ಬೆಂಗಳೂರು: ಪತ್ರಕರ್ತೆಯರನ್ನು ಆನ್ಲೈನ್ನಲ್ಲಿ ಟ್ರೋಲ್ ಮಾಡುವುದು ಗಂಭೀರ ಸಮಸ್ಯೆಯಾಗಿದೆ. ಉತ್ತಮವಾದ ಸುರಕ್ಷಾ ಕ್ರಮಗಳನ್ನು ಅಳವಡಿಸಿಕೊಳ್ಳಬೇಕಿದೆ. ದೂರು ಸಲ್ಲಿಕೆ ಮತ್ತು ಪರಿಹಾರಕ್ಕೆ ಪ್ರಬಲವಾದ ವ್ಯವಸ್ಥೆಯೂ ಬೇಕು ಎಂದು ಭಾರತೀಯ ಸಂಪಾದಕರ ಕೂಟವು ಹೇಳಿದೆ.

ಪತ್ರಕರ್ತೆಯರನ್ನು ಗುರಿ ಮಾಡಿ ಆನ್ಲೈನ್ನಲ್ಲಿ ಕಿರುಕುಳ ನೀಡಲಾಗುತ್ತಿದೆ ಎಂದು ಕೂಟವು 2022ರ ಜನವರಿ 11ರಂದೇ ಕಳವಳ ವ್ಯಕ್ತಪಡಿಸಿತ್ತು.

ತನಿಖಾ ಪತ್ರಿಕೋದ್ಯಮದ ವಿಚಾರದಲ್ಲಿ ಹೆಚ್ಚಿನ ಎಚ್ಚರ ವಹಿಸಬೇಕು. ಸೂಕ್ಷ್ಮ ವಿಚಾರಗಳ ಕುರಿತ ವರದಿಗಳನ್ನು ಆತುರವಾಗಿ ಪ್ರಕಟಿಸುವ ಪ್ರಲೋಭನೆಯನ್ನು ಬಿಡಬೇಕು. ಆತುರ ತೋರದೆ ಹೆಚ್ಚು ವೃತ್ತಿಪರವಾಗಿ ವರ್ತಿಸಬೇಕು ಎಂದು ಕೂಟವು ಕಿವಿಮಾತು ಹೇಳಿದೆ.

ದಿ ವೈರ್ ಪೋರ್ಟಲ್ನಲ್ಲಿ ಮೆಟಾ ಸಂಸ್ಥೆಯ ಕುರಿತು ಲೇಖನ ಪ್ರಕಟವಾದದ್ದು ಮತ್ತು ಅದನ್ನು ಆಂತರಿಕ ಪರಾಮರ್ಶೆ ಸಮಿತಿಯ ಸಲಹೆಯಂತೆ ವಾಪಸ್ ಪಡೆದ ವಿದ್ಯಮಾನವನ್ನು ಕೂಟವು ಉಲ್ಲೇಖಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.