ಪಾಟ್ನಾ: ಆರ್‌ಜೆಡಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ಯಾಮ್ ರಜಕ್ ಅವರು ಗುರುವಾರ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ‘ನಾನು ವಂಚನೆಗೊಳಗಾದೆ ಎಂಬ ಭಾವ ಕಾಡುತ್ತಿದೆ’ ಎಂದಿದ್ದಾರೆ.

ರಜಕ್ ಅವರು ಆರ್‌ಜೆಡಿ ಅಧ್ಯಕ್ಷ ಲಾಲೂ ಪ್ರಸಾದ್ ಯಾದವ್ ಅವರಿಗೆ ರಾಜೀನಾಮೆ ಪತ್ರ ಬರೆದಿದ್ದು, ‘ಪಕ್ಷದಲ್ಲಿ ನೀಡಿರುವ ಹುದ್ದೆ ಮತ್ತು ಪಕ್ಷದ ಸದಸ್ಯತ್ವ ಎರಡನ್ನೂ ತೊರೆದಿದ್ದೇನೆ’ ಎಂದಿದ್ದಾರೆ.

‘ನನಗೆ ಚದುರಂಗದಲ್ಲಿ ಅಷ್ಟಾಗಿ ಆಸಕ್ತಿ ಇಲ್ಲ. ಹೀಗಾಗಿ ವಂಚನೆಗೊಳಗಾದೆ. ಆದರೆ ನೀವು ಕಾಯಿಗಳನ್ನು ಮುನ್ನಡೆಸುವ ಯೋಜನೆ ಹೊಂದಿದ್ದೀರಿ. ಆದರೆ ನಾನು ಮಾತ್ರ ಸಂಬಂಧಗಳನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿದೆ’ ಎಂದು ಹಿಂದಿಯಲ್ಲಿ ಅವರು ಬರೆದಿದ್ದಾರೆ.

ಶ್ಯಾಮ್ ರಜಕ್ ಅವರ ರಾಜೀನಾಮೆಯು ಪಕ್ಷಕ್ಕೆ ಬಹುದೊಡ್ಡ ಆಘಾತವನ್ನುಂಟು ಮಾಡಿದೆ ಎಂದು ವರದಿಯಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.