ಪುಣೆ: ಸಂಸ್ಥೆ ನೀಡಿದ ಅತಿಯಾದ ಕೆಲಸದ ಒತ್ತಡದಿಂದಾಗಿ ಮಗಳು ಮೃತಪಟ್ಟಿದ್ದಾರೆ ಎಂದು ತಾಯಿಯೊಬ್ಬರು ಆರೋಪಿಸಿ, ಕಂಪನಿಯ ಮುಖ್ಯಸ್ಥರಿಗೆ ಪತ್ರ ಬರೆದಿದ್ದಾರೆ.

ಅನ್ನಾ ಸಬಸ್ಟೆಯನ್ ಪೆರಾಯಿಲ್ (26) ಮೃತ ಉದ್ಯೋಗಿ. ಇವರು ಪುಣೆಯ ಬಹುರಾಷ್ಟ್ರೀಯ ಕಂಪನಿ Ernst & Young (EY)ಯಲ್ಲಿ ಚಾರ್ಟೆಡ್ ಅಕೌಂಟಂಟ್ ಆಗಿ ನಾಲ್ಕು ತಿಂಗಳ ಹಿಂದೆ ಉದ್ಯೋಗಕ್ಕೆ ಸೇರಿದ್ದರು ಎಂದು ಹೇಳಲಾಗಿದೆ.

ಕಂಪನಿಯ ಮುಖ್ಯಸ್ಥ ರಾಜೀವ್ ಮೆಮಾನಿ ಅವರಿಗೆ ಮಗಳ ಸಾವಿನ ಕುರಿತು ಪತ್ರ ಬರೆದಿರುವ ತಾಯಿ ಅನಿತಾ ಅಗಸ್ಟೀಸ್, ‘ತಮ್ಮ ಮಗಳು ಮೊದಲ ಕೆಲಸ ಎಂದು ಉತ್ಸಾಹದಲ್ಲಿಯೇ ಕಂಪನಿಗೆ ಸೇರಿದ್ದಳು. ಆದರೆ ನಾಲ್ಕು ತಿಂಗಳಲ್ಲಿ ಅತಿಯಾದ ಕೆಲಸದ ಹೊರೆ ತಡೆಯಲಾರದೆ ಮೃತಪಟ್ಟಿದ್ದಾಳೆ. ಪಿಜಿಯಿಂದ ಮನೆಗೆ ಬಂದಾಗಲೆಲ್ಲಾ ಅತಿಯಾದ ಸುಸ್ತಿನಿಂದ ಬಳಲುತ್ತಿದ್ದಳು. ದಿನಕಳೆದಂತೆ ಆಕೆ ಆತಂಕ, ಒತ್ತಡ, ನಿದ್ರಾಹೀನತೆಗೆ ಒಳಗಾಗಿದ್ದಳು. ಆದರೂ ಕೆಲಸದಲ್ಲಿ ಯಶಸ್ಸು ಕಾಣಬೇಕೆಂದು ಒತ್ತಡವನ್ನು ಸಹಿಸಿ ಕೆಲಸ ಮಾಡುತ್ತಿದ್ದಳು. ಆಕೆಯ ವ್ಯವಸ್ಥಾಪಕರು ಕೂಡ ರಾತ್ರಿ ಕೆಲಸ ನೀಡಿ, ಬೆಳಗಿನೊಳಗೆ ಮುಗಿಸಬೇಕೆಂದು ಗಡುವು ನೀಡುತ್ತಿದ್ದರು. ಹೀಗಾಗಿ ಅನ್ನಾ, ರಾತ್ರಿ ಹಗಲೆನ್ನದೆ ವಾರಾಂತ್ಯದಲ್ಲೂ ಕೆಲಸ ಮಾಡುತ್ತಿದ್ದಳು. ಇದರಿಂದಾಗಿಯೇ ಆಕೆ ಮೃತಪಟ್ಟಿದ್ದಾಳೆ’ ಎಂದು ದೂರಿದ್ದಾರೆ ಎಂದು ವರದಿಯಾಗಿದೆ.

ಅನ್ನಾ ಸಾವು ಹೇಗಾಯಿತು ಎನ್ನುವ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಅಲ್ಲದೆ ಕಂಪನಿ ಕೂಡ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.