ಬದೋಹಿ (ಉತ್ತರ ಪ್ರದೇಶ): ಒಂದು ತಿಂಗಳ ಹಿಂದೆ ಅಪಹರಣವಾಗಿದ್ದ 17 ವರ್ಷದ ದಲಿತ ಬಾಲಕಿಯನ್ನು ರಕ್ಷಣೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಹರಣದ ಬಳಿಕ ಆಕೆಯ ಅಶ್ಲೀಲ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು.
.ಕೊಳ್ಳೇಗಾಲ | ಬಾಲಕಿ ಅಪಹರಣ: ಪ್ರಕರಣ ದಾಖಲು.
‘ನಾವು ಮನವಿ ಮಾಡಿದರೂ ಪೊಲೀಸರು ಎಫ್‌ಐಆರ್ ದಾಖಲಿಸಿರಲಿಲ್ಲ. ಬಾಲಕಿಯ ಹಲವು ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾಗದ ಬಳಿಕ ಮೇ 9ರಂದು ಎಫ್‌ಐಆರ್ ದಾಖಲಿಸಿದ್ದಾರೆ’ ಎಂದು ಸಂತ್ರಸ್ತ ಬಾಲಕಿಯ ಪೋಷಕರು ತಿಳಿಸಿದ್ದಾರೆ.

ಮಾರ್ಚ್ 22ರಿಂದ ಯುವತಿ ಕಾಣೆಯಾಗಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
.ಬೀದರ್: ಒಂದೂವರೆ ವರ್ಷದ ಮಗು ಅಪಹರಣ.
ಮನೆಯೊಂದರಲ್ಲಿ ಯುವತಿಯನ್ನು ಶನಿವಾರ ರಕ್ಷಣೆ ಮಾಡಲಾಗಿದೆ. ವೈದ್ಯಕೀಯ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಯುವತಿಯ ಕುಟುಂಬಸ್ಥರು ಸದ್ಯ ತಲೆಮರೆಸಿಕೊಂಡಿರುವ ಆಟೊ ಡ್ರೈವರ್ ಅಜಿತ್ ಎಂಬವನ ಮೇಲೆ ದೂರು ದಾಖಲಿಸಿದ್ದಾರೆ.

ಐಪಿಸಿ ದಂಡ ಸಂಹಿತೆಯ ಸೆಕ್ಷನ್ 363ರಡಿ (ಅಪಹರಣ) ಪ್ರಕರಣದ ದಾಖಲಾಗಿದೆ. ಬಾಲಕಿಯ ವಿಡಿಯೊವನ್ನು ಆನ್‌ಲೈನ್‌ನಲ್ಲಿ ಹಂಚಿದವರನ್ನು ಬಂಧಿಸಲು ಪಯತ್ನಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
.40 ದಿನದ ಮಗು ಅಪಹರಣ: ಐವರ ಬಂಧನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.