ನವದೆಹಲಿ:‘ಸಹಜೀವನ ನಡೆಸುವವರ ಅಥವಾ ಲೈಂಗಿಕ ಅಲ್ಪಸಂಖ್ಯಾತರ ನಡುವಣ ಸಂಬಂಧಗಳು ಕೌಟುಂಬಿಕ ಸಂಬಂಧಗಳ ಸ್ವರೂಪವನ್ನು ಒಳಗೊಳ್ಳಬಹುದು. ಅಸಾಂಪ್ರದಾಯಿಕ ಕುಟುಂಬ ಘಟಕದ ಸ್ವರೂಪವೂ ಸಾಂಪ್ರದಾಯಿಕ ಪ್ರತಿರೂಪದಂತೆಯೇ ನೈಜವಾಗಿರಲಿದೆ. ಅದು ಕಾನೂನಿ ನಡಿ ರಕ್ಷಣೆ ಪಡೆಯಲು ಅರ್ಹವಾಗಿರಲಿದೆ’ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

‘ಅಪ್ಪ, ಅಮ್ಮ ಮತ್ತು ಮಕ್ಕಳನ್ನು ಒಳಗೊಂಡಿರುವುದೇ ಕುಟುಂಬ ಎಂಬ ಕಲ್ಪನೆ ಸಮಾಜದಲ್ಲಿದೆ. ಕಾನೂನು ಕೂಡ ಇದನ್ನೇ ಪ್ರತಿಪಾದಿಸುತ್ತದೆ. ಕೆಲ ಸಂದರ್ಭಗಳು ಒಬ್ಬರ ಕೌಟುಂಬಿಕ ರಚನೆಯಲ್ಲಿ ಬದಲಾವಣೆಗೆ ಕಾರಣವಾಗಬಹುದು. ಅನೇಕ ಕುಟುಂಬಗಳು ಈ ಬದಲಾವಣೆಯನ್ನು ಒಪ್ಪಿಕೊಳ್ಳುವುದಕ್ಕೆ ತಯಾರಿಲ್ಲ ಎಂಬುದು ಸತ್ಯ’ ಎಂದು ನ್ಯಾ. ಡಿ.ವೈ.ಚಂದ್ರಚೂಡ್ ಮತ್ತು ಎ.ಎಸ್.ಬೋಪಣ್ಣ ಅವರಿದ್ದ ಪೀಠ ತಿಳಿಸಿದೆ.

ಸಾಮಾಜಿಕ ಕಾರ್ಯಕರ್ತರು, ಎಲ್‌ಜಿಬಿಟಿ ಸಮುದಾಯಕ್ಕೆ ಸೇರಿದವರ ವಿವಾಹ ಹಾಗೂ ಇತರ ಸಮಸ್ಯೆಗಳ ಕುರಿತು ಧ್ವನಿ ಎತ್ತಿರುವ ಸಂದರ್ಭದಲ್ಲಿ ನ್ಯಾಯಾಲಯವು ಹೀಗೆ ಅಭಿಪ್ರಾಯ ಪಟ್ಟಿರುವುದು ಮಹತ್ವದ್ದೆನಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.