ನವದೆಹಲಿ: ‘ಮಹಾತ್ಮ ಗಾಂಧಿ ಅವರನ್ನು ಅನೇಕರು ಟೀಕಿಸಿರಬಹುದು. ಆದರೆ, ಗಾಂಧಿ ಅವರ ವ್ಯಕ್ತಿತ್ವದಲ್ಲಿ ವಿಮರ್ಶಕರು ಗಮನ ಹರಿಸಬೇಕಾದ ಅನೇಕ ಅಂಶಗಳಿವೆ’ ಎಂದು ಖ್ಯಾತ ಇತಿಹಾಸಕಾರ ರಾಮಚಂದ್ರ ಗುಹಾ ಅವರು ಅಭಿಪ್ರಾಯಪಟ್ಟರು.

ಸಮಾಜಶಾಸ್ತ್ರಜ್ಞೆ ನಂದಿನಿ ಸುಂದರ್ ಅವರ ಜತೆ ಶನಿವಾರ ‘ಇತಿಹಾಸಕಾರನ ಪ್ರವಾಸ’ ವಿಷಯ ಕುರಿತು ನಡೆಸಿದ ಚರ್ಚೆಯಲ್ಲಿ ಮಾತನಾಡಿದ ಗುಹಾ, ‘ಗಾಂಧಿ ತಮ್ಮ ಜೀವಿತಾವಧಿಯಲ್ಲಿ ಎಲ್ಲರಿಗೂ ಸೇರಿದವರು. ಆದರೆ, ಅವರು ಅಸ್ತಿತ್ವದ ರಾಜಕಾರಣವನ್ನು ಮೀರಿದವರಾಗಿದ್ದರು. ಗಾಂಧೀಜಿ ವಿಶ್ವದಲ್ಲಿ ಎಲ್ಲರಿಗೂ ಸೇರಿರುವ ಸಾರ್ವತ್ರಿಕ ವ್ಯಕ್ತಿತ್ವದವರು’ ಎಂದು ಹೇಳಿದರು.

‘ಗಾಂಧೀಜಿ ಅವರು ಅನೇಕ ಭಾರತೀಯರಿಂದ ಟೀಕೆಗೊಳಗಾಗಿದ್ದರೂ ಅವರ ವಿಚಾರಗಳಲ್ಲಿ ಇಂದಿಗೂ ಪ್ರಸ್ತುತವಾಗುವಂತಹ ಅನೇಕ ಅಂಶಗಳಿವೆ. ಪ್ರಸಕ್ತ ದಿನಗಳಲ್ಲಿ ಈ ಅಂಶಗಳ ಬಗ್ಗೆ ವಿಮರ್ಶಕರು ಬೆಳಕು ಚೆಲ್ಲಬೇಕಾದ ಅಗತ್ಯವಿದೆ’ ಎಂದು ಗುಹಾ ಪ್ರತಿಪಾದಿಸಿದರು.

ಇತಿಹಾಸ ಕುರಿತು ಗುಹಾ ಅವರ ಅನುಭವಗಳು, ಗಾಂಧಿ ಅವರ ಜೀವನಚರಿತ್ರೆಕಾರರಾಗಿ ಒಳನೋಟಗಳು, ಕ್ರಿಕೆಟ್ ಮತ್ತು ಪರಿಸರ ವಿಜ್ಞಾನ ಕುರಿತ ಬರಹಗಳು ಹಾಗೂ ಲೇಖಕರಾಗಿ ಅವರ ಮೇಲೆ ಪ್ರಭಾವ ಬೀರಿದ ಅಂಶಗಳ ಮೇಲೆ ಚರ್ಚೆಯು ಕೇಂದ್ರೀಕೃತವಾಗಿತ್ತು.

ಎ ಸೂಟಬಲ್ ಏಜೆನ್ಸಿಯ ಸಂಸ್ಥಾಪಕಿ ಹೇಮಾಲಿ ಸೋಧಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.