ತಿರುವನಂತಪುರ: ನ್ಯಾಯಾಲಯದ ತೀರ್ಪಿನ ಆಧಾರದ ಮೇಲೆ ಕಾಸರಗೋಡಿನ ಎಂಡೋಸಲ್ಫಾನ್ ದುರಂತಕ್ಕೆ ಒಳಗಾದ 3014 ಸಂತ್ರಸ್ತರಿಗೆ ಇದುವರೆಗೆ ಒಟ್ಟು ₹119.34 ಕೋಟಿ ಪರಿಹಾರವನ್ನು ವಿತರಿಸಲಾಗಿದೆ ಎಂದು ಕೇರಳ ಸರ್ಕಾರ ಮಂಗಳವಾರ ಹೇಳಿದೆ.

ಶೀಘ್ರ ಪರಿಹಾರ ವಿತರಣೆ ಮತ್ತು ವಿವಿಧ ಪುನರ್ವಸತಿ ಕ್ರಮಗಳ ಅನುಷ್ಠಾನಕ್ಕೆ ಒತ್ತಾಯಿಸಿ ಎಂಡೋಸಲ್ಫಾನ್ ಸಂತ್ರಸ್ತರು ಮತ್ತು ಅವರ ಕುಟುಂಬದ ಸದಸ್ಯರು ಇಲ್ಲಿ ಪ್ರತಿಭಟನೆ ನಡೆಸಿದ ವಾರಗಳ ನಂತರದಲ್ಲಿ ಸಾಮಾಜಿಕ ನ್ಯಾಯ ಸಚಿವೆ ಆರ್.ಬಿಂದು ಅವರು ವಿಧಾನಸಭೆಯಲ್ಲಿ ಈ ಹೇಳಿಕೆ ನೀಡಿದ್ದಾರೆ.

ಐಯುಎಂಎಲ್ ಶಾಸಕ ಯು.ಎ.ಲತೀಫ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಉತ್ತರ ಕಾಸರಗೋಡು ಜಿಲ್ಲೆಯ ಮುಳಿಯಾರ್ನಲ್ಲಿ ಉದ್ದೇಶಿತ ಎಂಡೋಸಲ್ಫಾನ್ ಪುನರ್ವಸತಿ ಗ್ರಾಮಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದು ಹೇಳಿದರು.

‘2017ರ ಸುಪ್ರೀಂಕೋರ್ಟ್ ತೀರ್ಪಿನ ಆಧಾರದಲ್ಲಿ ಎಂಡೋಸಲ್ಫಾನ್ ದುರಂತದ 3014 ಸಂತ್ರಸ್ತರಿಗೆ ಒಟ್ಟು ₹119.34 ಕೋಟಿ ಪರಿಹಾರ ವಿತರಿಸಲಾಗಿದೆ. ಉಳಿದ ಸಂತ್ರಸ್ತರಿಗೆ ಆರ್ಥಿಕ ನೆರವು ನೀಡುವ ಬಗ್ಗೆ ಸರ್ಕಾರ ಪರಿಶೀಲಿಸುತ್ತಿದೆ’ ಎಂದು ಸಚಿವೆ ಬಿಂದು ಹೇಳಿದರು.

ಸಾಮಾಜಿ ಭದ್ರತಾ ಮಿಷನ್ ಮೂಲಕ ಸಂತ್ರಸ್ತರಿಗೆ ಮಾಸಿಕ ಪಿಂಚಣಿ, ಅವರನ್ನು ನೋಡಿಕೊಳ್ಳುವವರಿಗೆ ‘ಆಶ್ವಾಸಕಿರಣ’ ಪಿಂಚಣಿ, ₹ 3ಲಕ್ಷ ವರೆಗಿನ ಬ್ಯಾಂಕ್ ಸಾಲ ಮನ್ನಾ, ಸಾರಿಗೆ ಸೌಲಭ್ಯ, ಸಂತ್ರಸ್ತ ಮಕ್ಕಳಿಗೆ ವಿದ್ಯಾರ್ಥಿ ವೇತನ ಮತ್ತು ಉಚಿತ ಪಡಿತರ ಮೊದಲಾದ ಕ್ರಮಗಳನ್ನು ಸರ್ಕಾರ ಜಾರಿಗೊಳಿಸುತ್ತಿದೆ ಎಂದು ಅವರು ವಿವರ ನೀಡಿದರು.

ಎಂಡೋಸಲ್ಫಾನ್ ಭಾಗಶಃ ಪರವಾನಗಿ ಪಡೆದ ಕೀಟನಾಶಕವಾಗಿದೆ. 2011ರಲ್ಲಿ ಸುಪ್ರೀಂಕೋರ್ಟ್ ಇದರ ಉತ್ಪಾದನೆ ಮತ್ತು ವಿತರಣೆಯನ್ನು ನಿಷೇಧಿಸುವವರೆಗೆ ಕೀಟನಾಶಕವನ್ನು ಗೋಡಂಬಿ, ಹತ್ತಿ, ಚಹಾ, ಭತ್ತ, ಹಣ್ಣುಗಳು ಮತ್ತು ಇತರ ಬೆಳೆಗಳ ಮೇಲೆ ವ್ಯಾಪಕವಾಗಿ ಬಳಸಲಾಗುತ್ತಿತ್ತು.

ಎಂಡೋಸಲ್ಫಾನ್ ಬಳಕೆಯು ಕಾಸರಗೋಡಿನ ಹಲವು ಪ್ರದೇಶಗಳಲ್ಲಿ ಅನೇಕ ವ್ಯಕ್ತಿಗಳು, ವಿಶೇಷವಾಗಿ ಮಕ್ಕಳಿಗೆ ದೀರ್ಘಕಾಲದ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡಿದೆ ಎಂದು ಆರೋಪಿಸಲಾಗಿದೆ.

ಇದು ವಿಷದ ಅಂಶವನ್ನು ಹೊಂದಿದ್ದು ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.