ಮುಂಬೈ: ಅಂತರ್ಜಾತಿ ವಿವಾಹವಾದದ್ದಕ್ಕೆ ಮನನೊಂದ ತಂದೆಯವರು ಮಗಳು ಹಾಗೂ ಅಳಿಯನನ್ನೇ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಅಹ್ಮದ್ನಗರ ಜಿಲ್ಲೆಯಲ್ಲಿ ನಡೆದಿದೆ.

ಪಾರ್ನರ್ ತಾಲ್ಲೂಕಿನ ನೈಜೋಜ್ ಗ್ರಾಮದಲ್ಲಿ ಮೇ 1ರಂದು ಈ ಘಟನೆ ನಡೆದಿದೆ.

‘ರಾಮ ಭಾರತಿಯ ಎಂಬುವವರು ದಿನಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದು, ಸಹೋದರರ ಜತೆಸೇರಿ 19 ವರ್ಷದ ಮಗಳು ರುಕ್ಮಿಣಿ ಹಾಗೂ 23 ವರ್ಷದ ಅಳಿಯ ಮಂಗೇಶ್ ರಾನ್ಸಿಂಗ್ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಪರಸ್ಪರ ಪ್ರೀತಿಸುತ್ತಿದ್ದ ರುಕ್ಮಿಣಿ ಮತ್ತು ಮಂಗೇಶ್ಆರು ತಿಂಗಳ ವಿವಾಹವಾಗಿದ್ದರು. ಬೇರೆ ಜಾತಿಯ ಯುವಕನಾದ್ದರಿಂದ ಈ ವಿವಾಹಕ್ಕೆಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದರು.

ಪ್ರಸ್ತುತ, ಪ್ರಮುಖ ಆರೋಪಿ ರಾಮ ಭಾರತಿಯ ಹಾಗೂ ಸಹೋದರರಾದ ಸುರೇಂದ್ರ ಭಾರತಿಯ, ಘನಶ್ಯಾಮ ಸರೋಜ್ ತಲೆಮರೆಸಿಕೊಂಡಿದ್ದಾರೆ.

ಆರೋಪಿಗಳ ವಿರುದ್ಧ ಪೊಲೀಸರು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 302ರ ಅಡಿಯಲ್ಲಿ ಕೊಲೆ, 307ರ ಅಡಿಯಲ್ಲಿ ಕೊಲೆ ಯತ್ನಪ್ರಕರಣ ದಾಖಲಿಸಿತನಿಖೆ ನಡೆಸುತ್ತಿದ್ದಾರೆ.

ರಾನ್ಸಿಂಗ್, ಲೋಹರ್ ಜಾತಿಗೆ ಸೇರಿದವನಾಗಿದ್ದು, ರುಕ್ಮಿಣಿ ಪಾಸಿ ಜಾತಿಗೆ ಸೇರಿದ್ದರು ಎಂದು ಪೊಲೀಸ್ ಇನ್ಸ್ಪೆಕ್ಟರ್ವಿಜಯ್ ಕುಮಾರ್ ಬೋಟ್ರೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.