ಕೊಲ್ಲಂ (ಕೇರಳ): ಖ್ಯಾತ ಚಿತ್ರ ನಿರ್ದೇಶಕ ವಿ.ಕೆ. ಪ್ರಕಾಶ್ ಅವರಿಗೆ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಕೇರಳ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಪ್ರಕಾಶ್ ಅವರನ್ನು ಎರಡು ದಿನ ವಿಚಾರಣೆಗೆ ಗುರಿಪಡಿಸಿದ್ದ ಪಳ್ಳಿತ್ತೋಟಂ ಠಾಣೆಯ ಪೊಲೀಸರು, ಹೈಕೋರ್ಟ್ ನಿರ್ದೇಶನಕ್ಕೆ ಅನುಗುಣವಾಗಿ ಜಾಮೀನು ನೀಡಿದ್ದಾರೆ.

ಪ್ರಕಾಶ್ ಅವರು 2022ರ ಏಪ್ರಿಲ್‌ನಲ್ಲಿ ತನಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಮಹಿಳೆಯೊಬ್ಬರು ದೂರಿದ್ದರು. ಈ ಮಹಿಳೆಯು ಸಿನಿಮಾಗಳಿಗೆ ಚಿತ್ರಕಥೆ ಬರೆಯುವ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಿನಿಮಾ ಚಿತ್ರಕಥೆಯೊಂದನ್ನು ವಿವರಿಸಲು ಪ್ರಕಾಶ್ ಅವರ ಬಳಿ ತೆರಳಿದ್ದಾಗ ಈ ದೌರ್ಜನ್ಯ ನಡೆದಿತ್ತು ಎಂದು ಮಹಿಳೆ ಆರೋಪಿಸಿದ್ದಾರೆ.

ನ್ಯಾಯಮೂರ್ತಿ ಕೆ. ಹೇಮಾ ಸಮಿತಿಯ ವರದಿಯು ಬಹಿರಂಗವಾದ ನಂತರದಲ್ಲಿ ಈ ಮಹಿಳೆಯು, ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಆದರೆ ಆರೋಪಗಳನ್ನು ಪ್ರಕಾಶ್ ಅವರು ಅಲ್ಲಗಳೆದಿದ್ದಾರೆ. ಕಥೆಯು ಸಿನಿಮಾ ಮಾಡಲು ಸೂಕ್ತವಾಗಿಲ್ಲ ಎಂದು ಆ ಮಹಿಳೆಗೆ ಹೇಳಿದ ನಂತರ ತಮ್ಮ ಮೇಲೆ ಸುಳ್ಳು ಆರೋಪ ಹೊರಿಸಲಾಗಿದೆ ಎಂದು ಪ್ರಕಾಶ್ ಹೇಳಿದ್ದಾರೆ.

ಕೋರ್ಟ್ ವಿಧಿಸುವ ಕಠಿಣ ಷರತ್ತುಗಳನ್ನು ಪಾಲಿಸಲು ಹಾಗೂ ತನಿಖಾಧಿಕಾರಿಯ ಜೊತೆ ಸಹಕರಿಸಲು ಆರೋಪಿಯು ಸಿದ್ಧವಿರುವಾಗ, ಅವರನ್ನು ಬಂಧಿಸಿ ವಿಚಾರಣೆಗೆ ಗುರಿಪಡಿಸುವ ಅಗತ್ಯ ಇಲ್ಲ ಎಂದು ಕೇರಳ ಹೈಕೋರ್ಟ್ ಜಾಮೀನು ನೀಡುವಾಗ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.