ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗುರುವಾರ ದಾಖಲಾದ ಗರಿಷ್ಠ ತಾಪಮಾನ 45.6 ಡಿಗ್ರಿ ಸೆಲ್ಸಿಯಸ್ ಆಗಿತ್ತು. ಇದು ವಾಡಿಕೆಯ ತಾಪಮಾನಕ್ಕಿಂತ 5.2 ಡಿಗ್ರಿಯಷ್ಟು ಹೆಚ್ಚು ಎಂದು ಹವಾಮಾನ ಇಲಾಖೆ ತಿಳಿಸಿದೆ.

ದೆಹಲಿಯು ಕಳೆದ ನಾಲ್ಕು ದಿನಗಳಿಂದ ಉಷ್ಣಗಾಳಿಯ ಪ್ರಕೋಪಕ್ಕೆ ತುತ್ತಾಗಿದೆ. ದೆಹಲಿಯ ಸಫ್ದರ್ಜಂಗ್ ಆಬ್ಸರ್ವೇಟರಿಯಲ್ಲಿ ಗುರುವಾರ ದಾಖಲಾಗಿರುವುದು ಈ ಬಾರಿಯ ಬೇಸಿಗೆಯ ಎರಡನೆಯ ಅತಿಹೆಚ್ಚಿನ ತಾಪಮಾನ.

ದೆಹಲಿಯ ಮಂಗೇಶಪುರದಲ್ಲಿ ಬುಧವಾರ ಗರಿಷ್ಠ 52.9 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಇದು ದೇಶದಲ್ಲಿ ದಾಖಲಾದ ಅತಿಹೆಚ್ಚಿನ ತಾಪಮಾನ.

ಈ ವಿಚಾರವಾಗಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಹವಾಮಾನ ಇಲಾಖೆಯ ಅಧಿಕಾರಿಗಳು, ಅಲ್ಲಿ ತಾಪಮಾನವನ್ನು ದಾಖಲಿಸುವಲ್ಲಿ ಏನಾದರೂ ದೋಷಗಳು ಆಗಿವೆಯೇ ಎಂಬುದನ್ನು ಪರಿಶೀಲಿಸುವ ಕೆಲಸ ನಡೆದಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.