ಭೋಪಾಲ್: ಸಂವಿಧಾನದಲ್ಲಿರುವ ಅವಕಾಶ ಹಾಗೂ ಪ್ರಜಾ ಪ್ರಾತಿನಿಧ್ಯ ಕಾಯ್ದೆಗೆ ಅನುಗುಣವಾಗಿ ಕೆಲಸ ನಿರ್ವಹಿಸಲು ಸಿದ್ಧ.

– ‘ಒಂದು ರಾಷ್ಟ್ರ. ಒಂದು ಚುನಾವಣೆ’ ಬಗ್ಗೆ ಕೇಳಲಾದ ಪ್ರಶ್ನೆಗೆ ಮುಖ್ಯ ಚುನಾವಣಾ ಆಯಕ್ತ ರಾಜೀವ್ ಕುಮಾರ್ ಅವರು ಪ್ರತಿಕ್ರಿಯಿಸಿದ ರೀತಿ ಇದು.

ಇದೇ ವರ್ಷ ನವೆಂಬರ್‌ನಲ್ಲಿ ಚುನಾವಣೆ ನಡೆಯಲಿರುವ ಮಧ್ಯಪ್ರದೇಶದಲ್ಲಿ ಸಿಚುನಾವಣಾ ಸಿದ್ಧತೆಗೆ ಸಂಬಂಧಿಸಿ ರಾಜಕೀಯ ಪಕ್ಷಗಳು, ಆಡಳಿತ ಮತ್ತು ಕಾನೂನು ಜಾರಿ ಸಂಸ್ಥೆಗಳ ಜೊತೆ ಸಭೆ ನಡೆಸುವ ಸಲುವಾಗಿ ರಾಜೀವ್ ಕುಮಾರ್ ಮತ್ತು ಇ.ಸಿಯ ಇತರ ಉನ್ನತ ಅಧಿಕಾರಿಗಳು ಭೋಪಾಲ್‌ಗೆ ಆಗಮಿಸಿದ್ದರು.

ಈ ವೇಳೆ ‘ಒಂದು ದೇಶ, ಒಂದು ಚುನಾವಣೆ’ ಕುರಿತು ಮಾತನಾಡಿದ ಅವರು, ಜನಪ್ರಾತಿನಿಧ್ಯ ಕಾಯ್ದೆ ಮತ್ತು ಸಂವಿಧಾನದಲ್ಲಿಯ ಅವಕಾಶಗಳ ಪ್ರಕಾರ ಈ ಬಾರಿ ಅವಧಿಗೆ ಮುನ್ನವೇ ಆಯೋಗವು ಚುನಾವಣೆಯನ್ನು ನಡೆಸಬೇಕು. ಹೊಸದಾಗಿ ಸರ್ಕಾರ ರಚನೆಯಾದ ಬಳಿಕ ನಡೆಯುವ ಮೊದಲ ಲೋಕಸಭಾ ಅಧಿವೇಶನದ ದಿನದಿಂದಲೇ ಆ ಸರ್ಕಾರದ ಐದು ವರ್ಷಗಳ ಅವಧಿ ನಿಗಧಿಯಾಗಲಿದೆ. ಹೀಗಾಗಿ ಇ.ಸಿಯು ಆರು ತಿಂಗಳ ಮೊದಲೇ ಚುನಾವಣೆಯನ್ನು ಘೋಷಿಸಬಹುದು. ಈ ನಿಯಮವು ವಿಧಾನಸಭೆ ಚುನಾವಣೆಗಳಿಗೂ ಅನ್ವಯವಾಗುತ್ತದೆ ಎಂದರು.

ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯು ನವೆಂಬರ್‌ನಲ್ಲಿ ನಡೆಯಲಿದ್ದು, ಮತದಾರರ ಅಂತಿಮ ಪಟ್ಟಿಯನ್ನು ಅಕ್ಟೋಬರ್ 5ರಂದು ಬಿಡುಗಡೆ ಮಾಡಲಾಗುವುದು. ರಾಜ್ಯದಲ್ಲಿ ಸುಮಾರು 5.5 ಕೋಟಿ ಮತದಾರರಿದ್ದಾರೆ ಎಂದು ಅವರು ಹೇಳಿದರು.

ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ಏಕಕಾಲಕ್ಕೆ ನಡೆಸುವ ಸಾಧ್ಯತೆಗಳ ಕುರಿತು ಪರಿಶೀಲನೆ ನಡೆಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.