ನವದೆಹಲಿ: ಪೇಟಿಎಂ ಪೇಮೆಂಟ್ ಬ್ಯಾಂಕ್‌ಗೆ ಭಾರತ ಹಣಕಾಸು ಗುಪ್ತಚರ ಘಟಕ (FIU-IND) ₹5.49 ಕೋಟಿ ದಂಡ ವಿಧಿಸಿದೆ.

ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಬಾಧ್ಯತೆಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ದಂಡ ವಿಧಿಸಲಾಗಿದೆ ಎಂದು ಹಣಕಾಸು ಸಚಿವಾಲಯ ಶುಕ್ರವಾರ ತಿಳಿಸಿದೆ.

ಕಾನೂನು ನಿರ್ದೇಶನಾಲಯ ಸಂಸ್ಥೆ ನೀಡಿದ ನಿಖರ ಮಾಹಿತಿಯ ಆಧಾರದ ಮೇಲೆ ಹಣಕಾಸು ಗುಪ್ತಚರ ಘಟಕ ಈ ಕ್ರಮ ಕೈಗೊಂಡಿದೆ.

ಆನ್‌ಲೈನ್ ಜೂಜಿನಂತಹ ಕಾನೂನುಬಾಹಿರ ಚಟುವಟಿಕೆಯ ಮೂಲಕ ಹಣ ಸಂಗ್ರಹ ಮಾಡುತ್ತಿದೆ ಎಂದು ಹೇಳಲಾಗಿದೆ. ಈ ರೀತಿಯ ಹಣವನ್ನು ಪೇಟಿಎಂ ಪೇಮೆಂಟ್ ಬ್ಯಾಂಕ್ ಲಿಮಿಟೆಡ್‌ನೊಂದಿಗೆ ನಿರ್ವಹಿಸುವ ಬ್ಯಾಂಕ್ ಖಾತೆಗಳ ಮೂಲಕ ರವಾನಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಫೆಬ್ರುವರಿ 15 ರಂದು ದಂಡವನ್ನು ವಿಧಿಸುವ ತನ್ನ ಆದೇಶವನ್ನು ಎಫ್ಐಯು ಅಂಗೀಕರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.