ನವದೆಹಲಿ : 2017ರಲ್ಲಿ ದೇಶದ ಪ್ರತಿ7 ಮಂದಿಯಲ್ಲಿ ಒಬ್ಬರು ಮಾನಸಿಕ ರೋಗದಿಂದ ಬಳಲಿದ್ದು, ಇವರಲ್ಲಿ ಖಿನ್ನತೆ ಮತ್ತು ಭಾವೋದ್ರೇಕಕ್ಕೆ ಒಳಗಾದವರು ಹೆಚ್ಚು ಎಂದು ಅಧ್ಯಯನ ತಿಳಿಸಿದೆ.

ಮಾನಸಿಕ ಅಸ್ವಸ್ಥತೆಯ 10 ವಿಭಾಗಗಳಲ್ಲಿ ಕರ್ನಾಟಕವು 6ರಲ್ಲಿ ದೇಶದ ಸರಾಸರಿಗಿಂತ ಅಧಿಕ ರೋಗಿಗಳನ್ನು ಹೊಂದಿದೆ ಎಂದು ವರದಿ ತಿಳಿಸಿದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್), ಭಾರತೀಯ ಸಾರ್ವಜನಿಕ ಆರೋಗ್ಯ ಪ್ರತಿಷ್ಠಾನ (ಪಿಎಚ್ಎಫ್ಇ) ಸಹಯೋಗದಲ್ಲಿ ‘ಇಂಡಿಯಾ ಸ್ಟೇಟ್ ಲೆವೆಲ್ ಡಿಸೀಸ್ ಬರ್ಡನ್ ಇನಿಷಿಯೇಟಿವ್’ ಈ ಅಧ್ಯಯನವನ್ನುಭಾರತದ ಎಲ್ಲ ರಾಜ್ಯಗಳಲ್ಲಿ ನಡೆಸಿದ್ದು, ವರದಿಯನ್ನು‘ಲ್ಯಾನ್ಸೆಟ್ ಸೈಕಿಯಾಟ್ರಿ’ ನಿಯತಕಾಲಿಕೆಯು ಪ್ರಕಟಿಸಿದೆ.

ಅಧ್ಯಯನಕ್ಕೆ ಮೂರು ದಶಕಗಳಲ್ಲಿ ಸಂಗ್ರಹಿಸಲಾದ ವೈದ್ಯಕೀಯ ದತ್ತಾಂಶವನ್ನು ಬಳಸಿಕೊಳ್ಳಲಾಗಿದೆ.1990ರಲ್ಲಿ ಮೊದಲ ವರದಿಯನ್ನು‘ಲ್ಯಾನ್ಸೆಟ್ ಸೈಕಿಯಾಟ್ರಿ’ಯಲ್ಲಿಯೇ ಪ್ರಕಟಿಸಲಾಗಿತ್ತು.

ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವವರ ಸಂಖ್ಯೆಯು 1990–2017ರ ಅವಧಿಯಲ್ಲಿ ದ್ವಿಗುಣಗೊಂಡಿದೆ.ಸ್ಕಿಜೋಫ್ರೇನಿಯಾ, ಖಿನ್ನತೆ, ಭಾವೋದ್ರೇಕ,ಉನ್ಮಾದ ಖಿನ್ನತೆಯ ಕಾಯಿಲೆ (ಬೈಪೋಲಾರ್ ಡಿಸಾರ್ಡರ್), ನರರೋಗ ಸಮಸ್ಯೆ (ಆಟಿಸಂ) ಸೇರಿದಂತೆ ರೋಗಗಳು ಭಾರತದ ಕೋಟ್ಯಂತರ ಮಂದಿಯನ್ನು ಬಾಧಿಸುತ್ತಿದೆ. ಇದನ್ನು ನಿವಾರಿಸಲು ಯೋಜಿತ ರೀತಿಯಲ್ಲಿ ಕಾರ್ಯನಿರ್ವಹಿಸಬೇಕಿದೆ ಎಂಬ ಸಲಹೆಯನ್ನೂ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.