ಸುಪ್ರೀಂಕೋರ್ಟ್ನಲ್ಲಿ ಗುರುವಾರಅನರ್ಹ ಶಾಸಕರ ಮೇಲ್ಮನವಿ ವಿಚಾರಣೆ ನಡೆಯಿತು. ಸ್ಪೀಕರ್, ಅನರ್ಹ ಶಾಸಕರು, ಕಾಂಗ್ರೆಸ್, ಜೆಡಿಎಸ್, ಚುನಾವಣೆ ಆಯೋಗದ ವಕೀಲರ ವಾದ ವಿವಾದ ಆಲಿಸಿದ ತ್ರಿಸದಸ್ಯ ಪೀಠ ಉಪ ಚುನಾವಣೆ ಪ್ರಕ್ರಿಯೆಯನ್ನು ಮುಂದೂಡಿದೆ. ಅನರ್ಹ ಶಾಸಕರ ಪ್ರಕರಣವನ್ನು ಸಾಂವಿಧಾನಿಕ ಪೀಠ ಪರಾಮರ್ಶೆ ನಡೆಸಬೇಕಿದೆ ಎಂದು ಪೀಠ ತಿಳಿಸಿದೆ. ಇಡೀ ದಿನದ ಬೆಳವಣಿಗೆಯ ಸಂಪೂರ್ಣ ಮಾಹಿತಿ ಇಲ್ಲಿದೆ.

ಕ್ಷಣ ಕ್ಷಣದ ಸುದ್ದಿ

4.08:ಅಕ್ಟೋಬರ್ 22ರಿಂದ ಪ್ರಕರಣದ ವಿಸ್ತೃತ ವಿಚಾರಣೆ ಆರಂಭಿಸಲು ನ್ಯಾಯ ಪೀಠದ ನಿರ್ಧಾರ.

4.05:ಪ್ರಕರಣದ ತೀರ್ಪು ಹೊರ ಬೀಳುವವರೆಗೆ ಉಪ ಚುನಾವಣೆಯನ್ನು ಮುಂದೂಡಬಹುದು ಎಂಬ ಆಯೋಗದ ಕೋರಿಕೆಯ ಮೇರೆಗೆ ಚುನಾವಣೆ ಮುಂದೂಡಲು ಸುಪ್ರೀಂ ಕೋರ್ಟ್ ಸೂಚನೆ.

4.00:ಚುನಾವಣೆ ಮುಂದೂಡಿ ಈ ಪ್ರಕರಣದ ಕುರಿತು ವಿಸ್ತೃತ ವಿಚಾರಣೆ ನಡೆಸಲು ನ್ಯಾಯಪೀಠದ ನಿರ್ಧಾರ. ಮುಂದಿನ ವಾರ ಮತ್ತೆ ವಿಚಾರಣೆ.ಚುನಾವಣೆಗೆ ಸದ್ಯಕ್ಕೆ ತಡೆ

3.57:ಚುನಾವಣಾ ಪ್ರಕ್ರಿಯೆಗೆ ತಡೆ ನೀಡುವುದು ಬೇಡ. ರಾಜೀನಾಮೆಯನ್ನು ಸ್ವೀಕರಿಸುವುದು ಅಗತ್ಯ. ಅನರ್ಹಗೊಳಿಸಿದ ಕ್ರಮ ಸರಿಯಲ್ಲ. ಕ್ಷೇತ್ರವು ತೆರವಾಗಿದ್ದರಿಂದ ಚುನಾವಣೆ ನಡೆಯಲೇಬೇಕು. ನೀವು ಸಾಂವಿಧಾನಿಕ ಪೀಠದೆದುರು ಈ ಕುರಿತ ಚರ್ಚೆ ನಡೆಸಬಹುದು.

ಚುನಾವಣೆ ಅಧಿಸೂಚನೆಯನ್ನು ಯಾರೂ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿಲ್ಲ.ಜನರಿಗೆ ವಿಧಾನಸಭೆಯಲ್ಲಿ ಪ್ರತಿನಿಧಿ ಬೇಕು. ಹಾಗಾಗಿ ಪೀಠವು ಮಧ್ಯಂತರ ಆದೇಶ ಹೊರಡಿಸಿ ಚುನಾವಣೆ ಪ್ರಕ್ರಿಯೆ ಮುಂದುವರಿಸಿ. –ಚುನಾವಣಾ ಆಯೋಗದ ಪರ ವಕೀಲ ರಾಕೇಶ್ ದ್ವಿವೇದಿ ವಾದ

3.56:ಕೆಪಿಜೆಪಿ ವಿಲೀನ ಪ್ರಕ್ರಿಯೆ ಬಗ್ಗೆ ಸ್ಪೀಕರ್ ಪರ ವಕೀಲ ತುಷಾರ್ ಮೆಹ್ತಾವಿವರಣೆ: ವಿಲೀನ ಪ್ರಕ್ರಿಯೆ ಪೂರ್ಣಗೊಂಡ ಬಗ್ಗೆ ನಮ್ಮ ಬಳಿ ಯಾವುದೇ ದಾಖಲೆಗಳಿಲ್ಲ.

3.49:ಸ್ಪೀಕರ್ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಆರಂಭ

3.45:ಕಪಿಲ್ ಸಿಬಲ್ ವಾದ ಮಂಡನೆ ಮುಕ್ತಾಯ

3.35:ಕಾಗವಾಡದ ಶ್ರೀಮಂತ ಪಾಟೀಲ ಅವರು ಹೃದಯಾಘಾತ ಆಗಿದೆ ಎಂದು ಮುಂಬೈ ಆಸ್ಪತ್ರೆಗೆ ದಾಖಲಾದರು. ಅವರು ಸಲ್ಲಿಸಿದ ವೈದ್ಯಕೀಯ ಚಿಕಿತ್ಸೆಯ ಪ್ರಮಾಣಪತ್ರದಲ್ಲಿ ವೈದ್ಯರ ಹೆಸರು, ಸಹಿ, ಆಸ್ಪತ್ರೆ ಹೆಸರು ಇರಲಿಲ್ಲ. ಅವರಿಗೆ ಸ್ಪೀಕರ್ ಕಲಾಪದಲ್ಲಿ ಭಾಗವಹಿಸದೇ ಇರುವುದೇಕೆ ಎಂದು ಕೇಳಬಾರದೇ, ಸೂಕ್ತ ಉತ್ತರ ನೀಡದಾಗ ಕ್ರಮ ಕೈಗೊಳ್ಳಬಾರದೇ? ಕಾಂಗ್ರೆಸ್ ವಕೀಲ ಕಪಿಲ್ ಸಿಬಲ್

3.25:ಕಪಿಲ್ ಸಿಬಲ್ಗೆ ನ್ಯಾಯಮೂರ್ತಿಗಳ ಪ್ರಶ್ನೆ

ಕೆಪಿಜೆಪಿ ವಿಲೀನದ ಕುರಿತು ಸ್ಪೀಕರ್ ಅಧಿಸೂಚನೆ ಹೊರಡಿಸಿದ್ದರೇ?

ಕಪಿಲ್ ಸಿಬಲ್ ಉತ್ತರ

ಶಂಕರ್ ಅವರಿಗೆ ವಿಧಾನಸಭೆಯಲ್ಲಿ ಕಾಂಗ್ರೆಸ್ ಸಾಲಿನಲ್ಲೇ ಆಸನ ವ್ಯವಸ್ಥೆ ಮಾಡಲಾಗಿತ್ತು.

ಶಂಕರ್ ಪರ ವಕೀಲ ವಿ. ಗಿರಿ ಮಧ್ಯಪ್ರವೇಶ

ವಿಲೀನ ಪ್ರಕ್ರಿಯೆಯೇ ಪೂರ್ಣಗೊಳ್ಳದ್ದರಿಂದ ಅವರನ್ನು ಕಾಂಗ್ರೆಸ್ ಸದಸ್ಯ ಎಂದು ಪರಿಗಣಿಸುವುದು ಹೇಗೆ?

ಸಿಬಲ್ ವಾದ

ವಿಧಾನಸಭೆಯಲ್ಲಿ ಒಬ್ಬ ಸದಸ್ಯನನ್ನು ಒಳಗೊಂಡ ಪಕ್ಷದ ಶಾಸಕನೇ ವಿಲೀನಕ್ಕೆ ಒಪ್ಪಿದ್ದರಿಂದ ವಿಲೀನ ಪ್ರಕ್ರಿಯೆ ಪೂರ್ಣಗೊಂಡಿದೆ.

ವಿ. ಗಿರಿ ವಾದ

ಸ್ಪೀಕರ್ ಪರಮಾಧಿಕಾರ ಬೆಂಬಲಿಸುವ ಸಿಬಲ್ ಅವರು ವಿಲೀನದ ಈ ಪ್ರಕರಣದಲ್ಲಿ ಅವರ ನಿರ್ಧಾರವನ್ನು ಬೆಂಬಲಸುತ್ತಿಲ್ಲ. ಸ್ವತಃ ಸ್ಪೀಕರ್ ಅವರೇ ವಿಲೀನ ಪ್ರಕ್ರಿಯೆ ಪೂರ್ಣಗೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರಲ್ಲ?

ಸಿಬಲ್ ವಾದ

ರಾಜೀನಾಮೆ ಸಲ್ಲಿಸಲು ಮುಂಬೈನಿಂದ ಬಂದ ಶಂಕರ್ಬಿಜೆಪಿಯ ಮುಖಂಡರ ಜೊತೆ ಕಾಣಿಸಿಕೊಂಡಿದ್ದರು. ಶಂಕರ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ರಾಜಭವನಕ್ಕೆ ಬಿಜೆಪಿ ಮುಖಂಡರೊಂದಿಗೇ ಬಂದಿದ್ದರು. ಅವರು ಪಕ್ಷ ಬಿಡುವುದಕ್ಕೆ ಮೊದಲಿನಿಂದಲೂ ಸಿದ್ಧತೆ ನಡೆಸಿ ರಾಜೀನಾಮೆ ಸಲ್ಲಿಸಿದ್ದರು ಎಂಬುದಕ್ಕೆ ಈ ಅಂಶಗಳು ಪೂರಕ.

3.14:ಆರ್. ಶಂಕರ್ ಅವರು ತಮ್ಮ ಕೆಪಿಜೆಪಿ ಪಕ್ಷವನ್ನುಕಾಂಗ್ರೆಸ್ ಜೊತೆ ವಿಲೀನಗೊಳಿಸಿದ ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದರು. ಅವರು ಯಾವುದೇ ರೀತಿಯ ದಾಖಲೆ ಸಲ್ಲಿಸಿಲ್ಲ. ಆದರೆ, ಸ್ಪೀಕರ್ ಅವರೇ ತೃಪ್ತಿದಾಯಕವಾದ ದಾಖಲೆ ಒದಗಿಸುವಂತೆ ಹೇಳಿದ್ದರು. ಆದರೂ ಈಗ ವಿಲೀನ ಆಗಿಲ್ಲ ಎಂದು ಶಂಕರ್ ಹೇಳುತ್ತಿದ್ದಾರೆ: ಕಾಂಗ್ರೆಸ್ ವಕೀಲ ಕಪಿಲ್ಸಿಬಲ್

3.00:ಶಾಸಕ ತಾನು ಆಯ್ಕೆಯಾಗಿದ್ದ ವಿಧಾನಸಭೆಯ ಅವಧಿ ಮುಗಿದಾಗ ಮಾತ್ರ ಅನರ್ಹತೆಯ ಅವಧಿಯು ಮುಗಿಯುತ್ತದೆ . ನರ್ಹಗೊಂಡ ಕೆಲವೇ ದಿನಗಳಲ್ಲಿ ನಡೆಯುವ ಉಪಚುನಾವಣೆಯ ಸ್ಪರ್ಧೆಗೆ ಅನರ್ಹರಿಗೆ ಅವಕಾಶ ನೀಡಿದರೆ ರಾಜೀನಾಮೆಗೂ ಅನರ್ಹತೆಗೂ ವ್ಯತ್ಯಾಸವೇ ಉಳಿಯುವುದಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದ ವಕೀಲಕಪಿಲ್ ಸಿಬಲ್

– ನ್ಯಾಯಮೂರ್ತಿಗಳ ಪ್ರಶ್ನೆ

ಶಾಸಕರಾದವರು ಪಕ್ಷ ಬಿಡಬೇಕು ಅಥವಾ ಬದಲಿಸಬೇಕೆಂದರೆ ಸ್ವಯಂ ಪ್ರೇರಣೆಯಿಂದ ಖುದ್ದಾಗಿ ರಾಜೀನಾಮೆ ನೀಡಬೇಕು. ಅಥವಾ ಅವರನ್ನು ಅನರ್ಹಗೊಳಿಸಬೇಕು. ಈ ಪ್ರಕರಣದಲ್ಲಿ ರಾಜೀನಾಮೆ ನೀಡಲಾಗಿದೆ. ಶಾಸಕರನ್ನು ಅನರ್ಹಗೊಳಿಸಲಾಗಿದೆ. ಇಂಥ ಸಂದರ್ಭದಲ್ಲಿ ಏನು ಮಾಡಬೇಕು ಎಂದು ವಕೀಲ ಸಿಬಲ್ ಅವರನ್ನುನ್ಯಾಯಮೂರ್ತಿ ಸಂಜೀವ್ ಖನ್ನಾ ಪ್ರಶ್ನೆ ಮಾಡಿದರು.

ಕಪಿಲ್ ಸಿಬಲ್ ವಾದ

ರಾಜೀನಾಮೆಯ ಅಷ್ಟೂ ಪ್ರಕ್ರಿಯೆಯನ್ನು ಸ್ಪೀಕರ್ ರೆಕಾರ್ಡ್ ಮಾಡಿದ್ದಾರೆ. ಅದನ್ನೂ ಪರಿಶೀಲನೆಗೆ ಒಳಪಡಿಸಬೇಕಾಗುತ್ತದೆ. ಅದಕ್ಕಾಗಿ ತಜ್ಞರ ವರದಿ ತರಿಸಿಕೊಳ್ಳಬೇಕಾಗುತ್ತದೆ ಎಂದ ಸಿಬಲ್.

ನ್ಯಾಯಮೂರ್ತಿಗಳ ಪ್ರಶ್ನೆ

ಒಂದು ರಾಜ್ಯದ ವಿಧಾನಸಭೆಯಲ್ಲಿ ಅನರ್ಹರಾಗಿದ್ದರೆ, ಬೇರೆ ರಾಜ್ಯದಲ್ಲಿ ವಿಧಾನಸಭೆಗೆ ಸ್ಪರ್ದೆ ಮಾಡಬಹುದೇ. ಅಥವಾ, ಲೋಕಸಭೆ ಚುನಾವಣೆಗೆ ಸ್ಪರ್ದೆ ಮಾಡಬಹುದೇ ಎಂದು ಕಪಿಲ್ ಸಿಬಲ್ ಅವರರನ್ನು ಪ್ರಶ್ನಿಸಿದ ನ್ಯಾಯಮೂರ್ತಿ ಎನ್.ವಿ. ರಮಣ

ಕಪಿಲ್ ಸಿಬಲ್ ವಾದ

ಉಪ ಚುನಾವಣೆ ತಾಜಾ ಚುನಾವಣೆ ಅಲ್ಲ. ಹಾಗಾಗಿ ಸ್ಪರ್ಧೆ ಮಾಡುವ ಅವಕಾಶ ಇದೆ ಎಂದ ಸಿಬಲ್. ಆದರೆ, ಸಂಬಂಧಿಸಿದ ರಾಜ್ಯದಲ್ಲಿ ಸ್ಪರ್ಧೆ ಮಾಡುವಂತಿಲ್ಲ. ಏಕೆಂದರೆ ತನ್ನ ರಾಜ್ಯದಲ್ಲಿ ಸ್ಪರ್ಧೆಗೆ ಆತ ಅನರ್ಹ.5 ವರ್ಷದ ಅಧಿಕಾರವಧಿ ಮುಗಿದು ಅಥವಾ ವಿಧಾನಸಭೆ ವಿಸರ್ಜನೆಯಾದ ನಂತರ ನಡೆಯುವ ಚುನಾವಣೆಯನ್ನು ಮಾತ್ರ ತಾಜಾ ಸಾರ್ವತ್ರಿಕ ಚುನಾವಣೆ ಎನ್ನಬಹುದು ಎಂದು ನ್ಯಾಯಪೀಠಕ್ಕೆಸಿಬಲ್ ತಿಳಿಸಿದರು.

2.40:ಅನರ್ಹತೆಗೆ ಒಳಗಾಗುವಂತಹ ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು. ಅನರ್ಹರಾಗಿರುವ ಮತ್ತು ರಾಜೀನಾಮೆ ನೀಡಿರುವವರು ಚುನಾವಣೆಗೆ ಮತ್ತೆ ಸ್ಪರ್ಧಿಸಲು ಅವಕಾಶ ನೀಡುವುದಾದರೆ ಅವರನ್ನು ಯಾಕೆ ಅನರ್ಹಗೊಳಿಸಬೇಕು.ಪಕ್ಷಾಂತರ ಸಾಂವಿಧಾನಿಕ ಪಾಪ: ಕೆಪಿಸಿಸಿ ಪರ ವಕೀಲಕಪಿಲ್ ಸಿಬಲ್

ಮಿಕ್ಕ ಅವಧಿಯವರೆಗೆ ಮಾತ್ರ ಅವರನ್ನು ಅನರ್ಹಗೊಳಿಸುವ ಅವಕಾಶವನ್ನು ಸಂವಿಧಾನ ನೀಡಿದೆಯೇ ಎಂದು ಸಿಬಲ್ ಅವರನ್ನು ಕೇಳಿದ ನ್ಯಾಯಪೀಠ

2.29:ನೀವು ಒಂದು ಪಕ್ಷವನ್ನು ಪ್ರತಿನಿಧಿಸಿ ಶಾಸಕರಾದಾಗ ವಿಶ್ವಾಸಮತ ಯಾಚನೆ ವೇಳೆ ಕಲಾಪಕ್ಕೆ ಹಾಜರಾಗಬೇಕು. ವ್ಹಿಪ್ ಜಾರಿ ಮಾಡಿದ್ದಾರೆ ಎಂಬ ಕಾರಣದಿಂದ ಅಲ್ಲ. ಬದಲಿಗೆ, ಸರ್ಕಾರ ರಕ್ಷಣೆಗಾಗಿ ಹಾಜರಾಗಬೇಕು. ಆದರೆ, ಆಯಾ ಪಕ್ಷಗಳ ಸದಸ್ಯರಾಗಿದ್ದೇವೆಎಂದು ಹೇಳುತ್ತಿರುವ ಅನರ್ಹರು ಸರ್ಕಾರ ಬೀಳುವ ಸಂದರ್ಭದಲ್ಲಿ ಕಲಾಪಕ್ಕೆ ಗೈರಾಗಿದ್ದೇಕೆ: ಕಪಿಲ್ಸಿಬಲ್

2.25:ಅನರ್ಹರು ರಿಟ್ ಅರ್ಜಿ ಹಾಕಿದ್ದಾರೆ. ಈ ಅರ್ಜಿ ಹಾಕಲು ಇರುವ ಮಾನದಂಡಗಳೇ ಬೇರೆ. ಈ ಮಾನದಂಡಗಳು ಮತ್ತು ಅನರ್ಹರ ಅರ್ಜಿಗಳು ತಾಳೆ ಆಗುವುದಿಲ್ಲ.

2.20:ಅನರ್ಹರು ಸಲ್ಲಿಸಿರುವ ಮೇಲ್ಮನವಿಯು ವಿಚಾರಣೆಗೆ ಅರ್ಹವಲ್ಲ. ಕೂಡಲೇ ಇದನ್ನು ವಜಾಗೊಳಿಸಬೇಕು ಎಂದು ಕೋರುತ್ತಿರುವ ಕಪಿಲ್ಸಿಬಲ್. ಸಂವಿಧಾನದ 10ನೇ ಪರಿಚ್ಛೇದದ ಅನುಸಾರ ಶಾಕಸರನ್ನು ಅನರ್ಹಗೊಳಿಸಲಾಗಿದೆ. ಆದೇಶ ಹೊರಡಿಸುವಾಗ ನಿಯಮ ಪಾಲಿಸಲಾಗಿದೆ. ಹಾಗಾಗಿ ಈ ಮೇಲ್ಮನವಿ ವಿಚಾರಣೆಗೆ ಯೋಗ್ಯವಲ್ಲ ಎಂದು ವಿವರಿಸಿದರು.

2.13: ಅನರ್ಹ ಶಾಸಕರ ವಿಚಾರಣೆ ಮತ್ತೆ ಆರಂಭ

12.50:ಸ್ಪೀಕರ್ ಪರಮಾಧಿಕಾರ ಮತ್ತು ಕರ್ತವ್ಯ ನಿರ್ವಹಣೆಯಂತಹ ವಿಷಯವು ಗಂಭೀರವಾದ ಅಂಶ ಒಳಗೊಂಡಿದ್ದು, ಸಾಂವಿಧಾನಿಕ ಪೀಠದೆದುರು ವಿಚಾರಣೆಗೆ ಒಳಪಡಬೇಕಿದೆ ಎಂದು ಕೋರಿದ ಸಿಬಲ್. ಮಧ್ಯಾಹ್ನ 2ಗಂಟೆಗೆ ವಿಚಾರಣೆ ಮುಂದೂಡಲಾಗಿದೆ.

12:44:ಅನರ್ಹರು ರಾಜೀನಾಮೆ ಸಲ್ಲಿಸುವ ವೇಳೆ ಸ್ಪೀಕರ್ ಅವರ ಸಮಯಾವಕಾಶವನ್ನೇ ಕೇಳಿಲ್ಲ. ಜುಲೈ 9 ರಂದು ನಡೆದಿದ್ದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ಶಾಸಕರು ಭಾಗಿಯಾಗದೇ ಸರ್ಕಾರ ಬೀಳಿಸಲು ಷಡ್ಯಂತ್ರ ನಡೆಸಿದ್ದರು. ರಾಜೀನಾಮೆ ಬಗ್ಗೆ ನಿರ್ಧರಿಸುವ ಸಂದರ್ಭದಲ್ಲಿ ವಿಚಾರಣೆ ನಡೆಸುವ ಅಧಿಕಾರ ಸ್ಪೀಕರ್ ಗೆ ಇದೆ. ಜುಲೈ 6ರಂದು ಈ ಶಾಸಕರು ರಾಜೀನಾಮೆ ನೀಡಿದ್ದಾರೆ. ಅಂದರೆ ಈ ಶಾಸಕರೆಲ್ಲ ಮೊದಲೇ ನಿರ್ಧಾರ ಮಾಡಿ ರಾಜೀನಾಮೆ ನೀಡಿದ್ದಾರೆ. ಇದು ಮಾತನಾಡಿಕೊಂಡೇ ಕೊಟ್ಟಿರುವ ರಾಜೀನಾಮೆ. ಮೊದಲೇ ಪ್ಲ್ಯಾನ್ ಮಾಡಿದ ರಾಜೀನಾಮೆ ಇದು.

12:12:ರಾಜೀನಾಮೆಗೆ ಕಾರಣ ಏನು ಎಂಬುದನ್ನು ತಿಳಿಸಲು ಸ್ಪೀಕರ್ ಅವಕಾಶವನ್ನೇ ನೀಡಲಿಲ್ಲ ಎಂದು ಅನರ್ಹರ ಪರ ವಕೀಲ ಮುಕುಲ್ ರೋಹಟ್ಗಿ ಈ ಸಂದರ್ಭ ಮಧ್ಯ ಪ್ರವೇಶಿಸಿ ಹೇಳಿದರು.

12:08:ಸ್ಪೀಕರ್ ಪರಾರಿ ಆಗಿರಲಿಲ್ಲ. ಆದರೂ ಹಿಂಬಾಗಿಲಿನಿಂದ ಹೋಗಿದ್ದಾರೆ ಎಂದು ಹೇಳಲಾಯಿತು. ಮುಂಬೈಗೆ ತೆರಳುವ ಅವಸರದಲ್ಲಿ ಇದ್ದವರು ಈ ರೀತಿಯ ಆರೋಪ ಮಾಡಿದ್ದಾರೆ.

12:00:ಮೊದಲ ಬಾರಿ ಶಾಸಕರು ರಾಜೀನಾಮೆ ನೀಡಲು ಬರುವ ದಿನ ಸ್ಪೀಕರ್ ತಮ್ಮ ಕಚೇರಿಯಲ್ಲೇ ಇದ್ದರು. ಆದರೂ ರಾಜೀನಾಮೆ ನೀಡಲು ಬರುವ ವಿಷಯವನ್ನು ಯಾರೊಬ್ಬರೂ ಮುಂಚಿತವಾಗಿ ಹೇಳಿರಲಿಲ್ಲ. ಅವರು ಬರುವಷ್ಟರಲ್ಲಿ ಆಸ್ಪತ್ರೆಗೆ ತೆರಳಿದ್ದ ಸ್ಪೀಕರ್ ಇಲ್ಲದ್ದನ್ನು ನೋಡಿ ನಾವು ಬರುವುದು ತಿಳಿದೇ ಕಚೇರಿಯಲ್ಲಿ ಇರಲಿಲ್ಲ ಎಂದು ಆರೋಪಿಸಲಾಗಿತ್ತು.

11:55:ವಿಶ್ವಾಸ ಮತ ಮತ್ತು ಅವಿಶ್ವಾಸ ಮತ ಯಾಚನೆಯ ವೇಳೆ ರಾಜಕೀಯ ಪಕ್ಷದ ಶಾಸಕರು ಸದನದಲ್ಲಿ ಕಡ್ಡಾಯವಾಗಿ ಹಾಜರಿರಬೇಕು. ಇದು ಸರ್ಕಾರದ ಅಳಿವು- ಉಳಿವಿನ ಪ್ರಶ್ನೆಯಾಗಿರುತ್ತದೆ. ಈ ಸಂದರ್ಭದಲ್ಲಿ ಹೊರಡಿಸಲಾದ ವಿಪ್ ಎಲ್ಲರಿಗೂ ಅನ್ವಯ ಆಗುತ್ತದೆ. ಅಂಥದ್ದೇ ವೇಳೆ ಈ ಶಾಸಕರು ಗುಂಪಲ್ಲಿ ರಾಜೀನಾಮೆ ನೀಡಿದ್ದಾರೆ ಎಂದಸಿಬಲ್

11:50:ರಮೇಶ್ ಜಾರಕಿಹೊಳಿ ಅವರು ಬಿಜೆಪಿ ಮುಖಂಡ ಎಸ್.ಎಂ. ಕೃಷ್ಣ ಅವರನ್ನು ಭೇಟಿಯಾಗಿದ್ದರು ಎಂದ ಸಿಬಲ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಸುಧಾಕರ್ ಪರ ಹಿರಿಯ ವಕೀಲ ಸುಂದರಂ. ಸುಧಾಕರ್ ಇಂಥ ಚಟುವಟಿಕೆಯಲ್ಲಿ ತೊಡಗದಿದ್ದರೂ ಅನರ್ಹಗೊಳಿಸಲಾಗಿದೆ ಎಂದರು.

ಸ್ಪೀಕರ್ ಕಚೇರಿಗೆ ನ್ಯಾಯಾಲಯ ನಿರ್ದೇಶನ ನೀಡಲಾಗದು. ಆದರೆ ಈ ಪ್ರಕರಣದಲ್ಲಿ ನ್ಯಾಯಾಲಯ ಅಂತಹದ್ದೊಂದು ನಿರ್ದೇಶನ ನೀಡಿದೆ ಎಂದ ಸಿಬಲ್.

11.40:ತಮಿಳುನಾಡಿನ ಪ್ರಕರಣ ಉಲ್ಲೇಖಿಸುತ್ತಿರುವ ಕಪಿಲ್ ಸಿಬಲ್. ಆ ಪ್ರಕರಣದಲ್ಲಿ ಕೋರ್ಟ್ ಸ್ಪೀಕರ್ ಕಾರ್ಯವೈಖರಿಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದೆ.

11.38: ಅನರ್ಹರು ತಾವು ಈಗಲೂ ಪಕ್ಷ ತ್ಯಜಿಸಿಲ್ಲ. ಕಾಂಗ್ರೆಸ್ ನಲ್ಲೇ ಇದ್ದೇವೆ ಎಂದು ಹೇಳುತ್ತಾರೆ. ಹಾಗಾದರೆ ಕಾಂಗ್ರೆಸ್ ಕರೆದ ಸಭೆಗಳಲ್ಲಿ ಯಾಕೆ ಭಾಗವಹಿಸಿಲ್ಲ ಎಂದು ಸಿಬಲ್ ಪ್ರಶ್ನೆ.

11.31: ಶಾಸಕರು ನೀಡಿದ ರಾಜೀನಾಮೆಯನ್ನು ಒಪ್ಪಿಕೊಳ್ಳದೇ ಅವರ ಅನರ್ಹತೆಯ ದೂರನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಿ ಎಂದ ಸ್ಪೀಕರ್ ಗೆ ಕಾಂಗ್ರೆಸ್ ಬರೆದಿದ್ದ ಪತ್ರವನ್ನು ಓದುತ್ತಿರುವ ಸಿಬಲ್.
ಸ್ಪೀಕರ್ ಹೇಗೆ ಕಾರ್ಯನಿರ್ವಹಿಸಬೇಕು, ಯಾವುದನ್ನು ಮೊದಲು ತೀರ್ಮಾನಿಸಬೇಕು ಎಂದು ಕೋರ್ಟ್ ಹೇಳುವಂತಿಲ್ಲ.

11.30: ರಮೇಶ್ ಜಾರಕಿಹೊಳಿ ಮತ್ತು ಮಹೇಶ್ ಕುಮಠಳ್ಳಿ ಅವರು ನೊಟೀಸ್ಗೆ ರಿಪ್ಲೈ ಮಾಡಿದ್ದಾರೆ. ಆದರೂ ನೊಟೀಸ್ ಸಿಕ್ಕಿಲ್ಲ ಎನ್ನುತ್ತಾರೆ. ಇದು ಅಪ್ರಮಾಣಿಕತೆಯಲ್ಲವೇ?
ಎಂಬ ಸಿಬಲ್ ಆರೋಪವನ್ನು ವಿರೋಧಿಸಿದ ವಿಶ್ವನಾಥನ್. ಈ ಸಂದರ್ಭ ಇಬ್ಬರೂ ವಕೀಲರ ನಡುವೆ ವಾಗ್ವಾದ. ಸ್ಟಾಪ್ ಇಟ್ ಎಂದು ಹೇಳಿದ ನ್ಯಾಯಪೀಠ
ರಾಜ್ಯಸಭೆ ಸದಸ್ಯರೊಬ್ಬರು ಎಲ್ಲ ಶಾಸಕರನ್ನು ಪಂಚತಾರಾ ಹೋಟೆಲ್ನಲ್ಲಿ ಇರಿಸಲು ಮುಂಬೈಗೆ ವಿಶೇಷ ವಿಮಾನದಲ್ಲಿ ಕರೆದೊಯ್ದಿದ್ದರು. ಅವರೆಲ್ಲರೂ ಉದ್ದೇಶ ಪೂರ್ವಕ ಸಾಮೂಹಿಕವಾಗಿ ಒಂದೇ ದಿನ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆಗೂ ಇವರ ಪಕ್ಷವಿರೋಧಿ ಚಟುವಟಿಕೆಗೂ ಸಂಬಂಧ ಇಲ್ಲ. ಹಾಗಾಗಿ ಅನರ್ಹಗೊಳಿಸಲಾಗಿದೆ.

ಇದನ್ನೂ ಓದಿ:ಅನರ್ಹ ಶಾಸಕರ ಪರ–ವಿರೋಧ ವಾದ;:‘ಹೆಡ್ ಮಾಸ್ಟರ್ರಂತೆ ನಡೆದುಕೊಂಡ ಸ್ಪೀಕರ್’

11.06: ಶಾಸಕರ ರಾಜೀನಾಮೆ ತಿರಸ್ಕರಿಸಿದ್ದಕ್ಕೆ ನಿಯಮ ಅನುಸರಿಸಲಾಗಿದೆ. ಸದಸ್ಯತ್ವದಿಂದ ಅನರ್ಹಗೊಳಿಸಿರುವ ಆದೇಶವನ್ನು ಚುನಾವಣಾ ಆಯೋಗ ನೀಡಿಲ್ಲ. ಪಕ್ಷಾಂತರ ನಿಷೇಧ ಕಾಯ್ದೆಗೂ ಆಯೋಗಕ್ಕೂ ಸಂಬಂಧವೇ ಇಲ್ಲ. ಈಗ ಸುಪ್ರೀಂ ಕೋರ್ಟ್ ನಲ್ಲಿ ಆಯೋಗದ ವಕೀಲರು ಬಂದು ಸ್ಪೀಕರ್ ಹೊರಡಿಸಿರುವ ಅನರ್ಹತೆಯ ಆದೇಶದ ಬಗ್ಗೆ ಸ್ಪಷ್ಟನೆ ನೀಡುತ್ತಿರುವುದನ್ನು ಒಪ್ಪಲಾಗದು.

11.05: ಇವರ ರಾಜೀನಾಮೆ ಸ್ವಯಂ ಪ್ರೇರಿತವೋ ಅಥವಾ ನೈಜತೆಯಿಂದ ಕೂಡಿದ್ದೋ ಎಂಬ ಪ್ರಶ್ನೆ ಸಹಜವಾಗಿ ಉದ್ಭವವಾಗುತ್ತದೆ.
ರಾಜಕೀಯ ಪಕ್ಷದ ಸದಸ್ಯರಾಗಿ ಇವರು ಸಂವಿಧಾನಬದ್ಧವಾಗಿ ನಡೆದುಕೊಳ್ಳಬೇಕು. ರಾಜೀನಾಮೆ ನೀಡಿದ ಕೂಡಲೇ ಇವರಿಗೆ ಏನೂ ಸಂಬಂಧ ಇಲ್ಲ ಅಂತಲ್ಲ. ಸಂವಿಧಾನದ ಆಶಯವನ್ನು ಇವರು ಧಿಕ್ಕರಿಸಿದ್ದಾರೆ. ಮೂಲಭೂತ ನೆಲೆಯಲ್ಲಿ ಶಾಸನಬದ್ಧವಾಗಿ ಇವರು ತಮ್ಮ ಕರ್ತವ್ಯ ನಿಭಾಯಿಸಬೇಕು.ಇಂಥವರನ್ನು ಅನರ್ಹಗೊಳಿಸುವ ಸಂವಿಧಾನಬದ್ಧ ಅಧಿಕಾರ ಸ್ಪೀಕರ್ಗೆ ಇದೆ.

ಇದನ್ನೂ ಓದಿ:ಗೋಕಾಕದಲ್ಲಿ ಪೂಜಾರಿಗೆ, ಅಥಣಿಯಲ್ಲಿ ಲಕ್ಷ್ಮಣ ಸವದಿಗೆ ಬಿಜೆಪಿ ಟಿಕೆಟ್: ಕತ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.