ಲದಿರುವುದು ಕೂಡ ರಾಜ್ಯದಲ್ಲಿ ಅದರ ಮೇಲೆ ಒಂದಿಷ್ಟು ಪರಿಣಾಮ ಉಂಟುಮಾಡಿದೆ’ ಎಂದು ಅವರು ಹೇಳಿದರು. ರಾಜ್ಯದಲ್ಲಿ ಕಾಂಗ್ರೆಸ್ ಪರವಾಗಿ ಪ್ರಚಾರ ನಡೆಸಿದ್ದ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಎಂಎನ್ಎಫ್ ಮತ್ತು ಝೆಡ್ಪಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದರು. ಎರಡೂ ಪಕ್ಷಗಳು ಕ್ರೈಸ್ತ ಸಮುದಾಯದ ಬಾಹುಳ್ಯವಿರುವ ಈ ರಾಜ್ಯದಲ್ಲಿ ಬಿಜೆಪಿ ಮತ್ತು ಆರ್ಎಸ್ಎಸ್ಗೆ ‘ಪ್ರವೇಶ ದ್ವಾರಗಳಂತೆ ಕೆಲಸ ಮಾಡುತ್ತವೆ’ ಎಂದು ರಾಹುಲ್ ಅವರು ದೂರಿದ್ದರು.

ಆದರೆ ಈ ಆರೋಪವು ಕಾಂಗ್ರೆಸ್ ಪಕ್ಷದ ನೆರವಿಗೆ ಬರಲಿಲ್ಲ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಎಂಎನ್ಎಫ್ ಮತ್ತು ಕಾಂಗ್ರೆಸ್ಸಿನ ವೈಫಲ್ಯಗಳಿಗೆ ಪ್ರತಿಯಾಗಿ ತಾನು ಬದಲಾವಣೆಗಳನ್ನು ತರುವುದಾಗಿ ಝೆಡ್ಪಿಎಂ ಪಕ್ಷ ಭರವಸೆ ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.