ಮುಂಬೈ: ಇಲ್ಲಿನ ಲೋಯರ್ ಪರೇಲ್ ಪ್ರದೇಶದಲ್ಲಿ ನಿರ್ಮಾಣವಾದ ಮೇಲ್ಸೇತುವೆಯನ್ನು ಸ್ಥಳೀಯ ಆಡಳಿತದ ಅನುಮತಿ ಪಡೆಯದೆ ಉದ್ಘಾಟಿಸಿದ ಆರೋಪದ ಮೇಲೆ ಶಿವಸೇನಾ (ಉದ್ಧವ್ ಠಾಕ್ರೆ ಬಣ) ಶಾಸಕ ಆದಿತ್ಯ ಠಾಕ್ರೆ ಹಾಗೂ ಇತರರ ವಿರುದ್ಧ ಮುಂಬೈ ಪೊಲೀಸರು ಶನಿವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೃಹನ್ ಮುಂಬೈ ಮಹಾನಗರಪಾಲಿಕೆ ಅಧಿಕಾರಿಯೊಬ್ಬರು ನೀಡಿದ ದೂರಿನ ಮೇರೆಗೆ ಆದಿತ್ಯ ಠಾಕ್ರೆ ವಿರುದ್ಧ ಪ್ರಕರಣ ದಾಖಲಾಗಿದೆ. ಬಿಎಂಸಿ ಆಡಳಿತದ ಅನುಮತಿ ಪಡೆಯದೆ ಆದಿತ್ಯ ಠಾಕ್ರೆ, ಉದ್ಧವ್ ಬಣದ ಶಾಸಕರಾದ ಸಚಿನ್ ಅಹಿರ್ ಮತ್ತು ಸುನಿಲ್ ಶಿಂದೆ, ಮಾಜಿ ಮೇಯರ್ಗಳಾದ ಕಿಶೋರಿ ಪೆಡ್ನೆಕರ್ ಮತ್ತು ಸ್ನೇಹಲ್ ಅಂಬೇಕರ್ ಹಾಗೂ ಇತರ 15–20 ಮಂದಿ ಮೇಲ್ಸೇತುವೆಯನ್ನು ಉದ್ಘಾಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂಬುದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಶಾಸಕ ಆದಿತ್ಯ ಠಾಕ್ರೆ, ‘ಎರಡು ವಾರಗಳ ಹಿಂದೆ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡಿದೆ. ಆದರೆ, ಮುಖ್ಯಮಂತ್ರಿ ಏಕನಾಥ ಶಿಂದೆ ಅವರಿಗೆ ಸಮಯ ಇಲ್ಲದೆ ಇರುವುದರಿಂದ ಈ ಮೇಲ್ಸೇತುವೆಯನ್ನು ಜನರ ಬಳಕೆಗೆ ಮುಕ್ತ ಮಾಡಿರಲಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.