ನವದೆಹಲಿ: ತಿಹಾರ್ ಜೈಲಿನಲ್ಲಿರುವ, ಅಗಸ್ಟಾ ವೆಸ್ಟ್ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣದ ಶಂಕಿತ ಮಧ್ಯವರ್ತಿ ಕ್ರಿಶ್ಚಿಯನ್ ಮೈಕೆಲ್ ಅವರ ವಿಚಾರಣೆ ನಡೆಸಲು ಜಾರಿ ನಿರ್ದೇಶನಾಯಕ್ಕೆ (ಇ.ಡಿ) ದೆಹಲಿ ಹೈಕೋರ್ಟ್ ಅನುಮತಿ ನೀಡಿದೆ.

ವಿಶೇಷ ನ್ಯಾಯಾಧೀಶ ಪುಲಸ್ತ್ಯ ಪ್ರಮಾಚಲ ಅವರು ಮೇ 25 ಮತ್ತು 26 ರಂದು ತಿಹಾರ್ ಜೈಲು ಆವರಣದಲ್ಲಿ ಮೈಕೆಲ್ ಅವರನ್ನು ವಿಚಾರಣೆ ನಡೆಸಲು ಜಾರಿ ನಿರ್ದೇಶನಾಲಯಕ್ಕೆ ಶನಿವಾರ ಅನುಮತಿ ನೀಡಿದ್ದಾರೆ.

ಯುಪಿಎ ಅವಧಿಯಲ್ಲಿ ಗಣ್ಯರ ಬಳಕೆಯ ಹೆಲಿಕಾಪ್ಟರ್ ಖರೀದಿಯಲ್ಲಿ ನಡೆದಿದೆ ಎನ್ನಲಾದ ₹3,600 ಕೋಟಿ ಮೊತ್ತದ ಹಗರಣದಲ್ಲಿ ಮೈಕೆಲ್ ಭಾರತಕ್ಕೆ ಬೇಕಾಗಿದ್ದರು.

ಮೈಕೆಲ್ ಲಂಚ ಪಡೆದಿದ್ದಾರೆ ಎಂದು ಇ.ಡಿ 2016ರ ಜೂನ್ ತಿಂಗಳಲ್ಲಿ ಆರೋಪ ಪಟ್ಟಿ ದಾಖಲಿಸಿತ್ತು.

ಮೈಕೆಲ್ ಅವರನ್ನು 2018ರ ಡಿಸೆಂಬರ್ 4ರಂದು ಸಂಯುಕ್ತ ಅರಬ್ ಒಕ್ಕೂಟ ಭಾರತಕ್ಕೆ ಗಡಿಪಾರು ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.