ಮಧುಬನಿ: ಶ್ರವಣ ದೋಷವಿರುವ ಮತ್ತು ಮಾತು ಬಾರದ 15 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ಬಿಹಾರದ ಮಧುಬನಿಯಲ್ಲಿ ನಡೆದಿದೆ.

‘ಬಾಲಕಿಯು ಅವರನ್ನು ಗುರುತಿಸಬಾರದು ಎಂಬ ಕಾರಣಕ್ಕೆ ಆಕೆಯ ಕಣ್ಣುಗಳಿಗೆ ಚೂಪಾದ ವಸ್ತುವಿನಿಂದ ಚುಚ್ಚಿ ಹಾನಿಯನ್ನುಂಟು ಮಾಡಲಾಗಿದೆ. ಬಾಲಕಿಯ ಎರಡೂ ಕಣ್ಣುಗಳು ಹಾನಿಗೊಳಗಾಗಿವೆ. ಆದರೆ ಆಕೆ ಸಂಪೂರ್ಣ ದೃಷ್ಟಿ ಕಳೆದುಕೊಂಡಿದ್ದಾಳೆಯೊ ಇಲ್ಲವೊ ಎಂಬುದು ಇನ್ನೂ ತಿಳಿದಿಲ್ಲ. ಆಕೆಯ ಪರಿಸ್ಥಿತಿ ಬಹಳ ಗಂಭೀರವಾಗಿದೆ’ ಎಂದು ಪೊಲೀಸರು ತಿಳಿಸಿದರು.

‘ಕುವಹಾ ಬಾರ್ಹಿ ಗ್ರಾಮದಲ್ಲಿ ಮಂಗಳವಾರ ಈ ಘಟನೆ ನಡೆದಿದ್ದು, ಬಾಲಕಿ ಮೇಕೆಯನ್ನು ಮೇಯಿಸಲೆಂದು ಮನೆಯಿಂದ ಹೊರಗೆ ಬಂದಿದ್ದಾಗ ಆರೋಪಿಗಳು ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಈ ಪ್ರಕರಣ ಸಂಬಂಧ ಮೂವರನ್ನು ಬಂಧಿಸಲಾಗಿದೆ’ ಎಂದು ವರಿಷ್ಠ ಪೊಲೀಸ್ ಅಧಿಕಾರಿ ಸತ್ಯ ಪ್ರಕಾಶ್ ಅವರು ಮಾಹಿತಿ ನೀಡಿದರು.

‘ಬಾಲಕಿಯನ್ನು ಮೊದಲು ಸ್ಥಳೀಯ ಉಮ್ಗಾಂವ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಆದರೆ ಆಕೆಯ ಪರಿಸ್ಥಿತಿ ಬಹಳ ಗಂಭೀರವಾಗಿದ್ದರಿಂದ ಬಳಿಕ ಮಧುಬನಿ ಸದಾರ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು’ ಎಂದು ಹರಲಕ್ಕಿ ಪೊಲೀಸ್ ಠಾಣೆಯ ಅಧಿಕಾರಿ ಪ್ರೇಮ್ ಲಾಲ್ ಪಾಸ್ವಾನ್ ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.