ಥ್ರಿಲ್ಲರ್ ಕಾದಂಬರಿಯಂತೆ ದಿನಕ್ಕೊಂದು ಕ್ಷಣಕ್ಕೊಂದು ತಿರುವು ಪಡೆಯುತ್ತಿದೆಮಹಾರಾಷ್ಟ್ರ ರಾಜಕಾರಣ. ಸುಪ್ರೀಂ ಕೋರ್ಟ್ ಇಂದು (ನ.26) ನೀಡಿದ ಆದೇಶದಂತೆನಾಳೆ (ನ.27) ವಿಶ್ವಾಸಮತ ಯಾಚನೆ ಪ್ರಕ್ರಿಯೆ ನಡೆಯಲಿದೆ. ವಿಧಾನಸಭಾ ಚುನಾವಣೆಯಿಂದ ಸುಪ್ರೀಂ ಕೋರ್ಟ್ ತೀರ್ಪಿನವರೆಗೆ ಮಹಾರಾಷ್ಟ್ರ ರಾಜಕಾರಣ ತೆಗೆದುಕೊಂಡ ಚಿತ್ರ–ವಿಚಿತ್ರ ತಿರುವುಗಳ ಇಣುಕುನೋಟ ಇಲ್ಲಿದೆ.

ಅಕ್ಟೋಬರ್21: ಮಹಾರಾಷ್ಟ್ರ ವಿಧಾನಸಭೆಯ 288 ಸ್ಥಾನಗಳಿಗೆ ಚುನಾವಣೆ.

ಅಕ್ಟೋಬರ್ 24: ಫಲಿತಾಂಶ ಪ್ರಕಟ. ಬಿಜೆಪಿ 105, ಶಿವಸೇನಾ 56, ಎನ್ಸಿಪಿ 54 ಮತ್ತು ಕಾಂಗ್ರೆಸ್44 ಸ್ಥಾನಗಳಲ್ಲಿ ವಿಜಯಿ.

ನವೆಂಬರ್ 9: ಸರ್ಕಾರ ರಚಿಸಲು ಇಚ್ಛೆ ತೋರುವಂತೆ ಬಿಜೆಪಿಗೆ ರಾಜ್ಯಪಾಲರ ಆಹ್ವಾನ. 48 ಗಂಟೆಗಳೊಳಗೆ ಬಹುಮತ ಸಾಬೀತುಪಡಿಸಲು ಸೂಚನೆ.

ನವೆಂಬರ್ 10: ಸರ್ಕಾರ ರಚಿಸಲು ತನ್ನಿಂದ ಸಾಧ್ಯವಿಲ್ಲ ಎಂದ ಬಿಜೆಪಿ. ಸರ್ಕಾರ ರಚಿಸಲು ಶಿವಸೇನಾಗೆ ರಾಜ್ಯಪಾಲರ ಆಹ್ವಾನ. 24 ತಾಸಿನೊಳಗೆ ಬಹುಮತ ಸಾಬೀತುಪಡಿಸಲು ಸೂಚನೆ.

ನವೆಂಬರ್ 11: ಸರ್ಕಾರ ರಚನೆಗೆ ಶಿವಸೇನಾ ಆಸಕ್ತಿ. ಬಹುಮತ ಸಾಬೀತಿಗೆ ಮೂರು ದಿನಗಳ ಕಾಲಾವಕಾಶ ಕೋರಿಕೆ. ರಾಜ್ಯಪಾಲರಿಂದ ನಿರಾಕರಣೆ. ಸರ್ಕಾರ ರಚಿಸಲು ಎನ್ಸಿಪಿಗೆ ರಾಜ್ಯಪಾಲರ ಅವಕಾಶ.

ನವೆಂಬರ್ 12: ತನಗೆ ಅವಕಾಶ ನಿರಾಕರಿಸಿದ ರಾಜ್ಯಪಾಲರ ಕ್ರಮವನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿದ ಶಿವಸೇನಾ.

ನವೆಂಬರ್ 12: ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ.

ನವೆಂಬರ್ 13:ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ಅರ್ಜಿಯಲ್ಲಿ ಶಿವಸೇನಾ ರಾಜ್ಯಪಾಲರ ನಿರ್ಧಾರವನ್ನುಪ್ರಶ್ನಿಸಲಿಲ್ಲ

ನವೆಂಬರ್ 22: ಎನ್ಸಿಪಿ, ಕಾಂಗ್ರೆಸ್ ಮತ್ತು ಶಿವಸೇನಾ ಪಕ್ಷಗಳಿಂದ ‘ಮಹಾರಾಷ್ಟ್ರ ವಿಕಾಸ್ ಅಘಾಡಿ’ ಹೆಸರಿನ ಮೈತ್ರಿಕೂಟ ಘೋಷಣೆ.

ನವೆಂಬರ್ 23: ಶನಿವಾರ ಮುಂಜಾನೆ 5.47ಕ್ಕೆ ರಾಷ್ಟ್ರಪತಿ ಆಡಳಿತ ತೆರವು. ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡಣವೀಸ್ ಮತ್ತು ಉಪಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪ್ರಮಾಣ ವಚನ ಸ್ವೀಕಾರ.

ನವೆಂಬರ್ 23: ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ನಿರ್ಧಾರ ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ ಮೈತ್ರಿಕೂಟ. ಭಾನುವಾರ ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ಭರವಸೆ.

ನವೆಂಬರ್ 24: ರಾಷ್ಟ್ರಪತಿ ಆಳ್ವಿಕೆ ತೆರವುಗೊಳಿಸಿದ ಮಹಾರಾಷ್ಟ್ರ ರಾಜ್ಯಪಾಲರ ಪತ್ರವನ್ನು ಸಲ್ಲಿಸುವಂತೆಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆಸುಪ್ರೀಂ ಕೋರ್ಟ್ ಸೂಚನೆ. ಕೇಂದ್ರ ಸರ್ಕಾರ ಮತ್ತು ಇತರರಿಗೆ ನೊಟೀಸ್ ಜಾರಿ.

ನವೆಂಬರ್ 25: ದೇವೇಂದ್ರ ಫಡಣವೀಸ್ ವಿಶ್ವಾಸಮತ ಯಾಚನೆ ಕುರಿತುಸೋಮವಾರ ಮುಂಜಾನೆ 10.30ಕ್ಕೆ ತೀರ್ಪು ನೀಡಲಾಗುವುದು ಎಂದು ವಿಚಾರಣೆ ಮುಕ್ತಾಯಗೊಳಿಸಿದಸುಪ್ರೀಂ ಕೋರ್ಟ್ ನ್ಯಾಯಪೀಠ.

ನವೆಂಬರ್ 26: ವಿಶ್ವಾಸಮತ ಯಾಚನೆ ಪ್ರಕ್ರಿಯೆಯನ್ನು ನ.27ರ ಸಂಜೆ 5ರ ಒಳಗೆ ಮುಕ್ತಾಯಗೊಳಿಸಬೇಕು. ಪೂರ್ಣ ಪ್ರಕ್ರಿಯೆ ನೇರ ಪ್ರಸಾರವಾಗಬೇಕು ಎಂದು ಮಹಾರಾಷ್ಟ್ರ ರಾಜ್ಯಪಾಲರಿಗೆ ಸುಪ್ರೀಂ ಕೋರ್ಟ್ ಸೂಚನೆ.

ಇನ್ನಷ್ಟು...

ನ.27ರ ಸಂಜೆ 5ರ ಒಳಗೆ ಬಹುಮತ ಸಾಬೀತು ಮಾಡಬೇಕು ಫಡಣವೀಸ್

ಸುಪ್ರೀಂ ಕೋರ್ಟ್ ನೀಡಿದ ಆದೇಶದಲ್ಲೇನಿದೆ?

ಬಹುಮತ ಸಾಬೀತಿಗೆ ನಾವು ಸಿದ್ಧ: ಕೋರ್ಟ್ ತೀರ್ಪಿಗೆ ಬಿಜೆಪಿ ಪ್ರತಿಕ್ರಿಯೆ

ಬಿಜೆಪಿ ಆಟ ಮುಗಿಯಿತು ನಾಳೆ ಬಣ್ಣ ಬಯಲು: ತೀರ್ಪಿಗೆ ಎನ್ಸಿಪಿ, ಕಾಂಗ್ರೆಸ್ ಸ್ವಾಗತ

ಹಗರಣಗಳಲ್ಲಿ ಅಜಿತ್ಗೆ ಕ್ಲೀನ್ ಚಿಟ್ ಪ್ರಶ್ನಿಸಿ ಕೋರ್ಟ್ ಮೊರೆ ಹೋಗಲು ನಿರ್ಧಾರ

ಮಹಾರಾಷ್ಟ್ರ ರಾಜಕೀಯದ 'ಹಗಲು-ರಾತ್ರಿ ಪಂದ್ಯ': ಮಧ್ಯರಾತ್ರಿ ನ ಡೆದದ್ದು ಇಷ್ಟು...

ಕ್ಷಿಪ್ರ ಬೆಳವಣಿಗೆ: ಫಡಣವೀಸ್ 'ಮಹಾ'ಸಿಎಂ, ಅಜಿತ್ ಪವಾರ್ ಉಪಮುಖ್ಯಮಂತ್ರಿ

2006ರ ಗೌಡರ ನಡೆ ನೆನಪಿಸಿದ ಮಹಾರಾಷ್ಟ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.