ಚೆನ್ನೈ: ತಮಿಳುನಾಡಿನ ತೆಲುಗು ಮಾತನಾಡುವ ಜನರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದ ನಟಿ ಕಸ್ತೂರಿ ಅವರನ್ನು ಪೊಲೀಸರು ಹೈದರಾಬಾದ್ನಲ್ಲಿ ಶನಿವಾರ ಬಂಧಿಸಿದ್ದಾರೆ.

ನಟಿಯ ಹೇಳಿಕೆಗಳು ದ್ವೇಷ ಭಾಷಣದಿಂದ ಕೂಡಿವೆ ಎಂಬುದನ್ನು ಮನಗಂಡ ಮದ್ರಾಸ್ ಹೈಕೋರ್ಟ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಎರಡು ದಿನಗಳ ಹಿಂದಷ್ಟೇ ವಜಾಗೊಳಿಸಿತ್ತು.

ಅದರ ಬೆನ್ನಲ್ಲೇ ನಟಿ ಕಸ್ತೂರಿ ಅವರ ಬಂಧನವಾಗಿದೆ. ಹೈದರಾಬಾದ್ನಲ್ಲಿ ಅಡಗಿದ್ದ ನಟಿಯನ್ನು ತಮಿಳುನಾಡು ಪೊಲೀಸರ ವಿಶೇಷ ತಂಡ ಪತ್ತೆ ಹಚ್ಚಿ ಬಂಧಿಸಿತು ಎಂದು ಮೂಲಗಳು ತಿಳಿಸಿವೆ.

ನವೆಂಬರ್ 3ರಂದು ಸಭೆಯೊಂದರಲ್ಲಿ ಕಸ್ತೂರಿ ಅವರು ತಮಿಳುನಾಡಿನಲ್ಲಿ ನೆಲೆಸಿರುವ ತೆಲುಗು ಭಾಷಿಗರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದರು.

ಅವರ ಹೇಳಿಕೆಗಳನ್ನು ಖಂಡಿಸಿ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಮದುರೈನಲ್ಲಿ ದೂರು ದಾಖಲಾಗಿತ್ತು. ಇದರ ಬೆನ್ನಲ್ಲೇ ನಟಿಯ ನಿರೀಕ್ಷಣಾ ಜಾಮೀನು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.