ಬಿಜನೋರ್: ಚಿರತೆ ದಾಳಿಯಿಂದ 8 ವರ್ಷದ ಬಾಲಕಿ ಮೃತಪಟ್ಟ ಘಟನೆ ಉತ್ತರ ಪ್ರದೇಶದ ಬಿಜನೋರ್ ಅರಣ್ಯ ಪ್ರದೇಶದಲ್ಲಿ ಭಾನುವಾರ ನಡೆದಿದೆ ಎಂದು ಅಧಿಕೃತ ಮಾಹಿತಿ ತಿಳಿಸಿದೆ.

ಮಂಡೋರಿ ಹಳ್ಳಿಯ ಸುನಿತಾ ತಮ್ಮ ಮಗಳು ದಿವ್ಯಾಂಶಿ ಜೊತೆ ಶನಿವಾರ ಸಂಜೆ ಹುಲ್ಲು ತರಲು ಕಾಡಿಗೆ ಹೋದ ವೇಳೆ ಈ ಘಟನೆ ನಡೆದಿದೆ ಎಂದು ಧಾಂಪುರದ ನಾಯಬ್ ತಹಶೀಲ್ದಾರ್ ವಿವೇಕ್ ತಿವಾರಿ ತಿಳಿಸಿದರು.

ಕಾಡಿನಲ್ಲಿ ಬಾಲಕಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಚಿರತೆ ದಾಳಿ ಮಾಡಿದೆ. ಅಲ್ಲಿದ್ದ ಮಹಿಳೆಯರು ಜೋರಾಗಿ ಕೂಗಿದ್ದರ ಪರಿಣಾಮ ಗಾಯಗೊಂಡ ಬಾಲಕಿಯನ್ನು ಹಾಗೆಯೇ ಬಿಟ್ಟು ಚಿರತೆ ತೆರಳಿದೆ. ಬಾಲಕಿಯನ್ನು ತಕ್ಷಣವೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಆಕೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.