ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದುರ್ಗಾ ಪೂಜೆ ಕೇವಲ ಹಬ್ಬವಲ್ಲ, ನಮ್ಮ ಅಸ್ಮಿತೆಯ ಹೃದಯ ಬಡಿತವಾಗಿದೆ: ಸಿಎಂ ಮಮತಾ

Published : 5 ಅಕ್ಟೋಬರ್ 2024, 15:19 IST
Last Updated : 5 ಅಕ್ಟೋಬರ್ 2024, 15:19 IST
ಫಾಲೋ ಮಾಡಿ
Comments

ಕೋಲ್ಕತ್ತ: ಬಂಗಾಳಿಗಳಿಗೆ ದುರ್ಗಾ ಪೂಜೆ ಎಂಬುದು ಹಬ್ಬಕ್ಕಿಂತಲೂ ಮಿಗಿಲಾದುದು. ಅದು ನಮ್ಮ ಸಮುದಾಯದ ಗುರುತು, ಕಲೆ ಮತ್ತು ಪರಂಪರೆಯ ಹೃದಯ ಬಡಿತವಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಅವರು, ‘ದುರ್ಗಾ ಪೂಜೆಯು ನಮಗೆ ಕೇವಲ ಹಬ್ಬವಲ್ಲ, ಅದಕ್ಕಿಂತ ಮಿಗಿಲಾದುದು. ಇದು ನಮ್ಮ ಅಸ್ಮಿತೆ, ಕಲೆ ಮತ್ತು ಪರಂಪರೆಯ ಹೃದಯ ಬಡಿತವಾಗಿದೆ. ದುರ್ಗಾ ಪೂಜೆಯ ಪೆಂಡಾಲ್‌ಗಳು ಸಮುದಾಯದ ಮನೋಭಾವದ ಪ್ರತಿಬಿಂಬ. ಅದು ಆಧ್ಯಾತ್ಮ ಹಾಗೂ ಒಗ್ಗಟ್ಟಿನ ಖುಷಿಯನ್ನು ಆಚರಿಸಲು ಎಲ್ಲಾ ವರ್ಗಗಳ ಜನರನ್ನು ಒಂದುಗೂಡಿಸುತ್ತದೆ’ ಎಂದು ತಿಳಿಸಿದ್ದಾರೆ.

ನವರಾತ್ರಿಯ ಮೂರನೇ ದಿನದಂದು ಜನರಿಗೆ ಶುಭ ಹಾರೈಸಿದ ಬ್ಯಾನರ್ಜಿ, ‘ವಿಶ್ವದಾದ್ಯಂತ ಇರುವ ಬಂಗಾಳಿಗಳು ವರ್ಷಪೂರ್ತಿ ಕಾಯುವ ನಾಲ್ಕು ದಿನಗಳಿಗೆ ನಾವು ಹತ್ತಿರವಾಗಿದ್ದೇವೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT