ನವದೆಹಲಿ (ಪಿಟಿಐ): ವಿವಿಐಪಿಗಳಿಗಾಗಿ ಆಗಸ್ಟಾವೆಸ್ಟ್ಲ್ಯಾಂಡ್ ಹೆಲಿಕಾಪ್ಟರ್ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ವಿಶೇಷ ನ್ಯಾಯಾಲಯದಲ್ಲಿ ಪೂರಕ ಚಾರ್ಜ್ಶೀಟ್ ಸಲ್ಲಿಸಿದೆ.

ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಎನ್.ಕೆ.ಮಟ್ಟ ಈ ಪೂರಕ ಚಾರ್ಜ್ಶೀಟ್ ಸಲ್ಲಿಸಿದ್ದು, ವಿಶೇಷ ನ್ಯಾಯಾಧೀಶ ಅರವಿಂದ ಕುಮಾರ್ ಅವರು ಜುಲೈ 20ಕ್ಕೆ ವಿಚಾರಣೆಗೆ ಕೈಗೆತ್ತಿಕೊಳ್ಳಲಿದ್ದಾರೆ.

ವಾಯುಸೇನೆಯ ಮಾಜಿ ಮುಖ್ಯಸ್ಥ ಎಸ್.ಪಿ.ತ್ಯಾಗಿ, ಅವರ ಇಬ್ಬರು ಸಹೋದರರು, ವಕೀಲ ಗೌತಮ್ ಖೇತಾನ್, ಇಟಲಿ ಮೂಲದ ದಲ್ಲಾಳಿಗಳಾದ ಕಾರ್ಲೊ ಗೆರೊಸಾ, ಗಿಡೊ ಹಷ್ಕೆ ಹಾಗೂ ಆಗಸ್ಟಾವೆಸ್ಟ್ಲ್ಯಾಂಡ್ನ ಮಾತೃಸಂಸ್ಥೆಯಾದ ಫಿನ್ಮೆಕಾನಿಕಾ ವಿರುದ್ಧ ಆರೋಪ ಮಾಡಲಾಗಿದೆ.

12ಎಡಬ್ಲ್ಯು–101 ಎಂಬ ವಿವಿಐಪಿ ಹೆಲಿಕಾಪ್ಟರ್ ಪೂರೈಕೆಗಾಗಿ ವಾಯುಸೇನೆ ಆಗಸ್ಟಾವೆಸ್ಟ್ಲ್ಯಾಂಡ್ ಜೊತೆ ಒಪ್ಪಂದ ಮಾಡಿಕೊಂಡಿತ್ತು. ಆದರೆ, ಈ ಖರೀದಿಯನ್ನು ಕುದುರಿಸಲು ಕಂಪನಿಯು ₹ 423 ಕೋಟಿ ಲಂಚ ನೀಡಿತ್ತು ಎಂಬ ಆರೋಪ ಕೇಳಿ ಬಂದ ಕಾರಣ 2014ರ ಜನವರಿ 1ರಂದು ಕಂಪನಿಯೊಂದಿಗಿನ ಒಪ್ಪಂದವನ್ನು ಭಾರತ ರದ್ದುಪಡಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.