ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಕುರಿತಾಗಿ ‘ಇಂಡಿಯಾ: ದಿ ಮೋದಿ ಕ್ವೆಶ್ಚನ್’ ಎಂಬ ಸಾಕ್ಷ್ಯಚಿತ್ರ ನಿರ್ಮಿಸಿದ್ದ ಬ್ರಿಟಿಷ್ ಬ್ರಾಡ್ಕಾಸ್ಟಿಂಗ್ ಕಾರ್ಪೊರೇಷನ್ನ ಕಾರ್ಯಕ್ರಮದಿಂದ ದೇಶದ ಘನತೆಗೆ ಧಕ್ಕೆಯಾಗಿದೆ ಹಾಗೂ ಪ್ರಧಾನಿ ಮೋದಿ ಕುರಿತ ಅವಹೇಳನಕಾರಿ ಅಂಶಗಳಿವೆ ಎಂದು ದಾವೆ ಹೂಡಿದ್ದ ಸ್ವಯಂ ಸೇವಾ ಸಂಸ್ಥೆಯ ಅರ್ಜಿಯ ವಿಚಾರಣೆಯಿಂದ ದೆಹಲಿ ಹೈಕೋರ್ಟ್ನ ನ್ಯಾಯಮೂರ್ತಿ ಹಿಂದೆ ಸರಿದಿದ್ದಾರೆ.

ಸಾಕ್ಷ್ಯಚಿತ್ರ ವಿರುದ್ಧ ಅರ್ಜಿಯು ನ್ಯಾ. ಅನೂಪ್ ಜೈರಾಂ ಭಂಭಾನಿ ಅವರಿದ್ದ ಪೀಠದ ಮುಂದೆ ಬಂದಿತು. ಆದರೆ ಮೇ 22ರಂದು ಈ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅವರ ಆದೇಶಕ್ಕೆ ಒಳಪಟ್ಟು ಮತ್ತೊಂದು ಪೀಠಕ್ಕೆ ವರ್ಗಾಯಿಸುವಂತೆ ನ್ಯಾಯಮೂರ್ತಿ ಹೇಳಿದರು.

ಇದಕ್ಕೂ ಪೂರ್ವದಲ್ಲಿ ಗುಜರಾತ್ ಮೂಲದ ಸ್ವಯಂ ಸೇವಾ ಸಂಸ್ಥೆಯ ಅರ್ಜಿ ಆಧರಿಸಿ ಬಿಬಿಸಿ (ಬ್ರಿಟನ್) ಹಾಗೂ ಬಿಬಿಸಿ (ಭಾರತ) ಗೆ ದೆಹಲಿ ಹೈಕೋರ್ಟ್ ನೋಟಿಸ್ ಜಾರಿ ಮಾಡಿತ್ತು.

‘ಬ್ರಿಟನ್ ಮೂಲದ ಬಿಬಿಸಿಯು ಅಲ್ಲಿನ ರಾಷ್ಟ್ರೀಯ ಸುದ್ದಿ ಸಂಸ್ಥೆಯಾಗಿದ್ದು, ‘ಇಂಡಿಯಾ: ದಿ ಮೋದಿ ಕ್ವೆಶ್ಚನ್’ ಎಂಬ ಸಾಕ್ಷ್ಯಚಿತ್ರವನ್ನು ಭಾರತದಲ್ಲಿ ಎರಡು ಭಾಗಗಳಲ್ಲಿ ಬಿಬಿಸಿ (ಭಾರತ) 2023ರ ಜನವರಿಯಲ್ಲಿ ಪ್ರಸಾರ ಮಾಡಿತ್ತು. ಸಾಕ್ಷ್ಯಚಿತ್ರದಿಂದಾಗಿ ದೇಶದ ಘನತೆಗೆ ಧಕ್ಕೆಯುಂಟಾಗಿದೆ. ಇದರ ಮೂಲಕ ಪ್ರಧಾನಿ ನರೇಂದ್ರ ಮೋದಿ ಹಾಗೂ ದೇಶದ ನ್ಯಾಯಾಂಗದ ವಿರುದ್ಧ ಸುಳ್ಳು ಹಾಗೂ ಮಾನಹಾನಿಕರ ಆರೋಪಗಳನ್ನು ಮಾಡಲಾಗಿದೆ ಎಂದು ಆರೋಪಿಸಿ ಗುಜರಾತ್ ಮೂಲದ ‘ಜಸ್ಟಿಸ್ ಆನ್ ಟ್ರಯಲ್’ ಎಂಬ ಸ್ವಯಂ ಸೇವಾ ಸಂಸ್ಥೆಯು (ಎನ್ಜಿಒ) ಮಾನನಷ್ಟ ಮೊಕದ್ದಮೆ ದಾಖಲಿಸಿತ್ತು. ಆಗಿರುವ ಹಾನಿಗೆ ₹10 ಸಾವಿರ ಕೋಟಿ ಪರಿಹಾರ ಕೊಡಿಸಬೇಕು’ ಎಂದು ಅರ್ಜಿಯಲ್ಲಿ ಕೋರಲಾಗಿತ್ತು.

ಈ ಸಾಕ್ಷ್ಯಚಿತ್ರವು 2002ರಲ್ಲಿ ಗುಜರಾತ್ನಲ್ಲಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿಯಾಗಿದ್ದಾಗ ನಡೆದ ಗಲಭೆ ಕುರಿತದ್ದಾಗಿದೆ. ಇದು ಬಿಡುಗಡೆಯಾದ ಕೂಡಲೇ ಅದನ್ನು ಸರ್ಕಾರ ನಿಷೇಧಿಸಿತು.

ಇದರ ಬೆನ್ನಲ್ಲೇ, ಇದೇ ಸಾಕ್ಷ್ಯಚಿತ್ರ ಆಧರಿಸಿದ ಕೆಲವ ವಿಡಿಯೊ ಹಾಗೂ ಮಾಹಿತಿಯನ್ನು ಯುಟ್ಯೂಬ್ ಮತ್ತು ಟ್ವಿಟರ್ನಿಂದ ತೆಗೆದುಹಾಕುವಂತೆ ಸರ್ಕಾರ ಸೂಚಿಸಿತ್ತು. ಇದೊಂದು ವಸಾಹತು ಮನಸ್ಥಿತಿಯ ಪ್ರಚಾರದ ತುಣುಕು ಎಂದು ವಿದೇಶಾಂಗ ಸಚಿವಾಲಯ ಹೇಳಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.