ನವದೆಹಲಿ: ಈ ವರ್ಷದ ಮೊದಲ ಒಂಭತ್ತು ತಿಂಗಳಲ್ಲಿ ದೇಶದಲ್ಲಿ ನಡೆದ ಪ್ರತಿಕೂಲ ಹವಾಮಾನ ಸಂಬಂಧಿತ ಅವಘಡಗಳಲ್ಲಿ ಒಟ್ಟು 3,238 ಜನರು ಮೃತಪಟ್ಟಿದ್ದಾರೆ.

ದೆಹಲಿಯ ವಿಜ್ಞಾನ ಮತ್ತು ಪರಿಸರ ಚಿಂತಕರ ಕೇಂದ್ರ (ಸಿಎಸ್ಇ) ಈ ಬಗ್ಗೆ ವರದಿ ಬಿಡುಗಡೆ ಮಾಡಿದೆ. ಈ ಒಂಭತ್ತು ತಿಂಗಳ 274 ದಿನಗಳ ಪೈಕಿ 255 ದಿನಗಳು ಭಾರತವು ಪ್ರತಿಕೂಲ ಹವಾಮಾನದ ಪರಿಣಾಮಗಳನ್ನು ಎದುರಿಸಿದೆ ಎಂದು ಉಲ್ಲೇಖಿಸಿದೆ.

ಮೊದಲ ಒಂಭತ್ತು ತಿಂಗಳಲ್ಲಿ 3,238 ಜನರು ಸತ್ತಿದ್ದಾರೆ. ಕಳೆದ ವರ್ಷ ಇದೇ ಅವಧಿಯಲ್ಲಿ 235 ದಿನ ಪ್ರತಿಕೂಲ ಹವಾಮಾನ ಬಾಧಿಸಿತ್ತು. 2,923 ಜನರು ಮೃತಪಟ್ಟಿದ್ದರು.

ಅಪೂರ್ಣ ಅಂಕಿ ಅಂಶಗಳ ಪರಿಣಾಮ ಸಾರ್ವಜನಿಕ ಆಸ್ತಿ ಹಾನಿ, ಬೆಳೆ ಹಾನಿ ಕುರಿತಂತೆ ಈಗಿನ ನಷ್ಟದ ಅಂದಾಜು ಕೂಡಾ ಕಡಿಮೆ ಇದೆ ಎಂದೂ ವರದಿ ಉಲ್ಲೇಖಿಸಿದೆ.

ಮಧ್ಯಪ್ರದೇಶ ರಾಜ್ಯವು ಈ ವರ್ಷದ ಒಂಭತ್ತು ತಿಂಗಳಲ್ಲಿ ಗರಿಷ್ಠ ಅಂದರೆ 176 ದಿನ ಪ್ರತಿಕೂಲ ಹವಾಮಾನದ ಪರಿಣಾಮಗಳನ್ನು ಎದುರಿಸಿದೆ. ಕೇರಳದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಅಂದರೆ 550 ಮಂದಿ ಮೃತಪಟ್ಟಿದ್ದಾರೆ.

ಮಧ್ಯಪ್ರದೇಶದಲ್ಲಿ 353, ಅಸ್ಸಾಂನಲ್ಲಿ 256 ಮಂದಿ ಸತ್ತಿದ್ದಾರೆ. ಆಂಧ್ರಪ್ರದೇಶದಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಮನೆಗಳು (85,806) ಹಾನಿಗೊಂಡಿವೆ. ಬೆಳೆಹಾನಿಯನ್ನು ಗಮನಿಸುವುದಾದರೆ ಮಹಾರಾಷ್ಟ್ರದಲ್ಲಿ ಗರಿಷ್ಠ ಅಂದರೆ ಶೇ 60ರಷ್ಟು ಬೆಳೆಹಾನಿಯಾಗಿದೆ.

ಈ ಅವಧಿಯಲ್ಲಿ ಒಟ್ಟು 27 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಪ್ರತಿಕೂಲ ಹವಾಮಾನದ ಪರಿಣಾಮ ಎದುರಿಸಿವೆ. ಪ್ರಮುಖವಾಗಿ ಕರ್ನಾಟಕ, ಕೇರಳ, ಉತ್ತರ ಪ್ರದೇಶ ರಾಜ್ಯಗಳು ಶೇ 40ಕ್ಕೂ ಹೆಚ್ಚು ಪರಿಣಾಮವನ್ನು ಎದುರಿಸಿವೆ.

2024ರಲ್ಲಿ ಈವರೆಗೆ ತಾಪಮಾನಕ್ಕೆ ಸಂಬಂಧಿಸಿ ಹಲವು ದಾಖಲೆಗಳು ನಿರ್ಮಾಣವಾಗಿವೆ. ಈ ವರ್ಷದ ಜನವರಿ, 1901ರ ನಂತರ ಒಣ ತಿಂಗಳು ಎಂದು ದಾಖಲಾಗಿದೆ. ಫೆಬ್ರುವರಿ ತಿಂಗಳಲ್ಲಿ, 123 ವರ್ಷದ ತರುವಾಯ 2ನೇ ಅತ್ಯಧಿಕ ಕನಿಷ್ಠ ತಾಪಮಾನ ದಾಖಲಾಗಿದೆ. ಜುಲೈ, ಆಗಸ್ಟ್, ಸೆಪ್ಟೆಂಬರ್ನಲ್ಲೂ 1901ರ ಬಳಿಕ ಅತ್ಯಧಿಕ ಕನಿಷ್ಠ ತಾಪಮಾನ ದಾಖಲಾಗಿದೆ.

ಈ ಅಂಕಿ– ಅಂಶಗಳು ತಾಪಮಾನ ಬದಲಾವಣೆಯ ಪ್ರತಿಕೂಲ ಪರಿಣಾಮಗಳನ್ನು ಬಿಂಬಿಸಲಿವೆ ಎನ್ನುತ್ತಾರೆ ಸಿಎಸ್ಇ ಪ್ರಧಾನ ನಿರ್ದೇಶಕ ಸುನೀತಾ ನಾರಾಯಣ್. ‘ಈ ಹಿಂದೆ ಶತಮಾನಕ್ಕೆ ಒಮ್ಮೆ ಸಂಭವಿಸುತ್ತಿದ್ದ ಸಂಗತಿಗಳು ಈಗ ಐದು ವರ್ಷ, ಅದಕ್ಕೂ ಕಡಿಮೆ ಅವಧಿಯಲ್ಲಿಯೇ ಸಂಭವಿಸುತ್ತಿವೆ’ ಎಂದು ಹೇಳುತ್ತಾರೆ.

ವರದಿಯ ಪ್ರಕಾರ, ಪ್ರವಾಹದಿಂದಾಗಿಯೇ 1,376 ಜನರು ಸತ್ತಿದ್ದಾರೆ. ಸಿಡಿಲು ಮತ್ತು ಚಂಡಮಾರುತದ ಪರಿಣಾಮಗಳಿಗೆ ಬಲಿಯಾದವರ ಸಂಖ್ಯೆ 1,021.

ವರದಿಯ ಲೇಖಕರಲ್ಲಿ ಒಬ್ಬರಾದ ರಜಿತ್ ಸೆನ್ಗುಪ್ತಾ, ‘ಬಿಸಿಗಾಳಿಗೆ ಈ ಅವಧಿಯಲ್ಲಿ 210 ಜನರು ಸತ್ತಿದ್ದಾರೆ. ಅಧಿಕ ಉಷ್ಣಾಂಶದ ಪರಿಣಾಮ ಆರೋಗ್ಯ ಸ್ಥಿತಿಯ ಮೇಲೂ ಪ್ರತಿಕೂಲ ಪರಿಣಾಮವಾಗಿದೆ. ಉತ್ತರ ಭಾರತದಲ್ಲಿ ಇದರ ಪರಿಣಾಮ ಹೆಚ್ಚಿತ್ತು’ ಎನ್ನುತ್ತಾರೆ.

Cut-off box - ಹಾನಿ: ಯಾವುದು ಎಷ್ಟು? ವಿವರ;2024;2023 ಜೀವ ಹಾನಿ;3238;2923 ಬೆಳೆ ಹಾನಿ; 32 ಲಕ್ಷ ಹೆಕ್ಟೇರ್;18.4 ಲಕ್ಷ ಹೆಕ್ಟೇರ್ ಮನೆ ಕಟ್ಟಡ ಜಖಂ;235862;80293 ಮನುಷ್ಯಯೇತರ ಸಾವು; 9457 ಜಾನುವಾರು;92519 ಪ್ರಾಣಿಗಳು ಸಾವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.