ನವದೆಹಲಿ: ಪಟಾಕಿ ನಿಷೇಧ ನಿಯಮವನ್ನು ನಾಗರಿಕರು ಗಾಳಿಗೆ ತೂರಿದ ಪರಿಣಾಮ, ದೆಹಲಿಯಲ್ಲಿ ಅಲ್ಪ ಸುಧಾರಣೆ ಕಂಡಿದ್ದ ವಾಯು ಮಾಲಿನ್ಯ ಪ್ರಮಾಣ ಇಂದು (ಸೋಮವಾರ) ಮತ್ತೆ ಹೆಚ್ಚಳವಾಗಿದೆ.

ಭಾನುವಾರ ಮಾಲಿನ್ಯ ಕಣಗಳ ಪ್ರಮಾಣ ಪ್ರತಿ ಘನ ಮೀಟರ್‌ಗೆ ಸರಾಸರಿ 218 ಇತ್ತು. ಇದು ಕಳೆದ 8 ವರ್ಷಗಳಲ್ಲಿ ದೀಪಾವಳಿ ವೇಳೆಯಲ್ಲಿ ದಾಖಲಾದ ಉತ್ತಮ ವಾಯುಗುಣಮಟ್ಟ ಸೂಚ್ಯಂಕ. ಆದರೆ ಭಾನುವಾರ ರಾತ್ರಿ ಪಟಾಕಿ ಸಿಡಿಸಿದ್ದರಿಂದಾಗಿ ವಾಯುಗುಣಮಟ್ಟ ಮತ್ತೆ ಇಳಿಕೆಯಾಗಿದೆ.
.ದೆಹಲಿ ಮಾಲಿನ್ಯ: ಚಳಿಗಾಲದ ಸನ್ನದ್ಧತೆ ಕುರಿತು ವರದಿ ಕೇಳಿದ ಸುಪ್ರೀಂ ಕೋರ್ಟ್ .
ಬೆಳಿಗ್ಗೆ ಏಳು ಗಂಟೆಗೆ ಮಾಲಿನ್ಯ ಕಣಗಳ ಪ್ರಮಾಣ ಪ್ರತಿ ಘನ ಮೀಟರ್‌ಗೆ 278 (ಅತೀ ಕಳಪೆ) ಇದ್ದರೆ, ಮಧ್ಯಾಹ್ನ 12 ಗಂಟೆ ವೇಳೆಗೆ ಅದು 322ಕ್ಕೆ ಏರಿಕೆಯಾಗಿದೆ. ಅಯನಗರ(383) , ಕೇಂದ್ರ ರಸ್ತೆ ಸಂಶೋಧನೆ ಪ್ರದೇಶ (393) ಹಾಗೂ ಪುಸಾ (391) ದಲ್ಲಿ ಹೆಚ್ಚಿನ ಪ್ರಮಾಣದ ಮಾಲಿನ್ಯ ದಾಖಲಾಗಿದೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಹಿತಿಯನ್ವಯ 2022ರ ದೀಪಾವಳಿ ಅವಧಿಯಲ್ಲಿ ದೆಹಲಿಯ ಮಾಲಿನ್ಯ ಕಣಗಳ ಪ್ರಮಾಣ ಪ್ರತಿ ಘನ ಮೀಟರ್‌ಗೆ 312 ಇತ್ತು. 2021ರಲ್ಲಿ 382, 2020ರಲ್ಲಿ 414, 2019ರಲ್ಲಿ 337, 2018ರಲ್ಲಿ 281, 2017ರಲ್ಲಿ 319 ಹಾಗೂ 2016ರಲ್ಲಿ 431 ಇತ್ತು.
.ದೆಹಲಿ ವಾಯುಮಾಲಿನ್ಯ| ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ: ಗೌತಮ್ ಗಂಭೀರ್.
ದೀಪಾವಳಿಗೂ ಮುನ್ನ ಮಳೆಯಾಗಿದ್ದರಿಂದ ಮಾಲಿನ್ಯದ ಪರದೆ ಸರಿದು, ಶನಿವಾರ ಹಾಗೂ ಭಾನುವಾರ ದೆಹಲಿ ಮಂದಿಗೆ ತಿಳಿ ಆಕಾಶ ಗೋಚರಿಸಿತ್ತು. ಮಾಲಿನ್ಯ ಕಣಗಳ ಪ್ರಮಾಣವೂ ಇಳಿಕೆಯಾಗಿತ್ತು. ಹೀಗಾಗಿ ಸಮ–ಬೆಸ ವಾಹನ ಸಂಚಾರ ವ್ಯವಸ್ಥೆಯನ್ನು ಮುಂದೂಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.