ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಗಾಳಿಯ ಗುಣಮಟ್ಟ ತೀವ್ರ ಕಳಪೆ ಮಟ್ಟಕ್ಕೆ ಕುಸಿದಿರುವ ಹಿನ್ನೆಲೆಯಲ್ಲಿ ವಿಧಿಸಲಾಗಿರುವ ‘ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್’ (GRAP-3) ಕ್ರಮಗಳ ಭಾಗವಾಗಿ ನಗರದಲ್ಲಿ 106 ಹೆಚ್ಚುವರಿ ಬಸ್ಗಳು ಸಂಚರಿಸಲಿವೆ. ಜೊತೆಗೆ ನಗರದಲ್ಲಿ ಮೆಟ್ರೊ ರೈಲುಗಳು 60 ಹೆಚ್ಚುವರಿ ಟ್ರಿಪ್ ನಡೆಸಲಿವೆ ಎಂದು ದೆಹಲಿ ಪರಿಸರ ಸಚಿವ ಗೋಪಾಲ್ ರೈ ತಿಳಿಸಿದ್ದಾರೆ.

ದೆಹಲಿಯ ಗಾಳಿಯ ಗುಣಮಟ್ಟ ತೀರ ಹದಗೆಟ್ಟಿದ್ದು, ವಾಯು ಗುಣಮಟ್ಟ ನಿರ್ವಹಣೆ ಆಯೋಗವು (ಸಿಎಕ್ಯೂಎಂ) GRAP-3 ಕ್ರಮಗಳನ್ನು ವಿಧಿಸಿದೆ. ಇಂದು (ಶುಕ್ರವಾರ) ನಗರದ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 411ಕ್ಕೆ ತಲುಪಿದೆ.

‘ಇ–ಬಸ್ಗಳನ್ನು ಹೊರತುಪಡಿಸಿ, ಅಂತರರಾಜ್ಯಗಳ ಬಸ್ಗಳು ಮತ್ತು ಸಿಎನ್ಜಿ ವಾಹನಗಳನ್ನು ನಿಷೇಧಿಸಲಾಗಿದೆ. ಹೆಚ್ಚುವರಿಯಾಗಿ, ಬಿಎಸ್–3 ಮತ್ತು ಬಿಎಸ್–5 ಡೀಸೆಲ್ ನಾಲ್ಕು ಚಕ್ರಗಳ ವಾಹನಗಳನ್ನು ಕೂಡ ನಿಷೇಧಿಸಲಾಗಿದೆ’ ಎಂದು ರೈ ತಿಳಿಸಿದ್ದಾರೆ.

‘ಖಾಸಗಿ ವಾಹನಗಳ ಬಳಕೆಯನ್ನು ಕಡಿಮೆಗೊಳಿಸಲು ಮತ್ತು ಸಾರ್ವಜನಿಕ ಸಾರಿಗೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ 106 ಹೆಚ್ಚುವರಿ ಬಸ್ಗಳನ್ನು ದೆಹಲಿ ಸಾರಿಗೆ ನಿಗಮ ಪರಿಚಯಿಸಿದೆ. ಜೊತೆಗೆ ನಗರದ ಮೆಟ್ರೊ ರೈಲುಗಳು 60 ಹೆಚ್ಚುವರಿ ಟ್ರಿಪ್ ನಡೆಸಲಿವೆ’ ಎಂದು ಅವರು ಹೇಳಿದ್ದಾರೆ.

‘ಗಾಳಿಯ ಗುಣಮಟ್ಟ ಇನ್ನಷ್ಟು ಹದಗೆಟ್ಟರೆ ಕೃತಕ ಮಳೆಯಂತಹ ತುರ್ತು ಕ್ರಮಗಳನ್ನು ಕೈಗೊಳ್ಳಲಾಗುವುದು. GRAP 3 ಕ್ರಮಗಳ ಅಡಿಯಲ್ಲಿ ಖಾಸಗಿ ಕಟ್ಟಡಗಳ ನಿರ್ಮಾಣ ಮತ್ತು ಕಟ್ಟಡ ತೆರವುಗೊಳಿಸುವ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ’ ಎಂದು ರೈ ತಿಳಿಸಿದ್ದಾರೆ.

ದೆಹಲಿ ಮತ್ತು ಅದರ ನೆರೆಯ ಪ್ರದೇಶಗಳಲ್ಲಿ ವಾಯು ಮಾಲಿನ್ಯ ನಿಭಾಯಿಸಲು ತುರ್ತು ಕಾರ್ಯತಂತ್ರವಾಗಿ 2017ರಲ್ಲಿ GRAP, ಅಥವಾ ‘ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್’ ಪರಿಚಯಿಸಲಾಗಿದೆ.
.ದೆಹಲಿ ಗಾಳಿಯ ಗುಣಮಟ್ಟ 'ತೀವ್ರ ಕಳಪೆ': 418ಕ್ಕೆ ತಲುಪಿದ AQI ಸೂಚ್ಯಂಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.